Advertisement

ವಿದ್ಯಾರ್ಥಿನಿಯರು ಬಯಸಿದರೆ ಟಿಸಿಗೆ ಅವಕಾಶ: ವಿ.ವಿ. ಕುಲಪತಿ

01:44 AM May 29, 2022 | Team Udayavani |

ಮಂಗಳೂರು: ವಸ್ತ್ರಸಂಹಿತೆ ವಿಚಾರದಲ್ಲಿ ವಿದ್ಯಾರ್ಥಿಗಳು ಒಂದು ಕಾಲೇಜನ್ನು ಬಿಟ್ಟು ಬೇರೆ ಕಾಲೇಜಿಗೆ ಪ್ರವೇಶ ಪಡೆಯಲು ಬಯಸಿದರೆ ಅವರಿಗೆ ಅವಶ್ಯವಿರುವ ವರ್ಗಾವಣೆ ಪತ್ರ (ಟಿಸಿ) ನೀಡಲು ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ ಎಂದು ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ. ಸುಬ್ರಮಣ್ಯ ಯಡಪಡಿತ್ತಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ವಿದ್ಯಾಭ್ಯಾಸದತ್ತ ಒಲವು ತೋರುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ. ವಸ್ತ್ರಸಂಹಿತೆಯಂತಹ ವ್ಯವಸ್ಥೆ ಯಲ್ಲಾಗುವ ಬದಲಾವಣೆಗಳು ಅವರ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದಂತೆ ಎಲ್ಲ ಎಚ್ಚರವಹಿಸಲಾಗುವುದು. ಈ ಪ್ರಕರಣಗಳನ್ನು ವಿಶೇಷ ನೆಲೆಯಲ್ಲಿ ಪರಿಗಣಿಸಿಕೊಂಡು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. ಒಂದು ಕಾಲೇಜಿನಿಂದ ಮತ್ತೂಂದು ಕಾಲೇಜಿಗೆ ಹೋಗಲು ಬಯಸಿದರೆ ಇದಕ್ಕೆ ಅವಶ್ಯ ಇರುವ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದರು.

ಹೊಸ ಕಾಲೇಜಿನಲ್ಲಿ ಸೇರ್ಪಡೆಗೆ ಅಗತ್ಯವಾದಷ್ಟು ಇನ್‌ಟೇಕ್‌ ಇರಬೇಕು. ಆದುದರಿಂದ ಕಾಲೇಜಿನವರು ಹೆಚ್ಚುವರಿ ಇನ್‌ಟೇಕ್‌ ಕೇಳಿದರೆ ಅವರಿಗೆ ಪ್ರವೇಶಾತಿ ಮಿತಿಯನ್ನು ಕೂಡ ಹೆಚ್ಚಳ ಮಾಡಲಾಗುತ್ತದೆ. ವಿದ್ಯಾರ್ಥಿಗಳ ವರ್ಗಾವಣೆ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ ಎಂದರು.

ನಿಯಮ ಕಡ್ಡಾಯ ಪಾಲನೆ
ವಿ.ವಿ.ಯ ಎಲ್ಲ ಘಟಕ ಕಾಲೇಜುಗಳಲ್ಲಿ ವಸ್ತ್ರಸಂಹಿತೆ ಕುರಿತಂತೆ ಸರಕಾರದ ಹಾಗೂ ನ್ಯಾಯಾಲಯದ ಆದೇಶವನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಸಂಯೋಜಿತ ಕಾಲೇಜುಗಳಲ್ಲಿ ಅವರದ್ದೇ ಆದ ವಸ್ತ್ರಸಂಹಿತೆ ಇರುತ್ತದೆ ಎಂದರು.

ಮಂಗಳೂರು ವಿ.ವಿ.ಯಡಿಯಲ್ಲಿ ಆರು ಘಟಕ ಕಾಲೇಜುಗಳಿದ್ದು, ಹಂಪನಕಟ್ಟೆ ಮಂಗಳೂರು ವಿ.ವಿ. ಕಾಲೇಜು, ಮೂಡುಬಿದಿರೆಯ ಬನ್ನಡ್ಕ ಕಾಲೇಜು, ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜಿಗೆ ಸರಕಾರದಿಂದ ಅನುಮತಿ ಪಡೆದಿದೆ.

Advertisement

ಮಂಗಳಗಂಗೋತ್ರಿಯ ಕಾಲೇಜು, ನೆಲ್ಯಾಡಿಯ ಕಾಲೇಜು ಹಾಗೂ ಮಂಗಳೂರು ವಿ.ವಿ. ಸಂಧ್ಯಾ ಕಾಲೇಜು ವಿ.ವಿ. ಸಮಿತಿಯಿಂದ ಅಂಗೀಕಾರ ಪಡೆದಿವೆ. ರಾಜ್ಯ ಸರಕಾರದಿಂದ ಶೀಘ್ರದಲ್ಲಿಯೇ ಅನುಮತಿ ದೊರೆಯುವ ಸಾಧ್ಯತೆಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next