Advertisement

ಮೂರು ತಿಂಗಳೊಳಗೆ ಪಿಎಸ್‌ಎಸ್‌ಕೆಗೆ ಚಾಲನೆ

05:44 AM Jun 09, 2020 | Lakshmi GovindaRaj |

ಮಂಡ್ಯ: ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ನಿರಾಣಿ ಷುಗರ್ ಕಂಪನಿ ಮುಂದಿನ 3 ತಿಂಗಳೊಳಗೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಪ್ರಕ್ರಿಯೆ ಆರಂಭಿಸಲಿದೆ ಎಂದು ನಿರಾಣಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುರುಗೇಶ್‌ ಆರ್‌.ನಿರಾಣಿ ವಿಶ್ವಾಸ  ವ್ಯಕ್ತಪಡಿಸಿದರು. ಕಳೆದ ವಾರ ಕಾರ್ಖಾನೆ ಭೇಟಿ ನೀಡಿದ್ದ ಸಮ ಯದಲ್ಲಿ ಯಂತ್ರೋಪಕರಣಗಳ ಸ್ಥಿತಿ-ಗತಿ ಬಗ್ಗೆ ಪರಿಶೀಲನೆ ನಡೆಸಲು ಸಾಧ್ಯವಾಗಲಿಲ್ಲ.

Advertisement

ಈಗ ಮತ್ತೆ ಭೇಟಿ ನೀಡಿ ಯಂತ್ರೋಪಕರಣಗಳ ಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿ, ಯಾವುದನ್ನು ಬದಲಾವಣೆ ಮಾಡಬೇಕು. ಹೊಸದಾಗಿ ಏನೆಲ್ಲಾ ಮಿಷನರಿಗಳ ನ್ನು ಅಳವಡಿಸಬೇಕು. ಆ ಬಿಡಿಭಾಗಗಳು ಸ್ಥಳೀ ಯವಾಗಿ ಸಿಗಲಿವೆಯೇ ಅಥವಾ ಹೊರಗಿನಿಂದ ತರಿಸಬೇಕೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆ ದುಕೊಂಡು ಕಬ್ಬು ಅರೆಯುವಿಕೆ ಪ್ರಕ್ರಿಯೆ ಚಾಲನೆ ನೀಡುವುದಾಗಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಹೇಳಿದರು.

ವಿದ್ಯುತ್‌ ಉತ್ಪಾದನೆಗೆ ಕ್ರಿಯಾಯೋಜನೆ: ಪಾಂಡವಪುರ ಸಕ್ಕರೆ ಕಾರ್ಖಾನೆಯ ಕಬ್ಬು ಅರೆ ಯುವಿಕೆ ಸಾಮರ್ಥ್ಯವನ್ನು ಮುಂದಿನ 5 ವರ್ಷ ಗಳಲ್ಲಿ ಈಗಿರುವ 3500 ಟನ್‌ನಿಂದ 5000 ಟನ್‌ ಗೆ ಹೆಚ್ಚಿಸಲಾಗುವುದು. 5 ಮೆಗಾವ್ಯಾಟ್‌ನಿಂದ  20 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಕ್ರಿಯಾಯೋ ಜನೆ ರೂಪಿಸಲಾಗಿದೆ. ನಿತ್ಯ 60 ಸಾವಿರ ಲೀಟರ್‌ ಎಥೆನಾಲ್‌ ಉತ್ಪಾದಿಸುವ ಡಿಸ್ಟಿಲರಿ ಯನ್ನು ಆರಂಭಿಸಲಾಗುವುದು ಎಂದರು.

