Advertisement

ಚರ್ಚೆಗೆ ವಿಪಕ್ಷಗಳ ಬೇಡಿಕೆ ತಿರಸ್ಕೃತ : ಸಂಸತ್ ಕಲಾಪ ಬಹಿಷ್ಕರಿಸಿದ ಕಾಂಗ್ರೆಸ್

08:21 PM Dec 14, 2022 | Team Udayavani |

ನವದೆಹಲಿ : ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಡಿ.9ರಂದು ಭಾರತ ಮತ್ತು ಚೀನಾ ಸೇನೆಗಳ ನಡುವೆ ನಡೆದ ಘರ್ಷಣೆ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಬುಧವಾರ (ಡಿ.14) ವಾಕ್‌ಔಟ್ ನಡೆಸಿದವು.

Advertisement

ಚೀನಾ ವಿಚಾರದಲ್ಲಿ ಚರ್ಚೆಗೆ ವಿಪಕ್ಷಗಳ ಬೇಡಿಕೆ ತಿರಸ್ಕೃತಗೊಂಡಿದ್ದು, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ವಾಕ್‌ಔಟ್‌ಗೆ ಕಾರಣವಾಯಿತು. ಇಡೀ ವಿಶ್ವವೇ ಭಾರತದ ಜೊತೆ ನಿಂತಿರುವ ಸಂದರ್ಭದಲ್ಲಿ ವಿಪಕ್ಷಗಳು ಸೇನೆಯನ್ನು ಅವಮಾನಿಸುವ ಕೆಲಸ ಮಾಡುತ್ತಿವೆ ಮತ್ತು ದೇಶವನ್ನು ಟೀಕಿಸುತ್ತಿವೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕಿಡಿ ಕಾರಿದ್ದಾರೆ.

ಚರ್ಚೆಯನ್ನು ತಿರಸ್ಕರಿಸಿದ ಕಾರಣ, ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಕಲಾಪ ಬಹಿಷ್ಕರಿಸಿ ಹೊರನಡೆದರು. ಇನ್ನು ಹಲವು ವಿರೋಧ ಪಕ್ಷಗಳೂ ಕಾಂಗ್ರೆಸ್ ಬೆಂಬಲಕ್ಕೆ ಬಂದು ಹೊರನಡೆದವು.

ದೇಶದಲ್ಲಿ ಸಂಸದೀಯ ಜವಾಬ್ದಾರಿ ಹಾಗೂ 1962ರ ಯುದ್ಧದ ಕುರಿತು ಸದನದಲ್ಲಿ ನಡೆದ ಚರ್ಚೆಯನ್ನು ಉಲ್ಲೇಖಿಸಿ ಈ ವಿಚಾರವನ್ನು ಸಂಸತ್ತಿನಲ್ಲಿ ಚರ್ಚಿಸಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಯಾವುದೇ ಪ್ರಶ್ನೆಗಳನ್ನು ತೆಗೆದುಕೊಳ್ಳದೆ ಅಥವಾ ಇತರರ ಮಾತುಗಳನ್ನು ಕೇಳದೆ ಸಣ್ಣ ಹೇಳಿಕೆ ನೀಡುವುದು ಪ್ರಜಾಪ್ರಭುತ್ವವಲ್ಲ ಎಂದರು.

ಚರ್ಚೆಯ ಬೇಡಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಇಡೀ ಜಗತ್ತು ಭಾರತದ ಜೊತೆ ನಿಂತಾಗ ವಿರೋಧ ಪಕ್ಷಗಳು ಸೇನೆ ಮತ್ತು ದೇಶವನ್ನು ಟೀಕೆ ಮಾಡುವ ಕೆಲಸ ಮಾಡುತ್ತಿರುವುದು ಭಾರತದ ದೌರ್ಭಾಗ್ಯ ಎಂದು ಹೇಳಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿಯೂ ವಿರೋಧ ಪಕ್ಷಗಳು ಅದನ್ನೇ ಮಾಡಿದ್ದವು ಎಂದು ಆರೋಪಿಸಿದ್ದಾರೆ.

Advertisement

ಪ್ರತಿಪಕ್ಷಗಳ ಚರ್ಚೆಯ ಬೇಡಿಕೆಯನ್ನು ತಿರಸ್ಕರಿಸಿದ ಗಿರಿರಾಜ್ ಸಿಂಗ್, ರಕ್ಷಣಾ ಸಚಿವರು ಈಗಾಗಲೇ ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ, ಆದ್ದರಿಂದ ಹೆಚ್ಚಿನ ಚರ್ಚೆ ಅಗತ್ಯವಿಲ್ಲ ಎಂದು ಹೇಳಿದರು. ಇದು ಬಜೆಟ್‌ಗೆ ಸಂಬಂಧಿಸಿದ ವಿಷಯವಲ್ಲ, ಬದಲಿಗೆ ದೇಶದ ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯ ಎಂದು ಅವರು ವಾದಿಸಿದರು. ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೈನಿಕರು ಚೀನಿ ಸೈನಿಕರನ್ನು ಓಡಿಸಿದರು ಎಂದು ಅಮೆರಿಕ ಭಾರತವನ್ನು ಹೊಗಳುತ್ತಿದೆ, ಹಾಗಾಗಿ ಈ ಸಮಯದಲ್ಲಿ ಮೋದಿ ವಿರುದ್ಧ ಪ್ರತಿಪಕ್ಷಗಳ ಟೀಕೆ ಅನಗತ್ಯವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next