ವಾತಾವರಣ. ಅರ್ಧ ಶತಮಾನದ ಬಳಿಕ ಜಕಾರ್ತಾ ಏಶ್ಯನ್ ಗೇಮ್ಸ್ ಆತಿಥ್ಯ ವಹಿ ಸು ತ್ತಿದೆ. 1962ರಲ್ಲಿ ಇಲ್ಲಿ ಏಶ್ಯನ್ ಗೇಮ್ಸ್ ಆಯೋಜನೆಯಾಗಿತ್ತು.
Advertisement
ಕೆಂಪು ಟೀ ಶರ್ಟ್ ಧರಿಸಿದ್ದ ವಿದ್ಯಾರ್ಥಿ ಸ್ವಯಂಸೇವಕರು ಕ್ರೀಡಾಪಟುಗಳನ್ನು, ಅಧಿಕಾರಿಗಳನ್ನು ಹಾಗೂ ಕ್ರೀಡಾಭಿಮಾನಿಗಳನ್ನು ಇಲ್ಲಿನ “ಸೊಯಿ ಕರ್ನೋ ಹಟ್ಟಾ’ ವಿಮಾನ ನಿಲ್ದಾಣದಲ್ಲಿ ನಗುಮೊಗದಿಂದ ಸ್ವಾಗತಿಸುತ್ತಿದ್ದಾರೆ. ಅವರಿಗೆ ಎಲ್ಲ ಬಗೆಯ ನೆರವು ನೀಡಿ, ಭದ್ರತಾ ತಪಾಸಣೆಯ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಿದ್ದಾರೆ. ಭಾಷಾ ಸಮಸ್ಯೆ ಎದುರಾದಲ್ಲಿ ಮುಗುಳ್ನಗು ಹಾಗೂ ಬಾಗಿ ನಮಸ್ಕಾರ ಮಾಡುವ ವಿನಯವೇ ಸಾಕಾಗುತ್ತಿದೆ.
ಒಲಿಂಪಿಕ್ಸ್ ಹೊರತು ಪಡಿಸಿದರೆ 2ನೇ ಅತೀ ದೊಡ್ಡ ಕ್ರೀಡಾಕೂಟವಾಗಿರುವ ಏಶ್ಯನ್ ಗೇಮ್ಸ್‌ನ 18ನೇ ಆವೃತ್ತಿಗೆ ಜಕಾರ್ತಾ ಸರ್ವಾಂಗ ಸುಂದರವಾಗಿ ಸಿದ್ಧಗೊಂಡಿದೆ. ಕ್ರೀಡಾ ಗ್ರಾಮ 9,000ಕ್ಕೂ ಹೆಚ್ಚು ಕ್ರೀಡಾಪಗಳಿಗೆ ಮುಂದಿನ 15 ದಿನಗಳ ಕಾಲ ಆಡುಂಬೊಲವಾಗಲಿದೆ. ಸ್ಥಳೀಯ ಪತ್ರಿಕೆಗಳು ಸಿದ್ಧತೆ ಪೂರ್ಣಗೊಂಡಿರುವ ಬಗ್ಗೆ ಇನ್ನೂ ಅನುಮಾನ ವ್ಯಕ್ತಪಡಿಸುತ್ತಿವೆ. ಆರ್ಥಿಕ ಸಂಕಷ್ಟದ ಕಾರಣಕ್ಕೆ ಹನೋಯಿ ಕ್ರಿಡಾಕೂಟ ಆಯೋಜನೆಯಿಂದ ಹಿಂದೆ ಸರಿದ ಮೇಲೆ ಜಕಾರ್ತಾ ಆತಿಥ್ಯ ವಹಿಸಲು ಒಪ್ಪಿಕೊಂಡಿತು. ಒಂದು ತಿಂಗಳಿಗಿಂತಲೂ ಕಡಿಮೆ ಕಾಲಾವಕಾಶದಲ್ಲಿ ಇಲ್ಲಿನ ಕ್ರೀಡಾ ಗ್ರಾಮ ಸಜ್ಜಾಗಿದೆ.