Advertisement

ವಿರೋಧಿಗಳೆಲ್ಲ ಒಂದಾದ್ರೂ ಖರ್ಗೆಯನ್ನು ಸೋಲಿಸಲಾಗಲ್ಲ’

12:30 AM Mar 09, 2019 | Team Udayavani |

ಕಲಬುರಗಿ: ಲೋಕಸಭಾ ಚುನಾವಣೆ ಯಲ್ಲಿ ಹಿರಿಯ ನಾಯಕ, ಸಂಸದ ಡಾ|ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಬೇಕು ಎಂದು ವಿರೋಧಿಗಳೆ ಲ್ಲರೂ ಒಂದಾದ್ರೂ ಏನೂ ಮಾಡಲು ಆಗೋದಿಲ್ಲ. ಜಿಲ್ಲೆಯ ಮತದಾರ ಪ್ರಭು ಗಳು ಫಲಿತಾಂಶ ನಿರ್ಧರಿ ಸುತ್ತಾರೆ ಎನ್ನುವುದನ್ನು ಇವರೆಲ್ಲ ಮರೆತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಬಿಜೆಪಿ ನಾಯಕರ ವಿರುದಟಛಿ ಹರಿಹಾಯ್ದರು.

Advertisement

ಉಮೇಶ ಜಾಧವ್‌ ಅವರು ಬಿಜೆಪಿಯ ಸ್ವಯಂ ಘೋಷಿತ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಪ್ರಧಾನಿ ಸೇರಿದಂತೆ ಬಿಜೆಪಿ ಮುಖಂಡ ರ್ಯಾರೂ ಜಾಧವ್‌ ಅವರು ಲೋಕಸಭೆ ಅಭ್ಯರ್ಥಿ ಎಂದು ಹೇಳಿಲ್ಲ. ಮುಖ್ಯವಾಗಿ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಅಷ್ಟರಲ್ಲಿ ಬಿಜೆಪಿಗೆ ಸೇರ್ಪಡೆ ಯಾಗಿದ್ದಾರೆ. ಅನರ್ಹಗೊಳಿಸುವಂತೆ ಸಿದ್ದರಾಮಯ್ಯ ಈ ಮುಂಚೆಯೇ ದೂರು ನೀಡಿದ್ದಾರೆ. ಅದಿನ್ನೂ ಇತ್ಯರ್ಥವಾಗಬೇಕು ಎಂದರು.

ಬಿಜೆಪಿ ಮುಖಂಡರಾದ ಮಾಲೀಕಯ್ಯ ಗುತ್ತೇದಾರ್‌, ಬಾಬುರಾವ್‌ ಚಿಂಚನಸೂರ, ಡಾ| ಉಮೇಶ ಜಾಧವ್‌ ತ್ರಿಮೂರ್ತಿಗಳಲ್ಲ. ಲೋಕ ಸಭಾಚುನಾವಣೆಗಾಗಿ ಹುಟ್ಟಿಕೊಂಡಿರುವ ಉದ್ಭವ ಮೂರ್ತಿಗಳು ಇವರು. ಚುನಾವಣೆ ಬಳಿಕ ಈ ಯಾವ ಮೂರ್ತಿಗಳೂ ಇರೋದಿಲ್ಲ ಎಂದು ಟೀಕಿಸಿದರು.

ಕಲಬುರಗಿಯಲ್ಲಿ ಬುಧವಾರ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಧಾನಿ ಮೋದಿ ಯಾಕೆ ಪ್ರಸ್ತಾಪಿಸಲಿಲ್ಲ, ಟೀಕಿಸಲಿಲ್ಲ ಎನ್ನುವ ಕುರಿತು ಅವರೇ ಹೇಳಬೇಕು. ವಾಸ್ತವವಾಗಿ ಪ್ರಧಾನಿ ನರೇಂದ್ರ ಮೋದಿ ಯವರೇ ಆರ್‌ಎಸ್‌ಎಸ್‌ನ ರಿಮೋಟ್‌ ಕಂಟ್ರೋಲ್‌ನಲ್ಲಿ ಇದ್ದಾರೆ. ಹೀಗಾಗಿ, ಕಾಂಗ್ರೆಸ್‌ ಕೈಯಲ್ಲಿ ಮುಖ್ಯಮಂತ್ರಿ
ಕುಮಾರಸ್ವಾಮಿ ರಿಮೋಟ್‌ ಕಂಟ್ರೋಲ್‌ ನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿರಬಹುದು ಎಂಸದರು.

Advertisement

Udayavani is now on Telegram. Click here to join our channel and stay updated with the latest news.

Next