ಲೋಕಾಪುರ: ವೆಂಕಟಾಪುರದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಮತ್ತು ಕಿತ್ತೂರ ರಾಣಿ ಚನ್ನಮ್ಮಾ ಮೂರ್ತಿ ತೆರವುಗೊಳಿಸಿದ ಜಿಲ್ಲಾಡಳಿತ ವಿರುದ್ಧ ರಾಯಣ್ಣ ಅಭಿಮಾನಿಗಳು ರಾಯಣ್ಣ ಬಲಿದಾನದ ದಿವಸ ಜ. 26ರಂದು ಪಟ್ಟಣದ ಬಸವೇಶ್ವರ ವೃತ್ತದಿಂದ ಬಾಗಲಕೋಟೆಯ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.
ವೆಂಕಟಾಪುರ ಕಾಶಿಲಿಂಗೇಶ್ವರ ದೇವಸ್ಥಾನದಲ್ಲಿ ರಾಯಣ್ಣ, ಚನ್ನಮ್ಮ ಅಭಿಮಾನಿಗಳು ಹಾಗೂ ವಿವಿಧ ಎಲ್ಲ ಸಂಘಟನೆಗಳು ನಡೆಸಿದ ಪೂರ್ವಭಾವಿ ಸಭೆಯಲ್ಲಿ ಪಾದಯಾತ್ರೆ ನಿರ್ಧಾರ ತೆಗೆದುಕೊಂಡಿದ್ದಾರೆ.
ಜ. 20ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಜ. 23 ರಂದು ಮಧ್ಯರಾತ್ರಿ 1 ಗಂಟೆಗೆ ತಾಲೂಕು ದಂಡಾಧಿ ಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮಳ ಮೂರ್ತಿ ತೆರವುಗೊಳಿಸಿದ್ದನ್ನು ಖಂಡಿಸಿದರು.
ಸಭೆಯಲ್ಲಿ ಭೀಮಶಿ ಸರ್ಕಾರಕುರಿ, ಸಿದ್ದಣ್ಣ ಅವರಾದಿ , ಯಮನಪ್ಪ ಹೊರಟ್ಟಿ, ಮಹೇಶ ಮಳಲಿ, ಸಿದ್ದಣ್ಣ ಸೊನ್ನದ, ಕಾಮಣ್ಣ ಜೋಗಿ, ಹಣಮಂತ ರಾಮದುರ್ಗ, ಮಂಜು ಮಂಟೂರ, ಮಲ್ಲಪ್ಪ ಬಿಸನಕೊಪ್ಪ, ಅರುಣ ಜೋಗಿ, ಬೀರಪ್ಪ ಮಾಯಣ್ಣವರ, ಶಶಿಧರ ಬೆಳಗಲಿ, ಸಿಂಗಾಡೆಪ್ಪ ಗಡ್ಡದವರ, ಮುತ್ತಪ್ಪ ಗಡ್ಡದವರ, ಪ್ರಕಾಶ ದೊಡಮನಿ, ಹೊಳಬಸು ಕುಳಲಿ, ಸುರೇಶ ಸಿದ್ದಾಪುರ, ಬಾಳು ಗಡ್ಡದವರ, ಕಾಶಪ್ಪ ಯಡಹಳ್ಳಿ, ನಿಂಗಪ್ಪ ಹರಕಂಗಿ, ಹಣಮಂತ ಗಡ್ಡದವರ, ಕಾಶಪ್ಪ ಕಬ್ಬೂರ, ನಾಗಪ್ಪ ಕಂಬಳಿ, ಮಾರುತಿ ಗಡ್ಡದವರ, ಜೋತೆಪ್ಪ ಹರಕಂಗಿ, ಸುರೇಶ ಹರಕಂಗಿ, ಮಂಜು ಗುಡ್ಡದ, ಸಿದ್ದು ಕಿಲಾರಿ, ಮಂಜು ಕಿಲಾರಿ, ಕರಿಯಪ್ಪ ಹರಕಂಗಿ, ಮಲ್ಲಪ್ಪ ಜಾಲಿಕಟ್ಟಿ ಇದ್ದರು.