Advertisement

ಟಿಪ್ಪು ಜಯಂತಿಗೆ ತೀವ್ರ ವಿರೋಧ

12:22 PM Nov 10, 2018 | |

ವಿಜಯಪುರ: ಮೂಲಭೂತವಾದಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಗೆ ವಿರೋಧಿಸಿ ಹಿಂದೂಪರ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ. ವಿಶ್ವ ಹಿಂದೂ ಪರಿಷತ್‌, ಭಜರಂಗದಳ ವಿಜಯಪುರ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ಸಂಘಟನೆ ಪ್ರಮುಖರು, ರಾಜ್ಯ ಸರ್ಕಾರ ನ. 10ರಂದು ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಗೆ ನಿರ್ಧರಿಸಿರುವ ಕ್ರಮ ದೇಶದ ಜನತೆಗ ಎಸಗುತ್ತಿರುವುದು ಅಪಮಾನ. ತನ್ನ ಅಧಿಕಾರವಧಿಯಲ್ಲಿ ಟಿಪ್ಪು ಸುಲ್ತಾನ್‌ ಲಕ್ಷಾಂತರ ಹಿಂದೂಗಳ ಹತ್ಯೆ ನಡೆಸಿದ, ಹಿಂದೂಗಳ ಪವಿತ್ರ ದೇವಾಲಯ ನಾಶ ಮಾಡಿದ್ದಾನೆ. ಹಿಂದೂಗಳನ್ನು ಬಲವಂತದಿಂದ ಮತಾಂತರ ಮಾಡಿದ ಮತಾಂಧ ಕ್ರೂರಿಯಾಗಿದ್ದ ಎಂದು ಕಿಡಿ ಕಾರಿದರು.

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರೀಯವಾದಿ ಆಗಿದ್ದ ಎಂಬುದಕ್ಕೆ ಯಾವ ಸಾಕ್ಷಿ-ಪುರಾವೆಗಳು ಇಲ್ಲ. ಮತಾಂಧತೆಯ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಆದರೂ ಆತನನ್ನು ದೇಶಭಕ್ತ ಎಂಬಂತೆ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿರುವುದು ಹಾಸ್ಯಾಸ್ಪದ ಎನಿಸಿದೆ ಎಂದು ಜರಿದಿದ್ದಾರೆ.

ಟಿಪ್ಪು ಬರೆದ ಪತ್ರಗಳಲ್ಲಿ ತಾನು ಅಮಾನುಷವಾಗಿ ನಡೆಸಿರುವ ಹತ್ಯೆಗಳ ಬಗ್ಗೆ, ಸಾವಿರಾರು ಸಂಖ್ಯೆ ಹಿಂದೂಗಳು ಮತ್ತು ಕ್ರಿಶ್ಚಿಯರನ್ನು ಕೊಂದು, ಮತಾಂತರಿಸಿರುವ ಬಗ್ಗೆ ವಿವರಿಸಿದ್ದಾನೆ. ಪರ್ಷಿಯಾ, ಅಫಘಾಸ್ತಾನ್‌ ಟರ್ಕಿ ಮೊದಲಾದ ಮುಸ್ಲಿಂ ದೇಶಗಳ ರಾಜರುಗಳಿಗೆ ಬರೆದಿರುವ ಪತ್ರಗಳಲ್ಲಿ ಭಾರತದ ಮೇಲೆ ಆಕ್ರಮಣ ನಡೆಸಿ ಇಸ್ಲಾಂ ರಾಜ್ಯವನ್ನಾಗಿ ಪರಿವರ್ತಿಸಲು ಕೋರಿದ್ದ. ಅದಕ್ಕೆ ನಾನು ಸಂಪೂರ್ಣ ಸಹಕಾರ ನೀಡುವುದಾಗಿಯೂ ಘೋಷಿಸಿಕೊಂಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಟಿಪ್ಪು ಭಂಜನಗೊಳಿಸಿರುವ ದೇವಸ್ಥಾನಗಳ ಸಂಖ್ಯೆ ಎಂಟು ಸಾವಿರಕ್ಕೂ ಹೆಚ್ಚು, ಮಲಬಾರಿ ಹತ್ಯಾಕಾಂಡ ಮತ್ತು ದೇವಟ್ಟಿಪರಂಬು ಹತ್ಯಾಕಾಂಡ, ಇತಿಹಾಸದಲ್ಲಿಯೇ ಯಾರೂ ಕಂಡರಿಯದಂತಹ ನರಮೇಧಗಳಾಗಿವೆ. ರಾಣಿ ಲಕ್ಷ್ಮೀ ಅಮ್ಮಣ್ಣಿ ಸೇರಿದಂತೆ ಮೈಸೂರು ರಾಜ ಮನೆತನದವರನ್ನು ಗೃಹ ಬಂಧನದಲ್ಲಿರಿಸಿ ಚಿತ್ರಹಿಂಸೆಗೆ ಗುರಿಪಡಿಸಿದ್ದ. ತನ್ನ ರಾಜ್ಯದ ದಿವಾನರಾಗಿದ್ದ ಪೂರ್ಣಯ್ಯನವರನ್ನೇ ಟಿಪ್ಪು
ಮತಾಂತರ ಹೊಂದಲು ಸೇರಿಸಿಕೊಂಡಿದ್ದ.  ಪೂರ್ಣಯ್ಯನವರ ಸೋದರನ ಮಗಳನ್ನು ಬಲಾತ್ಕಾರದಿಂದ ಮತಾಂತರಿಸಿ ತನ್ನ ಜನಾನಾ ಸೇರಿಸಿಕೊಂಡಿದ್ದ ಎಂದು ಆರೋಪಿಸಿದರು. ಪ್ರವೀಣ ಹೌದೆ, ಈರಣ್ಣ ಹಳ್ಳಿ, ಶ್ರೀಧರ ಬಿಜ್ಜರಗಿ, ಹರೀಶ ಘಾಟಗೆ, ಆನಂದ ಪತ್ತಾರ, ಸನಿ ಚವ್ಹಾಣ, ಶೇಶಿ ಬಿಜ್ಜರಗಿ, ಶ್ರೀನಿವಾಸ ವಡ್ಡರ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next