Advertisement

ಊರುಕಾತೇಶ್ವರಿ ಕೊಂಡೋತ್ಸವಕ್ಕೆ ಅದ್ಧೂರಿ ತೆರೆ

02:01 PM Mar 11, 2018 | |

ಸಂತೆಮರಹಳ್ಳಿ: ಸಮೀಪದ ತೆಳ್ಳನೂರು ಗ್ರಾಮದಲ್ಲಿ ಶಂಭುಲಿಂಗೇಶ್ವರ, ಊರು ಕಾತೇಶ್ವರಿ ಹಾಗೂ ತೆಳ್ಳನೂರಮ್ಮನ ಕೊಂಡೋತ್ಸವ ಶುಕ್ರವಾರ ರಾತ್ರಿ ವಿಜೃಂಭ ಣೆಯಿಂದ ನಡೆಯಿತು.

Advertisement

ಈ ಹಬ್ಬವು ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆಯಿತು. ಇದರಲ್ಲಿ ಗ್ರಾಮದ ಶಂಭುಲಿಂಗೇಶ್ವರ, ಊರುಕಾತೇಶ್ವರಿ ಹಾಗೂ ತೆಳ್ಳನೂರಮ್ಮನ ದೇಗುಲಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. 2ನೇ ದಿನ ಗ್ರಾಮದಲ್ಲಿ ಎತ್ತಿನ ಬಂಡಿಗೆ ಅಲಂಕಾರ ಮಾಡಿ ಅದನ್ನು ಗ್ರಾಮದಲ್ಲಿ ಮೆರಣಿಗೆ ಮಾಡಲಾಯಿತು. ಆ ವೇಳೆ ಪ್ರತಿಯೊಬ್ಬರೂ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

ಒಂದೇ ದಿನದಲ್ಲಿ ಮರದ ಆಯ್ಕೆ: ಮೂರು ದಿನಗಳ ಕಾಲ ನಡೆದ ಈ ಹಬ್ಬದಲ್ಲಿ ಕೊನೆಯ ದಿನ ಊರುಕಾ ತೇಶ್ವರಿ ದೇಗುಲದ ಅರ್ಚಕರು ಗ್ರಾಮದ ಯಾವುದೇ ಒಂದು ಮರವನ್ನು ಹೋಗಿ ತಬ್ಬುತ್ತಾರೆ. ಅದು ಯಾರದೇ ಆಗಲಿ ಆ ಮರವನ್ನೇ ಕಡಿದು ಅಂದೇ ಅದಕ್ಕೆ ತುಪ್ಪವನ್ನು ಹಾಕಿ ಬೆಂಕಿ ಹಚ್ಚಲಾಗುತ್ತದೆ. ನಂತರ ಇದನ್ನು ಕೆಂಡ ಮಾಡಿ, ಗುಡ್ಡೆ ಹಾಕಲಾಗುತ್ತದೆ.

ಕೆಂಡವನ್ನು ತಲೆ ಮೇಲೆ ಸುರಿದುಕೊಳ್ಳುವ
ಅರ್ಚಕ:
ಬಂಡಿ, ಸತ್ತಿಗೆ, ಸೂರಿಪಾನಿಗಳಿಂದ ಅಲಂಕೃತವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ
ಕೊಳಗವನ್ನು ಕೈಯಲ್ಲೇ ಹಿಡಿದುಕೊಂಡು ಬರುವ ಊರುಕಾತೇಶ್ವರಿ ದೇವಿಯ ಅರ್ಚಕರಿಗೆ ಮಡಿಯನ್ನು ಹಾಸಿ ಕೊಂಡದ ಬೆಂಕಿಗೆಯ ಕಡೆಗೆ ಕರೆ ತರಲಾಗುತ್ತದೆ.
 
ನಂತರ ನೆರೆದಿದ್ದ ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಬೆಂಕಿಯ ಗುಡ್ಡೆಗೆ ಪ್ರದಕ್ಷಿಣೆ ಹಾಕುವ ಅರ್ಚಕ ತಲೆ
ಮೇಲೆ ವಸ್ತ್ರವನ್ನು ಹಾಕಿ ಕೆಂಡವನ್ನು ಮೊಗೆದು ತನ್ನ ತಲೆ ಮೇಲೆ ಸುರಿದುಕೊಳ್ಳುವ ಸಂಪ್ರದಾಯವನ್ನು ಸಾಂಗವಾಗಿ ನೆರವೇರಿಸಿದರು. ಇದಾದ ಮೇಲೆ ಹಕರೆ ಹೊತ್ತ ಕೆಲ ಭಕ್ತರು ಕೊಂಡದ ಬೆಂಕಿಯನ್ನು ತುಳಿದು ತಮ್ಮ ಭಕ್ತಿ ಮೆರೆದರು.

ಹರಕೆ ತೀರಿಸಿದ ಭಕ್ತರು: ಕೊಂಡಕ್ಕೆ ಆಗಮಿಸಿದ್ದ ಭಕ್ತರು ದೀವಟಿಗೆಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿ ಅದನ್ನು
ದೇವಸ್ಥಾನಕ್ಕೆ ಅರ್ಪಿಸಿ, ಕೊಂಡದ ನಂತರದ ಬೂದಿಯನ್ನು ಹಣೆಗೆ ಹಚ್ಚಿಕೊಳ್ಳುವ ಮೂಲಕ ಭಕ್ತಿ ಮೆರೆದರು.
 
ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾದ ಭಕ್ತರು: ರಾಜ್ಯದಲ್ಲೇ ವಿಶೇಷವಾಗಿ ನಡೆಯುವ ಈ ಕೊಂಡೋತ್ಸವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಸಾಕ್ಷಿಯಾದರು. ಇಡೀ ದೇಗುಲದ ಜನಜಂಗುಳಿ ನರೆದಿತ್ತು.  

Advertisement
Advertisement

Udayavani is now on Telegram. Click here to join our channel and stay updated with the latest news.

Next