Advertisement

ಬ್ರಿಟನ್‌ ರಾಣಿ ಬದುಕಿರುವಾಗಲೇ “ಅಂತ್ಯಸಂಸ್ಕಾರದ ಪ್ಲಾನ್’ಸೋರಿಕೆ !

07:57 PM Sep 04, 2021 | Team Udayavani |

ಲಂಡನ್‌:  ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಬದುಕಿರುವಾಗಲೇ “ಅವರ ಅಂತ್ಯಸಂಸ್ಕಾರ ಯೋಜನೆ’ಯ ರಹಸ್ಯ ದಾಖಲೆಯೊಂದು ಸೋರಿಕೆಯಾಗಿದೆ!

Advertisement

“ಆಪರೇಷನ್‌ ಲಂಡನ್‌ ಬ್ರಿಡ್ಜ್’ ಎಂಬ ಕೋಡ್‌ನೇಮ್‌ ಇರುವಂತಹ ಕಡತದಲ್ಲಿ, ರಾಣಿ ಕೊನೆಯುಸಿರೆಳೆದ ದಿನ ಮತ್ತು ನಂತರದ ದಿನಗಳಲ್ಲಿ ಏನೇನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಯಾರು-ಏನು ಮಾಡಬೇಕು, ಭದ್ರತೆ ಹೇಗಿರಬೇಕು ಎಂಬೆಲ್ಲ ವಿವರಗಳನ್ನು ನಮೂದಿಸಲಾಗಿತ್ತು. ಅಮೆರಿಕದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸುದ್ದಿ ಸಂಸ್ಥೆ “ಪೊಲಿಟಿಕೋ’ ಈ ಸೋರಿಕೆಯಾದ ದಾಖಲೆಗಳನ್ನು ಪ್ರಕಟಿಸಿದೆ. ಮರಣಾನಂತರದ ಯೋಜನೆಯೊಂದು ಈ ರೀತಿ ಬಹಿರಂಗವಾಗಿರುವುದು ಇದೇ ಮೊದಲು.

ದಾಖಲೆಯಲ್ಲೇನಿದೆ?
ಬ್ರಿಟನ್‌ನ ಇತಿಹಾಸದಲ್ಲೇ ದೀರ್ಘಾವಧಿ ಪಟ್ಟದಲ್ಲಿರುವ ರಾಣಿ ಎಂಬ ಖ್ಯಾತಿ 95 ವರ್ಷದ 2ನೇ ಎಲಿಜಬೆತ್‌ಗಿದೆ. ಅವರು ಮೃತಪಟ್ಟ 10 ದಿನಗಳ ಬಳಿಕವೇ ಅಂತ್ಯಸಂಸ್ಕಾರ ನಡೆಸಬೇಕು. ಪಾರ್ಥಿವ ಶರೀರವನ್ನು ಮಣ್ಣು ಮಾಡುವ ಮುನ್ನ ಅವರ ಪುತ್ರ, ಪ್ರಿನ್ಸ್‌ ಚಾರ್ಲ್ಸ್ ದೇಶಾದ್ಯಂತ ಪ್ರವಾಸ ಕೈಗೊಳ್ಳಬೇಕು. ಹೌಸ್‌ ಆಫ್ ಪಾರ್ಲಿಮೆಂಟ್‌ನಲ್ಲಿ 3 ದಿನಗಳ ಕಾಲ ಪಾರ್ಥಿವ ಶರೀರವನ್ನು ಇಟ್ಟು, ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಬೇಕು. ಈ ಸಮಯದಲ್ಲಿ ದೇಶದ ಮೂಲೆ ಮೂಲೆಗಳಿಂದಲೂ ಜನಸಾಗರ ಆಗಮಿಸುವ ಸಾಧ್ಯತೆಯಿರುವ ಕಾರಣ, ಎಲ್ಲ ರೀತಿಯ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು. ಸರ್ಕಾರಿ ಗೌರವಗಳೊಂದಿಗೆ ರಾಣಿಯ ಅಂತ್ಯಸಂಸ್ಕಾರ ನಡೆಸುವ ದಿನ ದೇಶವ್ಯಾಪಿ ಶೋಕಾಚರಣೆ ಘೋಷಿಸಬೇಕು ಎಂಬಿತ್ಯಾದಿ ವಿವರಗಳು ಸೋರಿಕೆಯಾದ ದಾಖಲೆಗಳಲ್ಲಿವೆ.

“ಆಪರೇಷನ್‌ ಲಂಡನ್‌ ಬ್ರಿಡ್ಜ್’ ಸೋರಿಕೆ ಕುರಿತು ಬಕಿಂಗ್‌ಹ್ಯಾಂ ಅರಮನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ :ಕಾನೂನು ಬಾಹಿರವಾಗಿ ಮತಾಂತರ, 8 ಮಂದಿ ಬಂಧನ : ಅಂಗವಿಕಲರು, ನಿರುದ್ಯೋಗಿಗಳೇ ಇವರ ಟಾರ್ಗೆಟ್

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next