Advertisement

ಮುಸ್ಲಿಂ ವೈಯಕ್ತಿಕ ಕಾನೂನು ಸರ್ಜರಿಗೆ ಸಿದ್ಧತೆ

06:00 AM Jul 26, 2018 | Team Udayavani |

ಹೊಸದಿಲ್ಲಿ: ನಿಖಾಹ್‌ ಹಲಾಲಾ, ತ್ರಿವಳಿ ತಲಾಖ್‌ ನಿಷೇಧದ ಬಗ್ಗೆ ಚರ್ಚೆಗಳು ನಡೆದಿರುವಂತೆಯೇ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸಮುದಾಯದಲ್ಲಿನ ಕಾನೂನುಗಳಲ್ಲಿ ಬದಲು ಮಾಡಲು ಸಿದ್ಧ ಎಂದು ಹೇಳಿ ಕೊಂಡಿದೆ. ಹೀಗಾಗಿ ಜು.31ರಂದು ಮಂಡಳಿ ಪ್ರಮುಖರು ಕಾನೂನು ಆಯೋಗದ ಜತೆ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭ ಸಮುದಾಯದ ಕಾನೂನುಗಳ ಕ್ರೋಡೀಕರಣಕ್ಕೆ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳನ್ನು ಉಲ್ಲೇಖೀಸಿ  “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ದೇಶದಲ್ಲಿ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿ ತರಲು ಸಾಧ್ಯವೇ ಎಂಬ ಬಗ್ಗೆ ಕಾನೂನು ಆಯೋಗ ದೇಶದ ಹಲವು ಭಾಗಗಳಲ್ಲಿ ಸಮಾಲೋಚನೆ ನಡೆಸು ತ್ತಿರುವ ಸಂದರ್ಭದಲ್ಲಿಯೇ ಎಐಎಂಪಿಎಲ್‌ಬಿ ಈ ನಿರ್ಧಾರ ತೆಳೆ ದಿರುವುದು ಪ್ರಮುಖವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next