Advertisement
ಕದ್ರಿ ಪಾರ್ಕ್‌ನಲ್ಲಿ ಈ ಬಾರಿ ಜ. 24ರಿಂದ 26ರ ವರೆಗೆ ಫಲ ಪುಷ್ಪ ಪ್ರದರ್ಶನ ಆಯೋಜಿಸಲಾಗಿತ್ತು. ಪಾರ್ಕ್ ಪ್ರವೇಶಕ್ಕೆ ಮಕ್ಕಳಿಗೆ 10 ರೂ. ಮತ್ತು ವಯಸ್ಕರಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. ಜ. 24ರಂದು ಒಟ್ಟು 3114 ಮಂದಿ ಆಗಮಿಸಿ 60,140 ರೂ., ಜ. 25ರಂದು 9,582 ಮಂದಿ ಆಗಮಿಸಿ 1,80,580 ರೂ. ಮತ್ತು ಜ. 26ರಂದು 18,693 ಮಂದಿ ಆಗಮಿಸಿ 3,43,640 ರೂ. ಹಣ ಸಂಗ್ರವಾಗಿತ್ತು. ಒಟ್ಟು 31,389 ಮಂದಿ ಆಗಮಿಸಿ, 5,84,360 ರೂ. ಹಣ ಸಂಗ್ರವಾಗಿದೆ.
ಕಡಿಮೆ ಆದಾಯ ಸಂಗ್ರಹ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 62,930 ರೂ. ಆದಾಯ ಕಡಿಮೆ ಸಂಗ್ರಹವಾಗಿದೆ. ಈ ಬಾರಿ ನಗರದ ವಿವಿಧ ಶಾಲೆಗಳಿಂದ ಅನೇಕ ಮಂದಿ ವಿದ್ಯಾರ್ಥಿಗಳು ಫಲ ಪುಷ್ಪ ಪ್ರದರ್ಶನ ವೀಕ್ಷಣೆಗ ಆಗಮಿಸಿದ್ದರು. ಶಾಲೆಗಳಿಂದ ಸಮವಸ್ತ್ರ ಧರಿಸಿ ಬಂದ ಶಾಲಾ ಮಕ್ಕಳಿಗೆ, ಅಂಗವಿಕಲರಿಗೆ, ಭಿನ್ನ ಸಾರ್ಮಥ್ಯದ ಮಕ್ಕಳಿಗೆ ಪಾರ್ಕ್‌ನ ಒಳಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು.
Related Articles
ಈ ಬಾರಿಯ ಫಲ ಪುಷ್ಪ ಪ್ರದರ್ಶನದಲ್ಲಿ ಒಟ್ಟು 105 ಸ್ಟಾಲ್‌ಗಳಿದ್ದವು. ಅವುಗಳಲ್ಲಿ ಸರಕಾರಿ ಮತ್ತು ಸಂಘ ಸಂಸ್ಥೆಗಳ ಸ್ಟಾಲ್‌ಗಳಿಗೆ ಉಚಿತ ದರವಾಗಿತ್ತು. ಸ್ವಸಹಾಯ ಸಂಘಗಳ ಸ್ಟಾಲ್‌ಗಳಿಗೆ 1,000 ರೂ. ನಿಗದಿ ಮತ್ತು ವಾಣಿಜ್ಯ ಸ್ಟಾಲ್‌ಗಳಿಗೆ 5,000 ರೂ. ಬಾಡಿಗೆ ನಿಗದಿಯಾಗಿತ್ತು. ಒಟ್ಟು 105 ಸ್ಟಾಲ್‌ಗಳಲ್ಲಿ 15 ಉಚಿತ ಸ್ಟಾಲ್‌ಗಳಾಗಿದ್ದು, ಒಟ್ಟು 3.25 ಲಕ್ಷ ರೂ. ಸಂಗ್ರಹವಾಗಿದೆ. ಇನ್ನು, ಒಟ್ಟು 8 ನರ್ಸರಿಗಳಲ್ಲಿ 1.10 ಲಕ್ಷ ರೂ. ಸಂಗ್ರಹವಾಗಿದೆ.
Advertisement
ಆದಾಯದಲ್ಲಿ ಸ್ವಲ್ಪ ಇಳಿಮುಖಈ ವರ್ಷ ಕದ್ರಿ ಪಾರ್ಕ್‌ನಲ್ಲಿ ಆಯೋಜಿಸಿದ ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟು 31,389 ಮಂದಿ ಆಗಮಿಸಿದ್ದು, ಸುಮಾರು 5.84 ಲಕ್ಷ ರೂ. ಆದಾಯ ಸಂಗ್ರವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಆದಾಯದಲ್ಲಿ ಸ್ವಲ್ಪ ಇಳಿಮುಖವಾಗಿದೆ.
- ಜಾನಕಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕಿ