ಬೆಂಗಳೂರು: ಸಮುದಾಯವಾರು ಅಭಿವೃದ್ಧಿ ನಿಗಮ ಮುಂದುವರಿದಿದ್ದು, ಕರ್ನಾಟಕ ನೇಕಾರ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರಕಾರ ಆದೇಶ ಹೊರಡಿಸಿದೆ.
Advertisement
ನೇಯ್ಗೆ, ಕುರುಹಿನ ಶೆಟ್ಟಿ, ಬಿಳಿಮಗ, ತೊಗಟ, ತೊಗಟರು, ತೊಗಟಿಗ, ತೊಗಟವೀರ, ತೊಗಟಗೇರ, ತೊಗಟವೀರ ಕ್ಷತ್ರೀಯ, ತೊಗಜ, ಪುಷ್ಪಾಂಜಲಿ, ಸೋಣಿಗ, ಜಂಖಾನ, ಐರಿ, ಆವಿರ್, ಸಾಲೆ, ಪಟ್ಟಸಾಲೆ, ಪದ್ಮಸಾಲೆ, ಪದ್ಮಶಾಲಿ, ಪದ್ಮಸಾಲಿ, ಸಾಲಿ, ಪಟ್ಟಸಾಲಿ, ಕೈಕೋಳನ್, ಸೆಂಗುಂದರ್, ನೇಯ್ಕರ್, ಜಾಡರ್, ಜಾಂದ್ರ, ಸ್ವಕುಳಸಾಳಿ, ಸ್ವಕುಳ ಸಾಳೆ ಸಮುದಾಯಗಳ ಅಭಿವೃದ್ಧಿಗೆ ಕರ್ನಾಟಕ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ.