ದಾವಣಗೆರೆ: ಭಾಷಾವಾರು ಪ್ರಾಂತ್ಯಗಳಾದ ಮೇಲೆ ನಮ್ಮ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಬೇರೆ ಯಾವ ಭಾಷೆಯೂ ಪ್ರಾಮುಖ್ಯವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾತ್ರಿ ದೆಹಲಿಗೆ ಹೊರಟಿದ್ದೇನೆ. ಮುಖ್ಯಮಂತ್ರಿಗಳು ಹಾಗೂ ಮುಖ್ಯನ್ಯಾಯಾಧೀಶರ ಕಾನ್ಫರೆನ್ಸ್ ಇದೆ. ನಾಡಿದ್ದು ಬೆಳಗ್ಗೆ ಬೆಂಗಳೂರಿಗೆ ಬರುತ್ತಿದ್ದೇನೆ, ಹೀಗಾಗಿ ಸಚಿವ ಸಂಪುಟದ ಬಗ್ಗೆ ಚರ್ಚಿಸುವ ಅವಕಾಶ ಬಹಳ ಕಡಿಮೆ ಎಂದರು.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿದ ಅವರು, ಪಿಎಸ್ಐ ಅಕ್ರಮ ನೇಮಕಾತಿ ಕಂಡು ಹಿಡಿದು ಸಿಐಡಿ ತನಿಖೆಗೆ ಕೊಟ್ಟವರೇ ನಾವು. ನೇಮಕಾತಿಯಲ್ಲಿ ಸ್ವಲ್ಪ ಅನುಮಾನ ಬಂದಾಗ ಪ್ರಾಥಮಿಕ ತನಿಖೆ ಮಾಡಿ ಆ ಮೇಲೆ ಸಿಐಡಿ ತನಿಖೆ ಮಾಡಿಸುತ್ತಿದ್ದೇವೆ. ಈಗ ತನಿಖೆ ಪ್ರಕರಣದ ಬುಡಕ್ಕೆ ಹೋಗುತ್ತಿದ್ದು, ಯಾರೇ ಇರಲಿ ಎಷ್ಟೇ ಪ್ರಭಾವಿತ ವ್ಯಕ್ತಿಗಳು ಅವರಿಗೆ ಬೆಂಬಲ ಕೊಟ್ಟಿದ್ಸರೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ. ಯುಪಿಎಸ್ ಮಾದರಿಯಲ್ಲಿ ಪರೀಕ್ಷೆ ನಡೆಸುತ್ತಾ ಬಂದಿದ್ದೇವೆ. ಕೆಲವರು ರಂಗೋಲಿ ಕೆಳಗೆ ನುಸುಳುವ ಪ್ರವೃತ್ತಿ ಹೊಂದಿದ್ದಾರೆ. ಅವರನ್ನು ನಾವು ಕಂಡು ಹಿಡಿದಿದ್ದು ನಮ್ಮ ಸರ್ಕಾರದಿಂದಲೇ ತನಿಖೆ ಮಾಡಿಸುತ್ತಿದ್ದೇವೆ. ನಮಗೆ ಯಾವುದೇ ರೀತಿಯ ಅವ್ಯವಹಾರಗಳ ನೇಮಕಾತಿ ನಡೆಯುವುದು ಬೇಕಾಗಿಲ್ಲ. ಎಲ್ಲೇ ಇದ್ದರೂ ಕೂಡಾ ಅವರನ್ನು ಸದೆ ಬಡೆಯಲಾಗುವುದು ಎಂದರು.
ಇದನ್ನೂ ಓದಿ:ಭಾರತವನ್ನು ವಿಶ್ವದ ಸೆಮಿಕಂಡಕ್ಟರ್ ಹಬ್ ಮಾಡುವ ಗುರಿ : ಪ್ರಧಾನಿ ಮೋದಿ
ಈಗಾಗಲೇ ರಾಗಿಯನ್ನು 2 ಲಕ್ಷ ಟನ್ ಖರೀದಿ ಮಾಡಿದ್ದೇವೆ. ಮತ್ತೇ ನಾನೇ 1.14 ಲಕ್ಷ ಟನ್ ಹೆಚ್ಚು ಕೊಟ್ಟಿದ್ದೇನೆ. ಇನ್ನೂ ಮೂರ್ನಾಲ್ಕು ಜಿಲ್ಲೆಯಲ್ಲಿ ಇನ್ನಷ್ಟು ಹೆಚ್ಚಿಗೆ ಬೇಡಿಕೆ ಇದೆ. ಆದ್ದರಿಂದ ಈ ಬಗ್ಗೆ ಕೇಂದ್ರ ಆಹಾರ ಸಚಿವರ ಜೊತೆ ಮಾತನಾಡಿದ್ದು ಅವರು ನಾಳೆ ಬರಲು ತಿಳಿಸಿದ್ದಾರೆ. ಇನ್ನು 2 ಲಕ್ಷ ಮೆಟ್ರಿಕ್ ಟನ್ ಹೆಚ್ಚಿಗೆ ಕೊಡಬೇಕು ಎನ್ನುವ ಕುರಿತು ನಾವು ಆಗಲೇ ತೀರ್ಮಾನ ಮಾಡಿ ಅವರಿಗೆ ಹೇಳಿದ್ದೇವೆ. ನಾಳೆ ಬಂದ ತಕ್ಷಣವೇ ನಮ್ಮ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಹೇಳುತ್ತೇವೆ ಎಂದು ತಿಳಿಸಿದ್ದಾರೆ. ಬಹುತೇಕ ಅವರಿಂದ ಅನುಮತಿ ಪಡೆದು 2 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡುತ್ತೇವೆ ಎಂದು ಹೇಳಿದರು.