Advertisement

ಆಪರೇಷನ್‌ ಆಡಿಯೋ ಪಾರ್ಟ್‌-2

12:26 AM Feb 14, 2019 | |

ಬೆಂಗಳೂರು: ಗುರುಮಿಠಕಲ್‌ ಶಾಸಕ ನಾಗನಗೌಡ ಅವರ ಪುತ್ರ ಶರಣುಗೌಡ ಅವರೊಂದಿಗೆ ಆಪರೇಷನ್‌ ಕಮಲ ಸಂಬಂಧ ಯಡಿಯೂರಪ್ಪ ನಡೆಸಿದ್ದಾರೆನ್ನಲಾದ ಮಾತುಕತೆ ಆಡಿಯೋದ 2ನೇ ಕಂತು ಬುಧವಾರ ಹರಿದಾಡುತ್ತಿದ್ದು ರಾಜಕೀಯ ಸಂಚಲನ ಸೃಷ್ಟಿಸಿದೆ.

Advertisement

ಆಡಿಯೋದಲ್ಲಿ ಸ್ಪೀಕರ್‌, ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಲಘುವಾಗಿ ಮಾತ ನಾಡಿರುವುದು ಕಂಡುಬರುತ್ತದೆ. ಯಡಿಯೂರಪ್ಪ, ಶಿವನಗೌಡ ನಾಯಕ್‌, ಶರಣುಗೌಡ, ಪ್ರೀತಂಗೌಡ ನಡುವಿನ ಸಂಭಾಷಣೆ ಇದಾಗಿದೆ ಎಂದು ಹೇಳಲಾಗಿದ್ದು, ಇದರ ಬಗ್ಗೆ ಖಚಿತತೆ ಇಲ್ಲ.

ಕುಮಾರಸ್ವಾಮಿ ವಿಧಾನ ಸಭೆಯಲ್ಲಿ ಮಂಗಳ ವಾರ, ಮೂರು ನಿಮಿಷದ ಆಡಿಯೋಗೆ ನೀವು ಜೀರ್ಣಿಸಿಕೊಳ್ಳುತ್ತಿಲ್ಲ. ಇನ್ನು ಪೂರ್ಣ ಆಡಿಯೋ ಬಿಟ್ರೆ ಹೇಗೆ ಎಂದು ಕಿಚಾಯಿಸಿದ್ದರು. ಇದರ ಬೆನ್ನಲ್ಲೇ ಆಡಿಯೋ ಬಿಡುಗಡೆಯಾಗಿದೆ. ಈ ಸಂಭಾ ಷಣೆಯಲ್ಲೂ ನಾಗನಗೌಡ ಅವರ ಪುತ್ರನನ್ನು “ನಿಮ್ಮ ತಂದೆ ಕೈಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ನೀನೇ ಚುನಾವಣೆಗೆ ಸ್ಪರ್ಧೆ ಮಾಡು. ನಮ್ಮ ಸರ್ಕಾರ ಬಂದ ತಕ್ಷಣ ನಿನ್ನನ್ನು ಮಂತ್ರಿ ಮಾಡಲಾಗುವುದು’ ಎಂಬ ಭರವಸೆ ಸಹ ನೀಡಲಾಗುತ್ತದೆ.

ಈ ನಡುವೆ, ಆಡಿಯೋ ಸಂಭಾಷಣೆ ವೇಳೆ ಶಾಸಕ ಪ್ರೀತಂಗೌಡ ಸಹ ಹಾಜರಿದ್ದು ಜೆಡಿಎಸ್‌ ಹಾಗೂ ದೇವೇಗೌಡ- ಕುಮಾರಸ್ವಾಮಿಯವರ ಬಗ್ಗೆ ಮಾತನಾಡಿದ್ದಾರೆ ಎಂಬ ವಿಚಾರ ಜೆಡಿಎಸ್‌ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅತ್ತ ಹಾಸನದಲ್ಲಿ ಪ್ರೀತಂಗೌಡ ಮನೆಯ ಮೇಲೆ ಗುಂಪೊಂದು ದಾಳಿ ನಡೆಸಿದೆ.

ಆಡಿಯೋ ತಿರುಚಲಾಗಿದೆ. ಸಂಪೂರ್ಣ ಆಡಿಯೋ ಬಿಟ್ಟು ಕೇವಲ 3 ನಿಮಿಷದ ಆಡಿಯೋ ಬಿಡುಗಡೆ ಮಾಡಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡುವ ಕಾರ್ಯತಂತ್ರದ ಭಾಗವಾಗಿ ಈ ಆಡಿಯೋ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.

Advertisement

ಸಂಭಾಷಣೆಯಲ್ಲಿ ಜನಾರ್ದನರೆಡ್ಡಿ ಹೆಸರು ಸಹ ಪ್ರಸ್ತಾಪವಾಗುತ್ತದೆ. ಶಿವನಗೌಡ ನಾಯಕ್‌, ಹಿಂದೊಮ್ಮೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗ ಜನಾರ್ದನರೆಡ್ಡಿ 10 ಕೋಟಿ ರೂ. ಪಡೆದುಕೊಂಡರು. ಆದರೆ, ನನಗೆ 3.20 ಕೋಟಿ ರೂ. ನೀಡಿದರು ಎಂದು ಹೇಳುತ್ತಾರೆ. ಜತೆಗೆ, ರಮೇಶ್‌ ಜಾರಕಿಹೊಳಿಗೆ ಸಾವಿರ ಕೋಟಿ ಆಸ್ತಿ ಇದೆ. ಆತನಿಗೆ ಕಡಿಮೆ ಕೊಟ್ಟರೂ ನಡೆಯುತ್ತದೆ. ಶರಣುಗೌಡಗೆ ಜಾಸ್ತಿ ಕೊಡಿ, ಮಿಡ್ಲ್ ಕ್ಲಾಸ್‌ ಫ್ಯಾಮಿಲಿ, ಬ್ಯಾಕಪ್‌ ಜಾಸ್ತಿ ಏನೂ ಇಲ್ಲ ಎನ್ನುತ್ತಾರೆ.

