Advertisement
ಒಪ್ಪೋ ಈ ಸ್ಮಾರ್ಟ್ ಫೋನ್ ನನ್ನು ಸದ್ಯಕ್ಕೆ ಜಪಾನ್ ನಲ್ಲಿ ಬಿಡುಗಡೆ ಮಾಡಿದ್ದು, ಸದ್ಯಕ್ಕೇ ಭಾರತದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಕಂಪನಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
Related Articles
Advertisement
ಒಪ್ಪೋ ರೆನೋ 5 ಎ ಬೆಲೆ ಮತ್ತು ಲಭ್ಯತೆ :
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 765 ಜಿ ಪ್ರೊಸೆಸರ್ನಲ್ಲಿ ಒಪ್ಪೊ ರೆನೋ 5 ಎ ನನ್ನು ಪರಿಚಯಿಸಲಾಗಿದ್ದು, 128 ಜಿಬಿ ಸ್ಟೋರೇಜ್ ಸೌಲಭ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್ ಫೋನ್ ನ ಬೆಲೆಯ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಹಾಗೂ ಭಾರತದಲ್ಲಿ ಬಿಡುಗಡೆಯಾದರೇ ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತದೆ ಎನ್ನುವ ಸುಳಿವನ್ನೂ ಕೂಡ ಬಿಟ್ಟುಕೊಡಲಿಲ್ಲ. ಒಪ್ಪೋ ರೆನೋ 5 ಎ ನ ಮಾರಾಟ ಮುಂದಿನ ತಿಂಗಳು ಅಂದರೇ, ಜೂನ್ ನಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಸ್ಮಾರ್ಟ್ ಫೋನ್ ನನ್ನು ಐಸ್ ಬ್ಲೂ ಮತ್ತು ಸಿಲ್ವರ್ ಬ್ಲ್ಯಾಕ್ ಬಣ್ಣ ಆಯ್ಕೆಗಳಲ್ಲಿ ಒಪ್ಪೋ ತನ್ನ ಗ್ರಾಹಕರಿಗೆ ನೀಡುಯತ್ತಿದೆ. ಒಪ್ಪೋ ರೆನೋ 5 ಎ ಕಳೆದ ವರ್ಷ ಬಿಡುಗಡೆಯಾದ ಒಪ್ಪೋ ರೆನೋ 3 ಎ ಯ ಯಶಸ್ವಿ ರೂಪಾಂತರವಾಗಿದ್ದು, ಇದರ ಬೆಲೆ ಜೆಪಿವೈ 39,800 ಅಂದರೆ ಸುಮಾರು 26,600 ರೂಪಾಯಿಗಳು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಒಪ್ಪೋ ರೆನೋ 5 ಎ ಯ ವಿಶೇಷತೆಗಳೇನು..?
ಒಪ್ಪೋ ರೆನೋ 5 ಎ ಆಂಡ್ರಾಯ್ಡ್ 11 ಆಧಾರಿತ ColorOS 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.5-ಇಂಚಿನ ಫುಲ್ ಎಚ್‌ಡಿ + ಡಿಸ್ಪ್ಲೇ ಹೊಂದಿದ್ದು, 1,080 × 2,400 ಪಿಕ್ಸೆಲ್ ಗಳ ಸ್ಕ್ರೀನ್ ರೆಸಲ್ಯೂಶನ್ ಮತ್ತು 20: 9 ಆಕಾರ ಅನುಪಾತವನ್ನು ಹೊಂದಿದೆ.
ಪವರ್ ಬ್ಯಾಕಪ್ ಗಾಗಿ ಫೋನ್ 4,000mAh ಬ್ಯಾಟರಿಯನ್ನು ಹೊಂದಿದೆ, ಇದು 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಗ್ರಾಹಕರಿಗೆ ಲಭ್ಯವಾಗುತ್ತದೆ.
ಈ ಫೋನಿನ ಕ್ಯಾಮರಾ ಬಗ್ಗೆ ಹೇಳುವುದಾದರೆ, ಒಪ್ಪೊ ರೆನೋ 5 ಎ (Oppo Reno 5A) ನಲ್ಲಿ ಛಾಯಾಗ್ರಹಣಕ್ಕಾಗಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ.
ಇದನ್ನೂ ಓದಿ : 2ನೇ ಡೋಸ್ ಗೆ ಮುಂದುವರಿದ ಅಲೆದಾಟ; ವಾರದ ನಂತರವೂ ಎಲ್ಲರಿಗೂ ಸಿಗುವುದು ಅನುಮಾನ