Advertisement
ತಾಲೂಕಿನ ದೋಣಿಮಲೈನಲ್ಲಿ ರಾಷ್ಟ್ರೀಯ ಖನಿಜ ನಿಗಮದ ಎಲ್ಲ (ಎನ್‌ಎಂಡಿಸಿ ) ಕಂಪನಿಯ ನೌಕರರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ನವರತ್ನ ಎಂದು ಹೆಸರು ಪಡೆದ ಎನ್‌ಎಂಡಿಸಿ ಕಂಪನಿಯ ಆಡಳಿತಕ್ಕೆ ಒಳಪಟ್ಟ ಜಗದಲ್‌ಪುರ ಉಕ್ಕಿನ ಕಾರ್ಖಾನೆ ಖಾಸಗೀಕರಣ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಈ ಕಂಪನಿಯೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿದೆ. ಅಲ್ಲದೆ, ಈ ಕಂಪನಿಯಿಂದ ಯಾವುದೇ ನಷ್ಟವಿಲ್ಲ. ಈ ಹಿಂದೆ ನೂತನ ಅಭ್ಯರ್ಥಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು ಅದನ್ನು ಏಕಾಏಕಿ ತಡೆದು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಹೊರಗುತ್ತಿಗೆ, ಖಾಸಗೀಕರಣ ತಡೆಯುವ ಮೂಲಕ ಸಾರ್ವಜನಿಕ ಕಂಪನಿಯಾಗಿ ಲಾಭ ತರುತ್ತಿರುವ ಎನ್‌ಎಂಡಿಸಿ ಕಾರ್ಮಿಕರನ್ನು ರಕ್ಷಿಸಬೇಕು. ನೂತನ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಖಾಸಗೀಕರಣ ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಕಾರ್ಮಿಕ ಮುಖಂಡರಾದ ಡಿಐಒಪಿಇ ಕೆ.ರವೀಂದ್ರನಾಥ, ಎಂಎಂಡಬ್ಲೂ ಮುಖಂಡ ಪಿ.ಭಾಸ್ಕರ್, ಬಿ.ಹೊನ್ನೂರಸ್ವಾಮಿ, ಎಸ್.ಗೋಪಿ, ಎಚ್.ಬಸವರಾಜ, ರವಿಕುಮಾರ್, ಜನಾರ್ದನ್, ಸತ್ಯಬಾಬು, ಅರಿಮೂರ್ತಿ, ಇಸ್ಮಾಯಿಲ್, ಗಡಾದ್ ವೀರಣ್ಣ, ಮಾರುತಿ ಸೇರಿದಂತೆ
ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.