Advertisement

ಕಾಡಾನೆ ಸೆರೆಗೆ ಕಾರ್ಯಾಚರಣೆ

09:08 PM Jun 10, 2021 | Team Udayavani |

ಹಾಸನ/ಸಕಲೇಶಪುರ: ಜಿಲ್ಲೆಯ ಅರಣ್ಯ ವಿಭಾಗದಬೇಲೂರು, ಆಲೂರು, ಸಕಲೇಶಪುರ, ಅರಕಲಗೂಡುಮತ್ತು ಯಸಳೂರು ವಲಯಗಳ ವ್ಯಾಪ್ತಿಯಲ್ಲಿ ಭೀತಿಹುಟ್ಟಿಸುತ್ತಿರುವ ಎರಡು ಪುಂಡಾನೆಗಳನ್ನು ಸೆರೆ ಹಿಡಿದುರೇಡಿಯೋ ಕಾಲರ್‌ ಅಳವಡಿಸಲು ಜೂ.10ರಿಂದ 13ರವರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜು ತಿಳಿಸಿದ್ದಾರೆ.

Advertisement

ಮಲೆನಾಡು ಭಾಗದಲ್ಲಿ ನಿರಂತರವಾಗಿ ಉಪಟಳಮಾಡುತ್ತಿರುವ ಗುಂಡ ಎಂಬ ಪುಂಡಾನೆಯನ್ನು ಸೆರೆಹಿಡಿದು ರೇಡಿಯೋ ಕಾಲರ್‌ ಅಳವಡಿಸಿ ಮಲೆಮಹದೇಶ್ವರ ವನ್ಯಜೀವಿಧಾಮಕ್ಕೆ ಸ್ಥಳಾಂತರಿಸಲು ಹಾಗೂಮೌಂಟೇನ್‌ ಎಂಬ ಇನ್ನೊಂದು ಪುಂಡಾನೆಯನ್ನೂ ಸೆರೆಹಿಡಿದು ರೇಡಿಯೋ ಕಾಲರ್‌ ಅಳವಡಿಸಿ ಕಾವೇರಿವನ್ಯಜೀವಿಧಾಮಕ್ಕೆ ಸ್ಥಳಾಂತರಿಸುವ ಸಲುವಾಗಿಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಈ ವೇಳೆನಿರ್ಧರಿಸಿದ ಸ್ಥಳಗಳಲ್ಲಿ ರೈತರು, ಸಾರ್ವಜನಿಕರು ಕಾರ್ಯಾಚರಣೆಗೆ ಸಹಕರಿಸುವಂತೆ ಕೋರಿದ್ದಾರೆ.

ಸುಮಾರು 120 ಮಂದಿಯ ಅರಣ್ಯ ಇಲಾಖೆಯ ತಂಡವನ್ನುಈ ಕಾರ್ಯಾಚರಣೆಗಾಗಿ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ.ಇಬ್ಬರು ಸಾವು: ತಾಲೂಕಿನ ಕಿರುಹುಣಸೆ ಸಮೀಪ ಕಳೆದಕೆಲವು ದಿನಗಳ ಹಿಂದೆ ಕಾಫಿ ಬೆಳೆಗಾರರೋರ್ವರುಕಾಡಾನೆ ದಾಳಿಗೆ ಬಲಿಯಾಗಿದ್ದರು. ಹೀಗಾಗಿ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.ಸರ್ಕಾರದ ಅನುಮತಿ ಆಧಾರದಲ್ಲಿ 2 ಕಾಡಾನೆಗಳನ್ನುಕಳೆದ ಜೂನ್‌ 6ರಿಂದಲೇ ಹಿಡಿಯುವ ಕಾರ್ಯಾಚರಣೆಆರಂಭಿಸಬೇಕಾಗಿತ್ತು. ಆದರೆ ಅರಣ್ಯ ಸಿಬ್ಬಂದಿಗೆ ಕೋವಿಡ್‌ಲಸಿಕೆ ಸಿಗದ ಹಿನ್ನೆಲೆ ಕಾರ್ಯಾಚರಣೆ 4 ದಿನ ತಡವಾಗಿದೆ.ಈ ಹಿನ್ನೆಲೆ ಯಾವುದೆ ರೀತಿಯ ಗೊಂದಲವಾಗದಂತೆಅರಣ್ಯ ಇಲಾಖೆಯ 120ಕ್ಕೂ ಹೆಚ್ಚು ಸಿಬ್ಬಂದಿಗಳಿಗೆಕೊರೊನಾ ರ್ಯಾಪಿಡ್‌ ಪರೀಕ್ಷೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next