ಆಡಿಯೋ ಪ್ರಮುಖ ಸಂಭಾಷಣೆ
ಧ್ವನಿ 1: ಇವರ ಫಾದರ್‌ಗೆ 85 ಇಯರ್‌ ಆಗಿದೆ. ಹುಡುಗನನ್ನು ಮಂತ್ರಿ ಮಾಡೋದಾದರೆ ವಿಚಾರ ಮಾಡಿ. ಎಲೆಕ್ಷನ್‌ ಎಕ್ಸ್‌ಪೆಂಡೀಚರ್‌ 25 ರಿಂದ 30 ಕೋಟಿ ರೂ. ಇವರಿಗೆ 25 ಕೋಟಿ ರೂ.
ಧ್ವನಿ 2: ನೀನೇ ನಿಂತ್ಕೊತೀಯ ಅಸೆಂಬ್ಲಿಗೆ
ಧ್ವನಿ 3: ಪರಿಸ್ಥಿತಿ ಏನೇನಾಗುತ್ತದೆ
ಧ್ವನಿ 2: ಮೊದಲು ಬಾಂಬೆಗೆ ಹೋಗು. ಸುಧಾಕರ್‌ ಹೋಗಿದ್ದಾನೆ. 13 ರಿಂದ 14 ಜನ ಆಗ್ತಾರೆ. ನಿನ್ನ ನನ್ನ ಮಗನಂತೆ ನೋಡಿಕೊಳ್ತೇನೆ. ನಾನು ಜೀವನದಲ್ಲಿ ಒಮ್ಮೆ ಭರವಸೆ ಕೊಟ್ಟರೆ, ಹಿಂದೆ ಸರಿಯೋದು, ದ್ರೋಹ ಮಾಡೋದು ಜೀವನದಲ್ಲಿ ಇಲ್ಲ
ಧ್ವನಿ 1: ವಿಜಯಣ್ಣ ಜತೆ ಮಾತಾಡ್ತೇನೆ
ಧ್ವನಿ 3: ಮೆಂಬರ್‌ಶಿಪ್‌ ತೆಗೆದ್ರೆ
ಧ್ವನಿ 2: ಏನೂ ಆಗಲ್ಲ, ವಿಪ್‌, ನೋಟಿಸ್‌ ಕವಡೆ ಕಾಸಿನ ಕಿಮ್ಮತ್ತಿಲ್ಲ
ಧ್ವನಿ 2: ವಿಜಯಣ್ಣ ಬಾಂಬೆಯಲ್ಲೇ ಇದ್ದಾರೆ. ಸೇರಿಕೊಳ್ಳಿ, ನನ್‌ ಜವಾಬ್ದಾರಿ, ನೀನ್‌ ಬಾ ಮಂತ್ರಿಯಾಗು, ಆಮೇಲೆ ಖರ್ಚು ವೆಚ್ಚ ನೋಡೋಣ. ನೀನ್‌ ಬಾ, ಲೇಟ್‌ ಮಾಡೋಂಗಿಲ್ಲ.
ಧ್ವನಿ 3: ಸ್ಪೀಕರ್‌ ಅನರ್ಹ ಮಾಡಿದ್ರೆ
ಧ್ವನಿ 2: ಹತ್ತು ಜನ ಇದ್ದಾರಲ್ಲಾ, ಏನೂ ಆಗಲ್ಲ. ನಿಮ್ಮ ಫಾದರ್‌ ಮಾಡಬೇಕಾದದ್ದು 10 ರಿಂದ 15 ಜನ ರಾಜೀನಾಮೆ ಕೊಟ್ಟರೆ ಕ್ರಮ ಪ್ರಶ್ನೆ ಎಲ್ಲಿಂದ ಬಂತು.
ಧ್ವನಿ 3: ನನ್‌ ಜವಾಬ್ದಾರಿ ನಿಮುª
ಧ್ವನಿ 1: ನೂರಕ್ಕೆ ನೂರಕ್ಕೆ ನೀನು ಸಚಿವ
ಧ್ವನಿ 2: ಹದಿಮೂರು ಜನ ತಲುಪಿದರೆ. 17-18 ಆಗೋಗುತ್ತೆ, ಎಲ್ಲಾ ಫಾರ್ಮಾಲಿಟೀಸ್‌ ಮಾಕ್ಸಿಮಮ್‌ 6-7 ದಿನ ಮಗಿಯುತ್ತೆ. ಸ್ಪೆಷಲ್‌ ಫ್ಲೈಟ್‌ನಲ್ಲಿ ಬರ್ತಾರೆ.
ಧ್ವನಿ 3: ಕುಮಾರಸ್ವಾಮಿ ಎಲೆಕ್ಸನ್‌ ಹೆಲ್ಪ್ ಮಾಡಿದ್ರು
ಧ್ವನಿ 2: ಎಷ್ಟು ಕೊಟ್ರಾ? ಎರಡಾ, ಮೂರಾ. ನನಗೆ ಅವನ ಬಂಡವಾಳ ಗೊತ್ತಿಲ್ಲವಾ? ನೀನ್‌ ರಾಜೀನಾಮೆ ಕೊಟ್ಟ ತಕ್ಷಣ 10 ಕೋಟಿ ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next