Advertisement

OpenAI ಮಾಜಿ ಸಂಶೋಧಕ ಸುಚಿರ್ ಬಾಲಾಜಿ ಸ್ಯಾನ್ ಫ್ರಾನ್ಸಿಸ್ಕೋದ ಫ್ಲಾಟ್ ನಲ್ಲಿ ಶವವಾಗಿ ಪತ್ತೆ

09:35 AM Dec 14, 2024 | Team Udayavani |

ಸ್ಯಾನ್ ಫ್ರಾನ್ಸಿಸ್ಕೋ: ಚಾಟ್‌ಜಿಪಿಟಿಯನ್ನು ಅಭಿವೃದ್ಧಿಪಡಿಸಿದ ಪ್ರಮುಖ ಕೃತಕ ಬುದ್ಧಿಮತ್ತೆ ಕಂಪನಿಯಾದ ಓಪನ್‌ ಎಐನ ಮಾಜಿ ಸಂಶೋಧಕ ಸುಚಿರ್ ಬಾಲಾಜಿ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿರುವ ತನ್ನ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

OpenAI ನ ಕಾರ್ಯಾಶೈಲಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಚಿರ್ ಬಾಲಾಜಿ ತನ್ನ ಫ್ಲಾಟ್ ನಲ್ಲೆ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರ ಪ್ರಕಾರ, ಈ ಘಟನೆ ನವೆಂಬರ್ 26 ರಂದು ನಡೆದಿದ್ದು, ಡಿಸೆಂಬರ್ 14 ರಂದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬಾಲಾಜಿ ಡಿಸೆಂಬರ್ 14 ರಿಂದ ತನ್ನ ಮನೆಯಿಂದ ಹೊರಬಂದಿಲ್ಲ ಅಲ್ಲದೆ ಅವನ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಫೋನ್ ಕರೆಗಳಿಗೆ ಸಹ ಉತ್ತರಿಸುತ್ತಿರಲಿಲ್ಲ ಇದರಿಂದ ಗಾಣಬರಿಗೊಂಡ ಸ್ನೇಹಿತರು ಫ್ಲಾಟ್ ಬಳಿ ತೆರಳಿದ್ದಾಗ ಬಾಗಿಲು ಒಳಗಿನಿಂದ ಲಾಕ್ ಮಾಡಿರುವುದು ಕಂಡುಬಂದಿದೆ ಈ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಫ್ಲಾಟ್‌ನ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಸುಚಿರ್ ಬಾಲಾಜಿ ಶವ ಪತ್ತೆಯಾಗಿದೆ.

ಪ್ರಾಥಮಿಕ ತನಿಖೆ ವೇಳೆ ಆತ್ಮಹತ್ಯೆ ಎಂದು ಕಂಡು ಬಂದಿದ್ದು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisement

ನಾಲ್ಕು ವರ್ಷಗಳ ಕಾಲ OpenAI ಗಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ ಮತ್ತು ಚಾಟ್ GPT ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರವನ್ನು ವಹಿಸಿದ ಬಾಲಾಜಿ, ಈ ವರ್ಷದ ಆಗಸ್ಟ್‌ನಲ್ಲಿ ಓಪನ್‌ಎಐಗೆ ರಾಜೀನಾಮೆ ನೀಡಿದ್ದರು ಮತ್ತು ಕಂಪನಿಯ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆಯ ಗಂಭೀರ ಆರೋಪಗಳನ್ನು ಮಾಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next