Advertisement

4 ವಾರಗಳು ಮಾತ್ರ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ: ಸುಧಾಕರ್

07:36 PM Feb 03, 2021 | Team Udayavani |

ಬೆಂಗಳೂರು:  ನಾಲ್ಕು ವಾರಗಳ ಮಟ್ಟಿಗೆ ಮಾತ್ರ 100% ಪ್ರೇಕ್ಷಕರಿಗೆ  ಸಿನಿಮಾ ವೀಕ್ಷಣೆ ಮಾಡಲು ಅವಕಾಶ ನೀಡಲಾಗುವುದು. ಈ ನಾಲ್ಕು ವಾರದಲ್ಲಿ ಸೊಂಕು‌  ಹೆಚ್ಳವಾದರೆ, ