Advertisement

ಕೆಐಎಡಿಬಿ ಭೂಸ್ವಾಧೀನಕ್ಕೆ ವಿರೋಧ

01:19 PM Apr 02, 2021 | Team Udayavani |

ಮಂಡ್ಯ: ತಾಲೂಕಿನ ಕುದರಗುಂಡಿ ಗ್ರಾಮದ ಸರ್ವೆ ನಂ.245ರ 109 ಎಕರೆ ಭೂಮಿ ಸ್ವಾಧೀನದ ಕೆಐಎಡಿಬಿಪ್ರಯತ್ನವನ್ನು ಜಿಲ್ಲಾಧಿಕಾರಿ ಕರೆದಿದ್ದ ಸಭೆಯಲ್ಲಿ ಕುದರಗುಂಡಿ ಗ್ರಾಮದ ಭೂ ಮಾಲೀಕರು ಪ್ರಬಲವಾಗಿ ವಿರೋಧಿಸಿದ್ದರಿಂದ ಜಿಲ್ಲಾ ಧಿಕಾರಿ ಸಭೆ ಬರ್ಖಾಸ್ತುಗೊಳಿಸಿದರು.

Advertisement

ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಟಿ.ಯಶವಂತ ಮಾತನಾಡಿ, ಕೆಐಎಡಿಬಿಯ ಭೂಸ್ವಾಧೀನ ಕಾನೂನು ಬಾಹಿರ. ಪ್ರಾಥಮಿಕ ಅಧಿಸೂಚನೆ ಹೊರಡಿಸಿದ 20 ವರ್ಷಗಳ ನಂತರ ಅಂತಿಮ ಅಧಿ  ಸೂಚನೆ ಹೊರಡಿಸಿರುವುದು ಭೂಸ್ವಾಧೀನ ಕಾಯ್ದೆ 2013ರ ಸ್ಪಷ್ಟ ಉಲ್ಲಂಘನೆ ಯಾಗಿದೆ. ಈ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ತೀರ್ಪುಗಳು ಕೂಡ ಇಂಥ ಅಕ್ರಮ ಭೂಸ್ವಾಧೀನವನ್ನು ನಿರ್ಬಂದಿಸಿವೆ. ಕೂಡಲೇ ಕೆಐಎಡಿಬಿ ಅಕ್ರಮ ಭೂಸ್ವಾಧೀನವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಸಮುದಾಯದ ಕುಟಂಬಗಳೇ ಹೆಚ್ಚು ಇರುವ ರೈತರಹಿತರಕ್ಷಣೆಗೆ ಮಾರಕವಾಗಿರುವ ಹಾಗೂ ದಲಿತರ ಕಲ್ಯಾಣದ ಘನ ಉದ್ದೇಶಕ್ಕೆ ವಿರುದ್ಧವಾಗಿರುವ ಕೆಐಎಡಿಬಿ ಭೂಸ್ವಾಧೀನದ ವಿರುದ್ಧ ಜಿಲ್ಲಾ ಧಿಕಾರಿ ರೈತರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಕುದರಗುಂಡಿಗ್ರಾಮದ ರೈತರಾದ ಸಿದ್ದಯ್ಯ, ಶಿವಣ್ಣ,ಶಿವಲಿಂಗಯ್ಯ, ಶ್ರೀನಿವಾಸ್‌, ಪುಟ್ಟಸ್ವಾಮಿಗೌಡ, ಮಾದಪ್ಪ, ಸ್ವಾಮಿ, ಸಿದ್ದರಾಮು,ಮಹದೇವಯ್ಯ, ಪ್ರಕಾಶ್‌, ಬಿ.ಸಿದ್ದಯ್ಯ, ಸಂಜೀವಮ್ಮ, ಸಣ್ಣತಾಯಮ್ಮ,ಸಿ.ಬೆಟ್ಟಯ್ಯ, ಶ್ರೀನಿವಾಸ, ರಾಮ ಲಿಂಗಯ್ಯ, ಸುದರ್ಶನ್‌ ಮುಂತಾದವರು ಯಾವುದೇ ಕಾರಣಕ್ಕೂ ಭೂಮಿ ಬಿಡುವುದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರೈತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಭೂಸ್ವಾಧೀನಕ್ಕೆ ವಿರೋಧ ಬಂದ ಹಿನ್ನೆಲೆಯಲ್ಲಿ ಸಭೆ ಬರ್ಖಾಸ್ತುಗೊಳಿಸಿದರು. ಸಭೆಯಲ್ಲಿ ಕೆಐಎಡಿಬಿ ಅಧಿಕಾರಿ ಸುರೇಶ್‌ ಕುಮಾರ್‌ ಸೇರಿದಂತೆ ಮತ್ತಿತರರಿದ್ದರು. ನಂತರಸಭೆ ನಡೆಸಿದ ರೈತರು ಕೆಐಎಡಿಬಿ ಭೂಸ್ವಾ ಧೀನದ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next