Advertisement

ಹೊಸ ಉತ್ಪನ್ನ ಪೇಟೆಂಟ್‌ ನೋಂದಣಿಗೆ ವಿಂಡೋ ತೆರೆಯಿರಿ

11:08 AM Jul 23, 2018 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯಲ್ಲಿ ಉದ್ಯಮಿಗಳ ಹಿತರಕ್ಷಣೆಗಾಗಿ ಉದ್ಯಮಿಗಳು ಸಂಶೋಧನೆ ಮಾಡಿದ ಅಥವಾ ನೂತನವಾಗಿ ಮಾರುಕಟ್ಟೆಗೆ ತಂದ ವಸ್ತುಗಳನ್ನು ಮಾರಾಟ ಮಾಡಲು ತಮ್ಮದೇ ಆದ ಹಕ್ಕು ಇರುವಂತೆ ಕಾಪಾಡಲು ಪೇಟೆಂಟ್‌ ನೋಂದಣಿ ವಿಂಡೋ ತೆರೆಯುವಂತೆ ಅಂಡಗಿ ಅಸೋಸಿಯೆಟ್ಸ್‌ ವ್ಯವಸ್ಥಾಪಕ ನಿರ್ದೇಶಕ ಶಿವರಾಜ ಅಂಡಗಿ ಎಚ್‌ಕೆಸಿಸಿಐ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ನೋಂದಣಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಕಲ್ಕತ್ತಾ, ಮದ್ರಾಸ್‌, ಬಾಂಬೆ ಅಥವಾ ದಿಲ್ಲಿ ಗಳಂತಹ ಮೆಟ್ರೋ ಪಾಲಿಥಿನ್‌ ಸಿಟಿಗೆ ಹೋಗಿ ನೋಂದಣಿ ಮಾಡುವ ಅನಿವಾರ್ಯತೆಯಿದೆ. ಸಣ್ಣ ವ್ಯಾಪಾರಿ ತನ್ನ ವ್ಯಾಪಾರ ಕ್ಷೇತ್ರದಲ್ಲಿ ಏನಾದರೂ ಹೊಸದನ್ನು ಕಂಡುಹಿಡಿದರೆ ಅವರಿಗೆ ಆ ವಸ್ತುವಿನ ಮೇಲೆ ಪೇಟೆಂಟ್‌ ನೋಂದಣಿ ಮಾಡಿಸಲು ಆರ್ಥಿಕ ತೊಂದರೆ ಅನುಭವಿಸಬೇಕಾದಂತ ಪರಿಸ್ಥಿತಿ ಇದೆ. ಹೀಗಾಗಿ ಈ ಕುರಿತು ಸರಕಾರಕ್ಕೆ ಬರೆದು ಪೇಟೆಂಟ್‌ ನೋಂದಣಿ ಮಾಡಲು ವಿಂಡೋ ತೆರೆದು ವ್ಯಾಪಾರಿ, ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಎಚ್‌ ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಹಾಗೂ ಇತರ ಪದಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮೂರು ವರ್ಷಗಳ ಹಿಂದೆ ಬಸವ ಕಲ್ಯಾಣದಲ್ಲಿ ನಮ್ಮ ತನು ಬಿಲ್ಡರ್ತ ಯಾರಿಸಿದ ಫಿಕಾಸ್ಟ್‌ ಸಿಮೆಂಟ್‌ ಕಾಂಕ್ರೆಂಟ್‌
ಪೆನಲ್‌ದಿಂದ ತಯಾರಿಸಿದ ಹಸಿರು ಶೌಚಾಲಯ ಬೀದರ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ ಸ್ವತ್ಛ ಭಾರತ ಮಿಷನ್‌ ಅಡಿಯಲ್ಲಿ ಗ್ರಾಪಂ ವತಿಯಿಂದ ಅನೇಕ ಹಳ್ಳಿಗಳಲ್ಲಿ ನಿರ್ಮಿಸಿದ ಕೆಲವೇ ದಿನಗಳಲ್ಲಿ ತಮ್ಮದೆ ತರಹದ ಪೆನಲ್‌ಗ‌ಳು ತಯಾರಾಗಿದ್ದವು. ಹೀಗಾಗಿ ಪೇಟೆಂಟ್‌ ನೋಂದಣಿ ವಿಂಡೋ ಮಾಡುವುದು ಅತೀ ಅವಶ್ಯಕವಿದೆ ಎಂದು ಮನವರಿಕೆಯನ್ನು ತನು ಬಿಲ್ಡರ್ ಇಂಜಿನಿಯರ್‌ ವಿಶ್ವನಾಥ ಸಿರಗಾಪುರ ಮಾಡಿದರು.

ಎಚ್‌ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ, ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ ಹಾಗೂ ಪದಾಧಿ ಕಾರಿಗಳಾದ ಚನ್ನಮಲ್ಲಿಕಾರ್ಜುನ ಅಕ್ಕಿ, ಸುಭಾಷ ಮಂಗಾಣೆ, ಶಿವರಾಜ ಇಂಗಿನಶೆಟ್ಟಿ, ಸುನೀಲ ಮಚೆಟ್ಟಿ, ಚನ್ನಬಸಯ್ಯ ನಂದಿಕೂಲ, ರವಿಕುಮಾರ ಸರಸಂಬಿ, ನ್ಯಾಯವಾದಿ ವಿನೋದಕುಮಾರ ಜನೆವರಿ ಮುಂತಾದವರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next