Advertisement

“ಆಪರೇಷನ್‌ ಕಮಲ’ದ ವಿಚಾರ ಅನರ್ಹರ ಬಾಯಿಂದಲೇ ಬರುತ್ತಿದೆ: ಸಿದ್ದರಾಮಯ್ಯ

11:29 PM Nov 16, 2019 | Team Udayavani |

ಮೈಸೂರು/ಹೊಸಕೋಟೆ: ಉಪ ಚುನಾ ವಣೆಯಲ್ಲಿ ಬಿಜೆಪಿ ಎಂಟು ಸ್ಥಾನ ಗೆಲ್ಲುವುದಿಲ್ಲ. ಹೀಗಾಗಿ, ಉಪ ಚುನಾವಣೆ ಬಳಿಕ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, “ಆಪರೇಷನ್‌ ಕಮಲ’ದ ವಿಚಾರ ಗಳು ಈಗ ಒಂದೊಂದಾಗಿ ಹೊರ ಬರುತ್ತಿವೆ. ಬಿಜೆಪಿಯವರು ಆಪರೇಷನ್‌ ಕಮಲ ಮಾಡಲ್ಲ ಅಂತ ಹೇಳಿಕೊಂಡು ಸಾಚಾಗಳಂತೆ ಮಾತನಾಡುತ್ತಿದ್ದರು.

Advertisement

ಈಗ ಅನರ್ಹರೇ ಹೇಳುತ್ತಿರುವುದರಿಂದ ಆಪರೇಷನ್‌ ಕಮಲದ ಬಗ್ಗೆ ನಾವೇನು ಸಾಬೀತು ಮಾಡುವ ಅವಶ್ಯಕತೆ ಇಲ್ಲ. ಸಿಎಂ ಯಡಿಯೂರಪ್ಪ ಅವರು, ಬಿಜೆಪಿಗೆ ಬಂದವರೆಲ್ಲರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಶಂಕರ್‌ಗೆ ಎಂಎಲ್‌ಸಿ ಮಾಡಿ ಮಂತ್ರಿ ಮಾಡುವ, ಉಪ ಚುನಾವಣೆಯಲ್ಲಿ ಅನರ್ಹರು ಗೆದ್ದು ಬಂದರೆ ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ. ಒಬ್ಬ ಮುಖ್ಯಮಂತ್ರಿಯಾಗಿ ಚುನಾವಣಾ ನೀತಿ ಸಂಹಿತೆ ಪಾಲಿಸದವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಇದೇ ವೇಳೆ, ಜೆಡಿಎಸ್‌ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಜೆಡಿಎಸ್‌ನವರಿಗೆ ಏನು ಸ್ಟ್ಯಾಂಡ್‌ ಇದೆ, ಅವರಿಗೆ ಸ್ಟ್ಯಾಂಡೇ ಇಲ್ಲ ಎಂದು ಟೀಕಿಸಿದರು. ಇದಕ್ಕೂ ಮೊದಲು ಹೊಸಕೋಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪದ್ಮಾವತಿ ಸುರೇಶ್‌ ಪರ ಪ್ರಚಾರ ಭಾಷಣ ಮಾಡಿದ ಸಿದ್ದರಾಮಯ್ಯ, ಉಪಚುನಾವಣೆಗೆ ಕಾರಣರಾಗಿರುವ ಅನರ್ಹ ಶಾಸಕರುಗಳನ್ನು ಮತದಾರರು ಸೋಲಿಸುವ ಮೂಲಕ ಶಾಶ್ವತ ವಾಗಿ ಮನೆಗೆ ಕಳುಹಿಸಬೇಕು. ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್‌ ಸೋಲಿಗೆ ಯಡಿ ಯೂರಪ್ಪ ಹಾಗೂ ಆಪರೇಷನ್‌ ಕಮಲಕ್ಕೆ ಪ್ರೋತ್ಸಾಹಿಸಿದ ಕೇಂದ್ರ ಸಚಿವ ಅಮಿತ್‌ ಶಾರೇ ಕಾರಣರಾಗಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next