Advertisement
ರಾಜ್ಯದಲ್ಲಿ 1964ರಿಂದ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, 1975ರಿಂದ ಸರ್ವಧರ್ಮದವರಿಗೂ ಅನ್ವಯಿಸುವಂತೆ ಗೋ ಬಲಿ (ಪ್ರಾಣಿಬಲಿ – ಕುರ್ಬಾನಿ) ನಿಷೇಧ ವಿದೆ. ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆಯಡಿ ರಾಜ್ಯದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಆದರೆ ಈ ನಡುವೆ ಮುಸ್ಲಿಂ ಒಕ್ಕೂಟವು ಕರ್ನಾಟಕದಲ್ಲಿ ಹೊಸತಾಗಿ ಗೋಹತ್ಯಾ ನಿಷೆೇಧ ಕಾನೂನು ಜಾರಿಗೆ ಬರ ಬೇಕೆಂದು ಒತ್ತಾಯಿಸುವುದು ಮತ್ತ್ತು ಅದಕ್ಕೆ ಮುಸ್ಲಿಂ ಸಂಘಟನೆಗಳು ಬೆಂಬಲ ನೀಡುವುದಾಗಿ ಹೇಳಿಕೆೆ ನೀಡಿರುವುದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಯತ್ನವಾಗಿದೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದು ಕಡೆ ಸಾಮಾಜಿಕ ಸಾಮ ರಸ್ಯಕ್ಕೆ ಗೋಹತ್ಯೆ ನಿಷೇಧ ಕಾನೂನನ್ನು ಬೆಂಬಲಿಸುವ ಹೇಳಿಕೆ, ಇನ್ನೊಂದು ಕಡೆ ತಾಲೂಕಿಗೊಂದು ಕಸಾಯಿಖಾನೆ ತೆರೆಯ ಬೇಕೆಂದು ಒತ್ತಾಯಿಸುತ್ತಿರುವ ಮುಸ್ಲಿಮ್ ಒಕ್ಕೂಟದ ಹೇಳಿಕೆ ಖಂಡನೀಯ. ಜಿಲ್ಲೆಯಲ್ಲಿ ನಿರಂತರವಾಗಿ ಗೋವು ಗಳ ಹತ್ಯೆ, ಗೋವುಗಳ ಕಳ್ಳತನ ಮತ್ತು ಅಕ್ರಮ ಕಸಾಯಿಖಾನೆಗಳು ನಡೆ ಯುತ್ತಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ಆಗುತ್ತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಹೊಸದಾಗಿ ಕಸಾಯಿಖಾನೆ ತೆರೆಯಲು ಬಿಡುವುದಿಲ್ಲ ಎಂದಿದ್ದಾರೆ. ಜಾನುವಾರು ಅಕ್ರಮ ಸಾಗಾಟದ ಸಂದರ್ಭ ವಶ ಪಡಿಸಿಕೊಂಡ ಗೋವುಗಳ ಪಾಲನೆಯ ಸಂಪೂರ್ಣ ಜವಾಬ್ದಾರಿ ಸರಕಾರದ್ದಾಗಿದ್ದರೂ ಈ ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ. 300ರಿಂದ 500 ಗೋವುಗಳನ್ನು ಸರಕಾರದ ಪರವಾಗಿ ಗೋಶಾಲೆಗಳು ಸಾಕು ತ್ತಿದ್ದರೂ ಕೇವಲ 200 ದನಗಳ ಶೇ. 25 ಖರ್ಚನ್ನು (17.5 ರೂಪಾಯಿ) ಮಾತ್ರ ಸರಕಾರ ಪಾವತಿಸುತ್ತ್ತಿದೆ ಎಂದರು.
ಪ್ರಾಣಿ ಕ್ರೌರ್ಯ ತಡೆ ಮಂಡಳಿ ವೈಫಲ್ಯ
ಗೋ ಸಾಗಾಟ ನಿಯಮಾವಳಿಗಳು ಪ್ರಾಣಿ ಕ್ರೌರ್ಯ ತಡೆ ಕಾಯಿದೆ ಗಳನ್ನು ಅನುಷ್ಠಾನ ಮಾಡು ವುದು ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಪ್ರಾಣಿ ಕ್ರೌರ್ಯ ತಡೆ ಮಂಡಳಿ(ಎಸ್‌ಪಿಸಿಎ)ಯ ಕಾರ್ಯ. ಈ ಮಂಡಳಿಯ ವೈಫಲ್ಯವೇ ಇಷ್ಟೊಂದು ಪ್ರಮಾಣದಲ್ಲಿ ಗೋ ಹಿಂಸೆ ಯಾಗಲು ಕಾರಣ. ಈಗ ಇರುವ ಕಾಯಿದೆಗಳೆಲ್ಲವನ್ನು ಸಂಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೊಳಿಸಿ ಒಂದೇ ಒಂದು ಗೋಹತ್ಯೆ ಆಗದಂತೆ ಡಿಸಿ ತತ್‌ಕ್ಷಣ ಕಾರ್ಯ ಪ್ರವೃತ್ತರಾಗಬೇಕು ಎಂದು ಶರಣ್ ಪಂಪ್‌ವೆಲ್ ಆಗ್ರಹಿಸಿದ್ದಾರೆ.