Advertisement

ಉನ್ನತ ಶಿಕ್ಷಣ ಕಾಯ್ದೆಗೆ ಪ್ರಾಧ್ಯಾಪಕರ ವಿರೋಧ

12:06 PM Aug 04, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಕಾಯ್ದೆ-2018ರ ಅನುಷ್ಠಾನಕ್ಕೆ ಮುಂದಾಗಿರುವುದನ್ನು ಖಂಡಿಸಿ ರಾಜ್ಯದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಪ್ರಾಧ್ಯಾಪಕರು ಶುಕ್ರವಾರ ಕಪ್ಪುಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟಿಸಿದರು.

Advertisement

ಉದ್ದೇಶಿತ ಕಾಯ್ದೆ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮಾರಕವಾಗಲಿದೆ. ಅಲ್ಲದೇ ಶಿಕ್ಷಣ ಖಾಸಗೀಕರಣಕ್ಕೂ ಉತ್ತೇಜನ ನೀಡಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ಕಾಯ್ದೆ ಜಾರಿಗೆ ಬರಬಾರದು ಎಂದು ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಪ್ರಾಧ್ಯಾಪಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಬಿ.ಜಿ. ಭಾಸ್ಕರ ಆಗ್ರಹಿಸಿದ್ದಾರೆ.

ಏಳನೇ ವೇತನ ಆಯೋಗದ ಅನುಷ್ಠಾನಕ್ಕೆ ಕನಿಷ್ಠ 5 ವರ್ಷ ಕೇಂದ್ರ ಸರ್ಕಾರವೇ ಶೇ.100ರಷ್ಟು ಆರ್ಥಿಕ ಸಹಾಯ ನೀಡಬೇಕು. ಅರೆಕಾಲಿಕ, ತಾತ್ಕಲಿಕ, ಅತಿಥಿ ಹಾಗೂ ಹಂಗಾಮಿ ಉಪನ್ಯಾಸಕರಿಗೆ ಏಕರೂಪ ವೇತನ ಮತ್ತು ಏಕರೂಪ ಸೇವಾ ನಿಯಮ ಜಾರಿಗೊಳಿಸಬೇಕು. ಆರನೇ ವೇತನ ಆಯೋಗದ ನ್ಯೂನತೆಗಳನ್ನು ಸರಿಪಡಿಸಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ  ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next