Advertisement

ಮೋದಿ ಮಾತ್ರ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಬಹುದು: ಮೆಕ್ಸಿಕೋ

08:26 PM Sep 23, 2022 | Team Udayavani |

ಪಿಟ್ಸ್‌ಬರ್ಗ್: ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿಗಾಗಿ ವಿಶ್ವಸಂಸ್ಥೆಗೆ ಖಾಯಂ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಒಳಗೊಂಡ ಸಮಿತಿಯನ್ನು ಸ್ಥಾಪಿಸಲು ಮೆಕ್ಸಿಕೋ ಪ್ರಸ್ತಾಪಿಸಿದೆ.

Advertisement

ಇದನ್ನೂ ಓದಿ: ಐಸಿಎಂಆರ್ ಮಹಾನಿರ್ದೇಶಕರಾಗಿ ಡಾ.ರಾಜೀವ್ ಬಹ್ಲ್ ನೇಮಕ

ನ್ಯೂಯಾರ್ಕ್‌ನಲ್ಲಿ ಉಕ್ರೇನ್ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚರ್ಚೆಯಲ್ಲಿ ಭಾಗವಹಿಸುತ್ತಿರುವ ಮೆಕ್ಸಿಕೋ ದ ವಿದೇಶಾಂಗ ಸಚಿವ ಮಾರ್ಸೆಲೊ ಲೂಯಿಸ್ ಎಬ್ರಾಡ್ ಕ್ಯಾಸೌಬಾನ್ ಅವರು ಈ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಪ್ರಧಾನಿ ಮೋದಿಯವರ ಪ್ರಯತ್ನವನ್ನು ಶ್ಲಾಘಿಸಿ ಅವರ ಮಧ್ಯಸ್ಥಿಕೆಯ ಮೂಲಕ ನಡೆಯುತ್ತಿರುವ ಯುದ್ಧವು ಕೊನೆಗೊಳ್ಳಬಹುದು ಎಂದು ಆಶಿಸಿದರು.

ಉಜ್ಬೇಕಿಸ್ತಾನ್‌ನ ಸಮರ್‌ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ 22 ನೇ ಸಭೆಯ ನೇಪಥ್ಯದಲ್ಲಿ ಪುಟಿನ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಅವರು ರಷ್ಯಾದ ನಾಯಕನಿಗೆ “ಇಂದಿನ ಯುಗ ಯುದ್ಧದ್ದಲ್ಲ” ಎಂದು ಹೇಳಿದ ಕೆಲವು ದಿನಗಳ ನಂತರ ಈ ಪ್ರಸ್ತಾಪ ಬಂದಿದೆ.

ಇದು ಪ್ರಧಾನಿ ನರೇಂದ್ರ ಮೋದಿಯವರ ಅಂತಾರಾಷ್ಟ್ರೀಯ ಮಟ್ಟದ ನಾಯಕತ್ವದ ಬೆಳವಣಿಗೆಗೆ ಮತ್ತೊಂದು ಪುರಾವೆಯಾಗಿ ಕಂಡು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next