Advertisement
ಕರ್ನಾಟಕ ರಂಗಶಿಕ್ಷಣ ಪದವೀಧರರ ಸಂಘದ ವತಿಯಿಂದ ಗುರುವಾರ ನಗರದ ತರಳಬಾಳು ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳನ್ನು ದೇವಾಲಯಗಳೆಂದು ಕರೆಯುತ್ತಾರೆ. ಆದರೆ, ಇವತ್ತಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಪೈಶಾಚಿಕ ವಿಚಾರಗಳನ್ನು ತಲೆಗೆ ತುಂಬಲಾಗುತ್ತಿದ್ದು, ಸಂಜೆ ವೇಳೆಗೆ ಮಕ್ಕಳು ಶಾಲೆಯಿಂದ ಹೊರಗೆ ಬರುವಾಗ ಜೈಲಿನಿಂದ ಹೊರಗೆ ಬರುವಂತಿರುತ್ತಾರೆ ಎಂದು ತಿಳಿಸಿದರು.
Related Articles
ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಇಂಗ್ಲಿಷ್ ಅಗತ್ಯವಾದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೂ ನ್ಪೋಕನ್ ಇಂಗ್ಲಿಷ್ ತರಬೇತಿ ಕೊಡಿಸಬೇಕೆಂಬ ಚಿಂತನೆ ಸರ್ಕಾರದ ಮುಂದಿದೆಯೇ ಹೊರತು, ಸಂಪೂರ್ಣ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂಬ ಚಿಂತನೆಯಿಲ್ಲ ಹಾಗೂ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸಚಿವ ಎನ್.ಮಹೇಶ್ ಸ್ಪಷ್ಟನೆ ನೀಡಿದರು.
Advertisement
ದೇಶದಲ್ಲಿ ಒಂದು ದೇಶ-ಒಂದು ಕಾನೂನು, ಒಂದು ದೇಶ-ಒಂದು ತೆರಿಗೆ ಎಂಬ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಒಂದು ದೇಶ-ಒಂದು ಶಿಕ್ಷಣ ವ್ಯವಸ್ಥೆ ಎಂಬುದು ಜಾರಿಯಾಗಿಲ್ಲ. ಸಮಾಜದ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾದ ಶಿಕ್ಷಣ ವ್ಯವಸ್ಥೆ ರೂಪಿಸಲಾಗಿದ್ದು, ಬಡವರಿಗೊಂದು ರೀತಿಯ ಶಿಕ್ಷಣ ಹಾಗೂ ಶ್ರೀಮಂತರಿಗೊಂದು ರೀತಿಯ ಶಿಕ್ಷಣ ದೊರೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗೌತಮ ಬುದ್ಧ ಹಾಗೂ ಬಸವಣ್ಣನವರು ಜನರು ಮಾತನಾಡುವ ಭಾಷೆಯಲ್ಲಿ ಬೋಧನೆ ಮಾಡುತ್ತಿದ್ದರು. ಅದೇ ರೀತಿ ಮಕ್ಕಳು ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿತರೆ ಮಾತ್ರ ಅವರಲ್ಲಿ ಜ್ಞಾನ ವಿಕಸನಗೊಂಡು, ಕ್ರಿಯಾಶೀಲ ಚಿಂತನೆ, ಅಭಿವ್ಯಕ್ತಿ ಹಾಗೂ ಸ್ವಸಾಮರ್ಥಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.