Advertisement

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ವಿರೋಧ

06:20 AM Feb 18, 2018 | |

ಬೆಂಗಳೂರು: “ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರವು ಏಕಪಕ್ಷೀಯವಾಗಿ ಮಂಡಳಿ ರಚನೆ ಮಾಡಿದಲ್ಲಿ, ಅದನ್ನು ನಾವು ವಿರೋಧಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ವಿಧಾನಸೌಧ ಮುಂಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್‌ ವಾಹನಗಳಿಗೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾವೇರಿ ನದಿ ಪಾತ್ರದಲ್ಲಿ ಬರುವ ರಾಜ್ಯಗಳ ಪ್ರತಿನಿಧಿಗಳಿಂದ ಕೇಂದ್ರ ಸರ್ಕಾರವು ಅಭಿಪ್ರಾಯ ಸಂಗ್ರಹಿಸಿ, ಮಂಡಳಿ ರಚನೆ ಮಾಡುತ್ತದೆ. ಹಾಗೊಂದು ವೇಳೆ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಂಡಳಿ ಅಥವಾ ಸಮಿತಿ ರಚಿಸಿದರೆ, ಅದನ್ನು ನಾವು ವಿರೋಧಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಅಷ್ಟಕ್ಕೂ ಅಂತರರಾಜ್ಯಗಳ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಂಡಳಿ ರಚನೆ ಇದೇ ಮೊದಲಲ್ಲ. ಈ ಹಿಂದೆಯೂ ಮಂಡಳಿ ಅಥವಾ ಸಮಿತಿಗಳು ರಚನೆಯಾಗಿವೆ. ಕಾವೇರಿ ವಿವಾದದ ವಿಚಾರದಲ್ಲೂ ಸಂಬಂಧಪಟ್ಟ ರಾಜ್ಯಗಳ ಪ್ರತಿನಿಧಿಗಳನ್ನು ಸಂಪರ್ಕಿಸಿ, ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಆಮೇಲೆ ಮಂಡಳಿ ಅಥವಾ ಸಮಿತಿ ರಚಿಸಲಾಗುತ್ತದೆ ಎಂದು ಹೇಳಿದರು.

“ಅದೇನೇ ಇರಲಿ, ನಮ್ಮ ವಾದಗಳನ್ನು ನ್ಯಾಯಾಲಯ ಭಾಗಶಃ ಒಪ್ಪಿದ್ದು, ಕಾವೇರಿ ವಿವಾದದ ವಿಚಾರದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ತೃಪ್ತಿ ತಂದಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next