Advertisement

ನೌಕರರ ಜಿಲ್ಲಾ ಕ್ರೀಡಾಕೂಟಕ್ಕೆ ತೆರೆ

03:22 PM Mar 19, 2022 | Team Udayavani |

ಬೀದರ: ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ನೌಕರರ ಸಂಭ್ರಮದ ನಡುವೆ ತೆರೆ ಕಂಡಿತು.

Advertisement

ಎರಡು ದಿನಗಳ ಕ್ರೀಡಾಕೂಟದಲ್ಲಿ ನೌಕರರು ಒತ್ತಡ ಮುಕ್ತರಾಗಿ ವಿವಿಧ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ನೌಕರರನ್ನು ಪ್ರೋತ್ಸಾಹಿಸಿದರು. ಕ್ರೀಡಾಕೂಟದಲ್ಲಿ ಕಳೆದ ಆನಂದದ ಕ್ಷಣ ಸ್ಮರಿಸುತ್ತ ನೌಕರರು ಮನೆಗಳತ್ತ ಹೆಜ್ಜೆ ಹಾಕಿದರು.

ನಗರದ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಕ್ರೀಡಾಕೂಟ ನೌಕರರು ಕೆಲಸದ ಒತ್ತಡದಿಂದ ಹೊರ ಬರಲು ನೆರವಾಗಿದೆ. ಅವರಿಗೆ ಹೊಸ ಸ್ಫೂ ರ್ತಿ ನೀಡಿದೆ ಎಂದರು.

ಜಿಲ್ಲೆಯ ಸುಮಾರು ಎರಡು ಸಾವಿರ ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಸುಮಾರು 1,500 ನೌಕರರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. 118 ಜನ ನಿರ್ಣಾಯಕರು ಅಚ್ಚುಕಟ್ಟಾಗಿ ನಿರ್ಣಯ ನೀಡಿದರು. ಕುಡಿವ ನೀರು, ಉಪಾಹಾರ, ಊಟ ಮೊದಲಾದ ವ್ಯವಸ್ಥೆಗಳ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಮ್ಮ ಶ್ರಮ ಸಾರ್ಥಕವಾಗಿದೆ ಎಂದು ತಿಳಿಸಿದರು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಪಾರಿತೋಷಕ, ಪದಕ, ಪ್ರಮಾಣಪತ್ರ ವಿತರಿಸಲಾಯಿತು. ಜಿಪಂ ಮುಖ್ಯ ಯೋಜನಾಧಿಕಾರಿ ಶರಣಯ್ಯ ಮಠಪತಿ, ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ, ಡಿವೈಎಸ್ಪಿ ಕೆ.ಎಂ. ಸತೀಶ, ಡಿಡಿಪಿಐ ಗಣಪತಿ ಬಾರಟಕೆ, ಜಿಲ್ಲಾ ಖಜಾನೆ ಉಪ ನಿರ್ದೇಶಕ ರವಿ ಹಕ್ಕಾರಿ, ಡಿಡಿಪಿಯು ಆಂಜನೇಯ ಎಂ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಕುಮಾರ ಗಾಜರೆ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಇನಾಯತ್‌ ಅಲಿ ಶಿಂಧೆ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಮಲ್ಲೇಶ ಬಡಿಗೇರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ನೀಲಕಂಠಪ್ಪ ಎಸ್‌. ಮಾತನಾಡಿದರು.

Advertisement

ಈ ವೇಳೆ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಉಪಾಧ್ಯಕ್ಷರಾದ ಡಾ| ವೈಶಾಲಿ, ಪಾಂಡುರಂಗ ಬೆಲ್ದಾರ್‌, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಕ್ರೀಡಾ ಕಾರ್ಯದರ್ಶಿಗಳಾದ ಸುಮತಿ ರುದ್ರಾ, ಗಣಪತಿ ಜಮಾದಾರ್‌, ಪ್ರಚಾರ ಕಾರ್ಯದರ್ಶಿ ಸಂಜು ಸೂರ್ಯವಂಶಿ, ಪ್ರಮುಖರಾದ ಶಿವರಾಜ ಕಪಲಾಪುರೆ, ರಾಜಪ್ಪ ಪಾಟೀಲ, ಶಿವಕುಮಾರ ಘಾಟೆ, ರಾಜಕುಮಾರ ಬೇಲೂರೆ, ರೂಪಾದೇವಿ, ಸಾವಿತ್ರಮ್ಮ, ದೀಪಾ ಕಿರಣ, ಅಶೋಕ ಮಹಾಲಿಂಗ, ಸತೀಶ ಪಾಟೀಲ, ಮನೋಹರ ಕಾಶಿ, ಸುನೀಲ್‌ ಇದ್ದರು. ಪ್ರೊ| ರಾಜಕುಮಾರ ಹೊಸದೊಡ್ಡೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next