Advertisement

ಪೌಷ್ಟಿಕ ಆಹಾರದ ಬದಲಿಗೆ ನಗದು ನೀಡಿಕೆಗೆ ವಿರೋಧ

04:29 PM Aug 17, 2021 | Team Udayavani |

ಕೋಲಾರ: ಮಕ್ಕಳಿಗೆ, ಗರ್ಭಿಣಿಯವರಿಗೆ ಹಾಗೂ ಬಾಣಂತಿಯರಿಗೆ ನೀಡುತ್ತಿರುವ ಪೌಷ್ಟಿಕ ಆಹಾರದ ಬದಲಿಗೆ ನೇರ ನಗದು ವರ್ಗಾವಣೆ ಮಾಡಲು ಹೊರಟಿರುವ ಸರ್ಕಾರದ ಕ್ರಮ ವಿರೋಧಿಸಿ ಹಾಗೂ ಅಂಗನವಾಡಿ ನೌಕರರ ವಿವಿಧ ಬೇಡಿಕೆ ಗಳು ಈಡೇರಿಸಲು ಒತ್ತಾಯಿಸಿ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಂದೆ ಅಂಗನವಾಡಿ ನೌಕರರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

Advertisement

ಬ್ಯಾಂಕ್‌ ಖಾತೆಗೆ ಹಣ ಬೇಡ: ಅಂಗನವಾಡಿ ನೌಕರರು ಸಮಾಜದಲ್ಲಿ ಅಪೌಷ್ಟಿಕತೆ ನಿವಾರಣೆಗೆ ಶ್ರಮಿಸುತ್ತಿದ್ದು, ಕೇಂದ್ರ ಸರ್ಕಾರ ಫಲಾನುಭವಿ ಗಳ ನೇರ ಖಾತೆಗೆ ಹಣ ಜಮಾ ಮಾಡಲು ಹೊರಟಿರುವುದು ಖಂಡನೀಯ. ಬೆಲೆಗಳು ದುಬಾರಿ ಆಗಿರುವಾಗ ನೇರ ಖಾತೆಗೆ ಜಮಾ ಮಾಡಿದಲ್ಲಿ ಸರ್ಕಾರ ನೀಡುವ ಹಣದಲ್ಲಿ ಪೌಷ್ಟಿಕ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ, ಬಡತನದ ಹಿನ್ನೆಲೆಯಲ್ಲಿ ಫಲಾನುಭವಿಗಳಗೆ ಆಹಾರ ದೊರೆಯುತ್ತದೆ ಎಂಬ ಖಾತ್ರಿ ಇಲ್ಲವಾಗಿದೆ. ಈ ಕೂಡಲೇ ಸರ್ಕಾರ ನೇರ ಖಾತೆ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಬಿಸ್ಲೆ ಘಾಟ್‌ ರಸ್ತೆಯಲ್ಲಿ ಭಾರೀ ವಾಹನ ಸಂಚಾರಕ್ಕೆ ವಿರೋಧ

ಮೃತರಿಗೆ ಪರಿಹಾರ ನೀಡಿಲ್ಲ: ಅಂಗನವಾಡಿ ನೌಕರರು ಕೋವಿಡ್‌ ಸಂದರ್ಭದಲ್ಲಿ ಜೀವ ಹಂಗು ತೊರೆದು ಕೆಲಸ ಮಾಡಿದ್ದು, ಮೊದಲ ಅಲೆಯಲ್ಲಿ
28 ನೌಕರರು ಎರಡನೇ ಅಲೆಯಲ್ಲಿ 29 ಅಂಗನವಾಡಿ ಕಾರ್ಯಕರ್ತೆಯರು ಜೀವ ಕಳೆದುಕೊಂಡಿದ್ದಾರೆ. ಅವರಿಗೆ ಇಂದಿಗೂ ಪರಿಹಾರ ಹಣ ನೀಡಿಲ್ಲ. ಮೊಟ್ಟೆ ಖರೀ ದಿಗೆ ಹಣ ಬಿಡುಗಡೆ ಮಾಡದೇ ಬೆಲೆ ಏರಿದರೆ ಹೊಂದಾಣಿಕೆ ಮಾಡುವಂತೆ ಹೇಳಲಾಗುತ್ತಿದೆ ಎಂದು ಹೇಳಿದರು.

ಮತ್ತೆ ಸಚಿವ ಖಾತೆ: ಮೊಟ್ಟೆ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಸಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸಿಲುಕಿ ಹಾಕಿಕೊಂಡಿದ್ದರು. ಸರ್ಕಾರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿದೆ ಎಂದರು ಆರೋಪಿಸಿದರು.

Advertisement

ಕೆಲಸಕ್ಕೆಕುತ್ತು ತರುವ ಕೆಲಸ: ಅಂಗನವಾಡಿ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ರಾಜ್ಯ ಮಟ್ಟದ ಸಮಿತಿ ಸಭೆ ನಡೆದು ಅನೇಕ ಶಿಫಾರಸುಗಳನ್ನು ಮಾಡಿದೆ.ಆದರೆ, ಜಾರಿಗೆ ಮುಂದಾಗುತ್ತಿಲ್ಲ. ಕನಿಷ್ಠ ವೇತನ ದಿಂದ ವಂಚಿತವಾಗಿರುವ ಬಿಸಿಯೂಟ ನೌಕರರ ಉದ್ಯೋಗಕ್ಕೆ ಕುತ್ತು ತರುವ ಕೆಲಸ ಸರ್ಕಾರ ಪ್ರಾರಂಭಿಸಿದೆ ಎಂದು ವಿವರಿಸಿದರು.ಧರಣಿಯ ನೇತೃತ್ವವನ್ನು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಗೌರವ ಅಧ್ಯಕ್ಷೆ ಈಶ್ವರಮ್ಮ, ಕಾರ್ಯದರ್ಶಿ ನಾಗರತ್ನಮ್ಮ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ, ಮುಖಂಡ ರಾದ ಕಲ್ಪನಾ, ಮಂಜುಳಮ್ಮ, ಲಕ್ಷ್ಮೀ ದೇವಮ್ಮ, ರಾಜಮ್ಮ, ಜಯಲಕ್ಷ್ಮೀ ಲಾಲೂ, ಲೋಕೇಶ್ವರಿ, ಉಮಾದೇವಿ, ವೆಂಕಟಲಕ್ಷಮ್ಮ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next