ರೈತರಿಗೆ ಕಾಲ ಕಾಲಕ್ಕೆ ಹಣ ಸಂದಾಯ ಮಾಡುವುದರ ಜೊತೆಗೆ ನಿರುದ್ಯೋಗ ಯುವಕ -ಯುವತಿಯರಿಗೆ ತರಬೇತಿ ನೀಡಿ, ಉದ್ಯೋಗದ ಮೂಲಕ ಆರ್ಥಿಕ ಮಟ್ಟ ಹೆಚ್ಚಿಸುವುದು.ಕಬ್ಬು ಬೆಳೆಗಾರರಿಗೆ ವಿಮೆ, ಸಾಮಾಜಿಕ ಭದ್ರತೆ ಒದಗಿಸುವ  ಜೊತೆಗೆ ಸೂಪರ್‌ ಮಾರುಕಟ್ಟೆ  ಸ್ಥಾಪಿಸಿ, ರೈತರು, ಕಾರ್ಮಿಕರಿಗೆ ಅಗ್ಗದ ದರದಲ್ಲಿ ಜೀವನಾವ ಶ್ಯಕ ವಸ್ತುಗಳನ್ನು ನೀಡಲಾಗುವುದು ಎಂದರು.

ಕಬ್ಬು ಬೆಳೆಯುವ ಬಗ್ಗೆ ತರಬೇತಿ: ಸ್ಥಳೀಯವಾಗಿ ತಮ್ಮದೇ ಬ್ಯಾಂಕ್‌ ಸ್ಥಾಪಿಸಿ, ಕಬ್ಬು ಬೆಳೆಗಾರರಿಗೆ ಆರ್ಥಿಕ ಶಕ್ತಿ ತುಂಬುವುದು. ಗುಣಮಟ್ಟದ ಕಬ್ಬಿನ ಬೀಜಗಳು, ರಸಗೊಬ್ಬರ, ಕ್ರಿಮಿನಾಶಕ ಔಷಧಗಳ ನ್ನು ಸಬ್ಸಿಡಿ ದರದಲ್ಲಿ  ನೀಡುವುದು, ರೈತರಿಗೆ ವೈಜ್ಞಾನಿಕ ಪದ್ಧತಿಯಲ್ಲಿ ಕಬ್ಬು ಬೆಳೆಯುವ ಬಗ್ಗೆ ತರ ಬೇತಿ ನೀಡಲಾಗುವುದು. ಕಾರ್ಖಾನೆಯನ್ನು ಆಧು ನಿಕ ತಂತ್ರಜ್ಞಾನದೊಂದಿಗೆ ಅಭಿವೃದಿಪಡಿಸಿ ಮಾದರಿ ಕಾರ್ಖಾನೆಯಾಗಿ ಮಾಡುತ್ತೇವೆ. ನಿರಾಣಿ ಗ್ರೂಪ್‌ ಕೇವಲ ಸಕ್ಕರೆ ಉತ್ಪಾದನೆ ಮಾಡುವುದಷ್ಟೇ ಅಲ್ಲದೆ, ವಿದ್ಯುತ್‌, ಎಥೆನಾಲ್‌, ರೆಕ್ಟಿಫೈಡ್‌ ಸ್ಪಿರಿಟ್‌, ಸಿಒ2, ಸಿಎನ್‌ಜಿ, ಸ್ಯಾನಿಟೈಸರ್‌, ರಸಗೊಬ್ಬರ ಸೇರಿ ದಂತೆ ಹಲವು ಉತ್ಪನ್ನ ಉತ್ಪಾದಿಸಲಾಗುವುದು ಎಂದು ತಿಳಿಸಿದರು.

