Advertisement

ಉತ್ತರ ಧ್ರುವದಲ್ಲಿ ರಾತ್ರಿ ತಂಗುವ ಅವಕಾಶ

09:12 AM Sep 24, 2019 | Team Udayavani |

ಕೋಪನ್‌ಹೇಗ್‌: ರೋಮಾಂಚಕ ವೆನಿಸುವ ಜಾಗಗಳಿಗೆ ಪ್ರವಾಸ ಹೋಗ ಬಯಸುವ ಸಾಹಸಿ ಗಳಿಗಾಗಿಯೇ ಉತ್ತರ ಯೂರೋಪ್‌ನ ಸ್ಕಾಂಡಿನೇ ವಿಯಾದ (ಡೆನ್ಮಾರ್ಕ್‌, ನಾರ್ವೆ, ಸ್ವೀಡನ್‌ಗಳನ್ನೊಳಗೊಂಡ ಪ್ರಾಂತ್ಯ) ಕಾರ್ಯ ನಿರ್ವಹಿಸುತ್ತಿರುವ “ನಾರ್ತ್‌ ಪೋಲ್‌ ಇಗ್ಲೂಸ್‌ ಹೋಟೆಲ್‌’ ಎಂಬ ಸಂಸ್ಥೆ, ಭೂಮಂಡಲದ ಉತ್ತರ ಧ್ರುವದ ತುತ್ತ ತುದಿಗೆ ಪ್ರವಾಸ ಏರ್ಪ ಡಿಸಿದೆ.

Advertisement

ತಿಂಗಳ ಅವಧಿಯ ಈ ಪ್ರವಾಸದಲ್ಲಿ ನೋಂದಣಿ ಮಾಡಿಕೊಳ್ಳುವ ಪ್ರವಾಸಿಗ ರಿಗೆ ಉತ್ತರ ಧ್ರುವದ ತುಟ್ಟತುದಿಯಲ್ಲಿನ ಇಗ್ಲೂ ಹೋಟೆಲ್‌ನ ಬೆಚ್ಚಗಿನ ಟೆಂಟ್‌ಗಳಲ್ಲಿ ಕನಿಷ್ಠ ಒಂದು ರಾತ್ರಿ ಉಳಿದುಕೊಳ್ಳುವ ಅವಕಾಶ ಸಿಗಲಿದೆ. ಉತ್ತರ ಧ್ರುವದಲ್ಲಿ ನಿಮಿಷಗಳಲ್ಲಿ ರಕ್ತ ಹೆಪ್ಪಾಗಿಸುವಂಥ ವಾತಾವರಣದಲ್ಲಿ ಉಳಿದುಕೊಳ್ಳುವುದು ಒಂದು ವಿಶೇಷ ಅನುಭವವೇ ಸರಿ.

ಯಾವಾಗ ಪ್ರವಾಸ?: ಮುಂದಿನ ವರ್ಷ, ಏಪ್ರಿಲ್‌ನಲ್ಲಿ ನಡೆಯಲಿರುವ ಈ ಪ್ರವಾಸಕ್ಕೆ ಹೋಗ ಬಯಸುವವರು ಈಗಲೇ ಹೆಸರು ನೋಂದಾಯಿಸಿ ಕೊಳ್ಳ ಬೇಕಿದೆ. ಏಪ್ರಿಲ್‌ನಲ್ಲಿ ಉತ್ತರ ಧ್ರುವದಲ್ಲಿ ಪ್ರತಿ ರಾತ್ರಿ ಆಕಾಶದಲ್ಲಿ ಕಾಣಸಿಗುವ ಹೌರಾ ಕಿರಣಗಳ ಚೆಂದದ ಚಿತ್ತಾರಗಳನ್ನು ನೋಡಲು, ಪ್ರವಾಸಿಗರನ್ನು ಹೆಲಿಕಾಪ್ಟರ್‌ಗಳ ಮೂಲಕ ಅಲ್ಲಿಗೆ ಕರೆದೊ ಯ್ಯಲಾಗುತ್ತದೆ.

ಒಂದು ರಾತ್ರಿಗೆ 74.50 ಲಕ್ಷ ರೂ.!
ಆದರೆ, ಈ ಪ್ರವಾಸ ಮಾತ್ರ ತುಂಬಾ ದುಬಾರಿಯದ್ದು. ಒಂದು ರಾತ್ರಿ ತಂಗಲು ಒಬ್ಬರಿಗೆ 74,50,000 ರೂ. ನೀಡಬೇಕಿದೆ. ಆದರೆ, ಕೊಟ್ಟ ಹಣಕ್ಕೆ ಮೋಸವಿಲ್ಲ. ಉತ್ತರ ಧ್ರುವಗಳ ರಾತ್ರಿಯ ಔರಾಗಳನ್ನು ವೀಕ್ಷಿಸುತ್ತಾ, ಬೇಕಾದ ಅಡುಗೆ ಮಾಡಿಸಿಕೊಂಡು ಸವಿಯುತ್ತಾ ಮೋಜು ಮಸ್ತಿ ಮಾಡುವ ಎಲ್ಲ ಅನುಕೂಲ ಕಲ್ಪಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next