ಪುತ್ಥಳಿ ಸ್ಥಾಪಿಸಿ: ಆಡಳಿತ ಪಕ್ಷದ ನಾಯಕ ರಾಜಕುಮಾರ ಕಪನೂರ, ಮಾಜಿ ಮಹಾಪೌರ ಸೈಯದ್ ಅಹ್ಮದ, ಮಾಜಿ ಉಪಮಹಾಪೌರ ಶರಣಮ್ಮ ಬೆಣ್ಣೂರ, ಪ್ರಮೋದ ತಿವಾರಿ, ವಿಪಕ್ಷ ನಾಯಕ ಆರ್.ಎಸ್ .ಪಾಟೀಲ, ಶಿವಾನಂದ ಪಾಟೀಲ
ಅಷ್ಠಗಿ, ಅರ್ಚನಾ ತಿವಾರಿ, ರಮೇಶ ಕಮಕನೂರ, ವಿಠಲ ಯಾದವ್, ಹುಲಿಗೆಪ್ಪ ಕನಕಗಿರಿ, ಅಷ್ಪಾಕ ಅಹ್ಮದ ಚುಲುಬುಲ್ ಧರ್ಮಸಿಂಗ್ ಕುರಿತು ಮಾತನಾಡಿದರು. ಧರ್ಮಸಿಂಗ್ ಅವರು ಕಲಬು ರಗಿ ನಗರ ಸಭೆ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟು ರಾಜ್ಯದ ಮುಖ್ಯ ಮಂತ್ರಿ ಆಗಿರುವುದು ಸಾಮಾನ್ಯವಾದುದ್ದಲ್ಲ. ಕಲಬುರಗಿ ಜಿಲ್ಲೆಯ ಅಭಿವೃ ದ್ಧಿಗೆ ತಮ್ಮದೇಯಾದ ಕೊಡುಗೆ ನೀಡಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ಥಳಿಯನ್ನು ಮಿನಿ ವಿಧಾನಸೌಧ ಎದುರಿನ ಸ್ಥಳದಲ್ಲಿ ಸ್ಥಾಪಿಸಲು ಹಾಗೂ ಅವರ ಕೊಡುಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶರಣಬಸವೇಶ್ವರ ಕೆರೆ ಉದ್ಯಾನವನದ ಸ್ಥಳದಲ್ಲಿ ಮ್ಯೂಜಿಯಂ ಸ್ಥಾಪಿಸಬೇಕೆಂದು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಾಪೌರ ಶರಣಕುಮಾರ ಮೋದಿ ಅವರು ಧರ್ಮಸಿಂಗ್ ಅವರ ಪುತ್ಥಳಿ ಸ್ಥಾಪನೆ ವಿಷಯ ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಅದನ್ನು ಸರ್ಕಾರಕ್ಕೆ ಕಳುಹಿಸಿ ಕೊಡೋಣ ಎಂದು ಹೇಳಿ ಸಭೆಯನ್ನು ಮುಂದೂಡಿದರು. ಮುಂದೂಡಿದ ಸಭೆಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ನಿರ್ಧಾರ ಪ್ರಕಟಿಸಿದರು. ಸಭೆಯಲ್ಲಿ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಪಾಲ್ಗೊಂಡಿದ್ದರು.
Advertisement