Advertisement

40 ವರ್ಷಕ್ಕೆ ಗುತ್ತಿಗೆ: ನಿರಾಣಿ ಗ್ರೂಪ್‌ ಸಕ್ಕರೆ ಕಾರ್ಖಾನೆಯನ್ನು ಖರೀದಿಸಿಲ್ಲ. 40 ವರ್ಷಗಳ ಅವ ಧಿಗೆ ಸರ್ಕಾರದಿಂದ ಗುತ್ತಿಗೆ ಪಡೆದಿದೆ. ನಿರಾಣಿ ಸಮೂಹ ಸಂಸ್ಥೆಗಳ ಸಕ್ಕರೆ ಕಾರ್ಖಾನೆಗಳಲ್ಲಿ 36 ಕೋಟಿ ಕಬ್ಬಿನ ಬಾಕಿ  ಉಳಿಸಿಕೊಂಡಿರುವುದು ನಿಜ. ಅದನ್ನು ಮುಂದಿನ 1 ವಾರದೊಳಗೆ ಪಾವತಿಸುತ್ತೇವೆ. ಕಾರ್ಖಾನೆಗಳಿಗೆ ಸಾಲ ಪಡೆದಿ ರುವ ಬ್ಯಾಂಕ್‌ಗಳಿಗೆ ಹಣ ಮರುಪಾವತಿ ಮಾಡಿ ದ್ದೇನೆ. ಯಾವುದೇ ಬ್ಯಾಂಕುಗಳಿಗೂ ವಂಚನೆ ಮಾಡಿಲ್ಲ. ಮಾಜಿ ಸಿಎಂ  ಸಿದ್ದರಾಮಯ್ಯ, ಕುಮಾರಸ್ವಾಮಿ ಮೆಚ್ಚುವಂತೆ ಕಾರ್ಖಾನೆ ಅಭಿವೃದಿ ಪಡಿಸುವುದಾಗಿ ತಿಳಿಸಿದರು.

ನೌಕರರನ್ನು ತೆಗೆಯುವ ವಿಚಾರ ಮಾಡಿಲ್ಲ: ಕಾರ್ಖಾನೆಯಲ್ಲಿರುವ ನೌಕರರನ್ನು ಕೆಲಸದಿಂದ ತೆಗೆಯುವ ಬಗ್ಗೆ ನಾನು ಯಾವುದೇ ವಿಚಾರ ಮಾಡಿಲ್ಲ. ಪರಿಣಿತರನ್ನು, ನಿಷ್ಠರನ್ನು ಉಳಿಸಿಕೊಳ್ಳಲಾಗುವುದು. ಕಾರ್ಖಾನೆ ಗುತ್ತಿಗೆ  ಪಡೆಯುವ  ವೇಳೆ 1 ಕೋಟಿ ರೂ. ಹಣ ಬಿಡ್‌ ಮಾಡಿದ್ದು, 5 ಕೋಟಿ ರೂ. ನಿಶ್ಚಿತ ಠೇವಣಿ ಇಡಲಾಗಿದೆ. 20 ಕೋಟಿ ರೂ. ಹಣವನ್ನು ಕಾರ್ಖಾನೆಗೆ ದುಡಿಯುವ ಬಂಡವಾಳವಾಗಿ ಭರಿಸಲಿದ್ದೇವೆ. ಕಾರ್ಮಿಕರ ಸಂಬಳ ಇದಕ್ಕಿಂತ ಹೆಚ್ಚಿದಲ್ಲಿ ಸರ್ಕಾರವೇ  ಭರಿಸಬೇಕು ಎಂದು ಮುರುಗೇಶ್‌ ನಿರಾಣಿ ಹೇಳಿದರು.

ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸಲು ಬದ್ಧನಾಗಿದ್ದೇನೆ. ಎಲ್ಲರ ಸಹಕಾರ ಬೇಕು. ರೈತರು, ಜನರ ವಿಶ್ವಾಸದೊಂದಿಗೆ ಕಾರ್ಖಾನೆ ಮುನ್ನಡೆಸುವ ಬಯಕೆ ನನ್ನದು. ಇದನ್ನು ವಿರೋಧಿಸುವುದಾದರೆ  ಕಾರ್ಖಾನೆ ಬಿಟ್ಟು ಹೊರನಡೆಯಲು ಸಿದ್ಧನಿದ್ದೇನೆ. 
-ಮುರುಗೇಶ್‌ ನಿರಾಣಿ, ನಿರಾಣಿ ಸಮೂಹ ಸಂಸ್ಥೆಗಳ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next