Advertisement

“ಒಪ್ಪೊ ಪ್ಯಾಡ್‌ ಏರ್‌’ಟ್ಯಾಬ್‌ ಬಿಡುಗಡೆ; ವಿಶೇಷತೆ ಏನು?

09:06 PM Jul 18, 2022 | Team Udayavani |

ಜನಪ್ರಿಯ ಮೊಬೈಲ್‌ ತಯಾರಿಕಾ ಕಂಪನಿಯಾದ “ಒಪ್ಪೊ’, ಭಾರತದಲ್ಲಿ ಇದೇ ಮೊದಲಿಗೆ ಟ್ಯಾಬ್ಲೆಟ್‌ ಕ್ಷೇತ್ರಕ್ಕೆ ಕಾಲಿಟ್ಟಿದೆ.

Advertisement

ಸೋಮವಾರದಂದು “ಒಪ್ಪೊ ಪ್ಯಾಡ್‌ ಏರ್‌’ ಆ್ಯಂಡ್ರಾಯ್ಡ ಟ್ಯಾಬ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. 10.3 ಇಂಚು ಡಿಸ್‌ಪ್ಲೇ, 2ಕೆ ಸ್ಕ್ರೀನ್‌ ರೆಸೆಲ್ಯೂಷನ್‌, ಕ್ವಾಲ್ಕೋಮ್‌ ಸ್ನಾಪ್‌ಡ್ರ್ಯಾಗನ್‌ 680 ಪ್ರಾಸೆಸರ್‌ ಜೊತೆಗೆ ಅತ್ಯಂತ ಶಕ್ತಿಶಾಲಿಯಾದ 7,100 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿಯನ್ನು ಇದು ಹೊಂದಿದೆ.

4 GB RAM ಹಾಗೂ 64 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವಿರುವ ಟ್ಯಾಬ್‌ 16,999 ರೂ. ಬೆಲೆ ಹೊಂದಿದ್ದರೆ, 4 GB RAM ಹಾಗೂ 128 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವಿರುವ ಟ್ಯಾಬ್‌ 19,999 ರೂ.ಗಳಾಗಲಿವೆ.

ಜು. 23ರಿಂದ ಫ್ಲಿಪ್‌ಕಾರ್ಟ್‌, ಒಪ್ಪೊ ಶೋ ರೂಂಗಳಲ್ಲಿ ಇದು ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next