ನವದೆಹಲಿ: ವಲಸೆ ಮತದಾರರಿಗೆ ಅನುಕೂಲವಾಗುವ ರೀತಿ ರೂಪಿಸಿರುವ ರಿಮೋಟ್ ವೋಟಿಂಗ್ ಮಷೀನ್‌ನ ಪ್ರಾತ್ಯಕ್ಷಿಕೆಯನ್ನು ಸೋಮವಾರ ನೀಡಲು ಚುನಾವಣಾ ಆಯೋಗ ಯೋಜಿಸಿದ್ದು, ಇದಕ್ಕಾಗಿ ರಾಜಕೀಯ ಪಕ್ಷಗಳನ್ನು ಆಹ್ವಾನಿಸಿದೆ. ಮತ್ತೂಂದೆಡೆ ಈ ಪ್ರಾತ್ಯಕ್ಷಿಕೆಯನ್ನು ವಿರೋಧಿಸಲು ವಿಪಕ್ಷಗಳು ಸಿದ್ಧತೆ ನಡೆಸಿವೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ರಾಷ್ಟ್ರೀಯ ಮಾನ್ಯತೆ ಪಡೆದ 8 ರಾಜಕೀಯ ಪಕ್ಷಗಳು ಹಾಗೂ 57 ರಾಜ್ಯ ಮಾನ್ಯತೆ ಪಡೆದ ಪಕ್ಷಗಳನ್ನು ಆಯೋಗ ಆಹ್ವಾನಿಸಿದೆ. ಆರ್‌ವಿಎಂ ಮಷೀನ್ ಬಳಕೆ, ತಂತ್ರಜ್ಞಾನ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಆಯೋಗದ ತಾಂತ್ರಿಕ ತಜ್ಞರ ಸಮಿತಿ ವಿವರಿಸಲಿದೆ. ಆಯೋಗ ಈ ಸಂಬಂಧಿಸಿದಂತೆ ಆಹ್ವಾನ ನೀಡುತ್ತಿದ್ದಂತೆ ವಿಪಕ್ಷಗಳು ಸಭೆ ನಡೆಸಿದ್ದು, ಪ್ರಸ್ತುತಿಗೆ ವಿರೋಧ ವ್ಯಕ್ತ ಪಡಿಸಲು ನಿರ್ಧರಿಸಿವೆ ಎನ್ನಲಾಗಿದೆ.