ಬನಾಯೇಂಗೆ ಮಂದಿರ ಹಾಡು ನಿಷೇಧಿಸಿರುವ ಜಿಲ್ಲಾಡಳಿತ ಕ್ರಮ ವಿರೋಧಿಸಿ ಶ್ರೀರಾಮ ಸೇನೆ ಕಾರ್ಯಕರ್ತರು
ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ನೀಲಕಂಠ ಕಂದಗಲ್, ಶತಮಾನದಿಂದ ಗಣೇಶೋತ್ಸವದ ಗಣೇಶ ಮೂರ್ತಿಗಳ ವಿಸರ್ಜನೆ ತಾಜಬಾವಡಿ ಬಾವಿಯಲ್ಲೇ ನಡೆಯುತ್ತ ಬರುತ್ತಿದೆ. ಆದರೆ ಈ ವರ್ಷ ಜಿಲ್ಲಾಡಳಿತ ತಾಜಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ನಿರ್ಬಂಧ ಹೇರಿದೆ. ಮತ್ತೂಂದೆಡೆ ಬನಾಯೇಂಗೆ ಮಂದಿರ ಹಾಡನ್ನು ವಿಜಯಪುರ ಜಿಲ್ಲಾಧಿಕಾರಿ ನಿಷೇಧಿಸಿದ್ದು ಖಂಡನಾರ್ಹ ಕ್ರಮ ಎಂದು ದೂರಿದರು. ಬನಾಯೇಂಗೆ ಮಂದಿರ ಹಾಡಿನಲ್ಲಿ ಯಾವುದೇ ಕೋಮಿನ ಭಾವನೆಗೆ ನೋಯಿಸುವ, ಅನ್ಯ ಧರ್ಮೀಯರ ದೇವರ ನಿಂದನೆಯಾಗಲಿ ಇಲ್ಲ. ವಿನಾಕಾರಣ ಈ ಹಾಡನ್ನು ನಿಷೇಧಿಸಿರುವುದು ಸರಿಯಲ್ಲ. ದೇಶದ ಎಲ್ಲೂ ಇಲ್ಲದ ಈ ಹಾಡಿನ ನಿಷೇಧ ಈ ಜಿಲ್ಲೆಯಲ್ಲಿ ಮಾತ್ರ ನಿಷೇಧ ಏಕೆ. ಹಿಂದುಗಳ ಹಬ್ಬದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಇಂತಹ ಆದೇಶ
ಹೊರಡಿಸಿದ್ದು, ಹಿಂದುಗಳ ಧಾರ್ಮಿಕ ಭಾವನೆಗೆ ನೋವು ಉಂಟಾಗಿದೆ ಹಾಗೂ ಹಿಂದುಗಳ ಧಾರ್ಮಿಕ ಆಚರಣೆಯ
ಹಕ್ಕನ್ನು ಕಸಿದುಕೊಂಡಂತಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ತಮ್ಮ ಆದೇಶ ಹಿಂಪಡೆಯಬೇಕು ಎಂದು
ಆಗ್ರಹಿಸಿದರು. ಸಂಘಟನೆ ಪ್ರಮುಖರಾದ ರಾಕೇಶ ಮಠ, ಅಪ್ಪುಗೌಡ ಪಾಟೀಲ ಯತ್ನಾಳ, ಪ್ರವೀಣ ತಾಂಬೆ, ಆನಂದ ಕುಲಕರ್ಣಿ, ಬಸವರಾಜ ಕಲ್ಯಾಣಪ್ಪಗೋಳ, ಕಿರಣ ಕಾಳೆ, ಮಲ್ಲನಗೌಡ ಪಾಟೀಲ, ಸಮೀರಕುಮಾರ ಚಿಪ್ಪಲಕಟ್ಟಿ, ಸಿದ್ದು ಆಲಾಳ, ಬಸವರಾಜ ಪಾಟೀಲ, ಸಂತೋಷ ವಿಶ್ವಕರ್ಮ, ರಮೆಶ ನಾಗಠಾಣ, ರಾಕೇಶ ಗದ್ದಿನಕೇರಿ, ಭೀಮಾಶಂಕರ ಬುಳ್ಳಾ, ವಿಠ್ಠಲ ಸಾತಿಹಾಳ, ಧರೇಶ ಜುಮನಾಳ ಪಾಲ್ಗೊಂಡಿದ್ದರು.
Advertisement