Advertisement

Oppo Reno 5 ಸ್ಮಾರ್ಟ್ ಫೋನ್ ಬಿಡುಗಡೆ; ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ

12:17 PM Jan 01, 2021 | Team Udayavani |

ನವದೆಹಲಿ:  ಒಪ್ಪೋ ಗುರುವಾರ (ಡಿ.31) ಅಧಿಕೃತವಾಗಿ ರೆನೋ 5 4ಜಿ ಸ್ಮಾರ್ಟ್ ಫೋನ್ ಲೋಕಾರ್ಪಣೆಗೊಳಿಸಿದೆ.  ಮೊದಲಿಗೆ  ಈ ಮೊಬೈಲ್ ವಿಯೇಟ್ನಾಂ ನಲ್ಲಿ ಮಾತ್ರ ಲಭ್ಯವಿರಲಿದ್ದು ನಂತರದಲ್ಲಿ ಇತರ ದೇಶಗಳಲ್ಲಿ ಗ್ರಾಹಕರ ಕೈಗೆಟುಕಲಿದೆ.

Advertisement

ಒಪ್ಪೋ ರೆನೋ 5 ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಫುಲ್ HD + ಸಾಮಾರ್ಥ್ಯದ 6.44 ಇಂಚಿನ ಅಮೋಲ್ಡ್ ಡಿಸ್ ಪ್ಲೇ ಹಾಗೂ 90Hz ರೀಪ್ರೆಶ್ ರೇಟ್ ಹೊಂದಿದೆ.ಇದರೊಂದಿಗೆ ಡಿಸ್ ಪ್ಲೇ ನಲ್ಲಿಯೇ ಫಿಂಗರ್ ಪ್ರಿಂಟ್ ಸೌಲಭ್ಯ  ನೀಡಲಾಗಿದೆ.

ಈ ನೂತನ ಸ್ಮಾರ್ಟ್ ಪೋನ್ ಓಕ್ಟಾ ಕೋರ್ ಕ್ವಾಲ್ ಕಾಂ ಸ್ನ್ಯಾಪ್ ಡ್ರ್ಯಾಗನ್ 720ಜಿ ಪ್ರೊಸೆಸ್ಸರ್ ಹೊಂದಿದ್ದು, 8 ಜಿಬಿ RAM ಮತ್ತು 256 GB  ಇನ್ ಬಿಲ್ಟ್ ಸ್ಟೋರೇಜ್ ಹೊಂದಿದೆ.  ಮಾತ್ರವಲ್ಲದೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಿಸಬಹುದಾಗಿದೆ.

ಸಾಫ್ಟ್ ವೇರ್ ನಲ್ಲಿ ಆ್ಯಂಡ್ರಾಯ್ಡ್ 11ರ ಕಲರ್ ಓಎಸ್ ಹೊಂದಿದ್ದು, 4,310 mAh  ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.  ಇನ್ನು ಕ್ಯಾಮಾರ ವಿಭಾಗ ಅತ್ಯುತ್ತಮವಾಗಿದ್ದು, 44 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮರ, 64 ಎಂಪಿ ಪ್ರಾಥಮಿಕ ಸೆನ್ಸಾರ್, 8 ಎಂಪಿ ಅಲ್ಟ್ರಾವೈಡ್ ಆ್ಯಂಗಲ್ ಸೆನ್ಸಾರ್, 3 ಎಂಪಿ ಡೆಪ್ತ್ ಸೆನ್ಸಾರ್, 2 ಎಂಪಿ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ:  ಹೊಸ ವರ್ಷ-ಹೊಸ ಭರವಸೆ: ಸ್ಯಾಂಡಲ್ ವುಡ್ ಸ್ಟಾರ್ ಗಳಿಂದ ನಾಡಿನ ಜನತೆಗೆ ಶುಭಾಶಯ

Advertisement

ಒಪ್ಪೋ ರೆನೋ 5 5ಜಿ: ಇನ್ನು ಒಪ್ಪೋ ಸಂಸ್ಥೆ 5 ಜಿ ಸ್ಮಾರ್ಟ್ ಪೋನ್ ಕೂಡ ಬಿಡುಗಡೆಗೊಳಿಸಿದ್ದು, ಇದು 6.43 ಇಂಚಿನ ಫುಲ್ HD+ ಅಮೋಲ್ಡ್ ಡಿಸ್ ಪ್ಲೇಯನ್ನು ಒಳಗೊಂಡಿದೆ. ಮಾತ್ರವಲ್ಲದೆ ಇದರಲ್ಲಿ ಕ್ವಾಲ್ ಕಾಂ ಸ್ನ್ಯಾಪ್ ಡ್ರ್ಯಾಗನ್ 765ಜಿ ಪ್ರೊಸೆಸ್ಸರ್ ಇದ್ದು, 8ಜಿಬಿ/12ಜಿಬಿ  RAM ಮತ್ತು 256 ಜಿಬಿಯವರೆಗೂ ವಿಸ್ತರಿಸಬಹುದಾದ ಸ್ಟೋರೇಜ್ ಕೆಪಾಸಿಟಿಯನ್ನು ಹೊಂದಿದೆ.

ಈ ಸ್ಮಾರ್ಟ್ ಫೋನ್ 4,300 mAh  ಸಾಮರ್ಥ್ಯದ ಬ್ಯಾಟರಿಯನ್ನು , 64 ಎಂಪಿ ಪ್ರಾಥಮಿಕ ಕ್ಯಾಮಾರ, 32 ಎಂಪಿ ಸೆಲ್ಫಿ ಕ್ಯಾಮಾರವನ್ನು ಒಳಗೊಂಡಿದೆ..

ಬೆಲೆ: ಈ ಸ್ಮಾರ್ಟ್ ಫೋನ್ ಬೆಲೆ ಸುಮಾರು 27 ಸಾವಿರ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:  2021: ಬದುಕು ಕಲಿಸಿದ ಪಾಠ- ಚಿಗುರಿದ ಕನಸು;“ನನ್ನ ಪ್ರೀತಿಯ ಗುಜರಿ ಅಂಗಡಿ”

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next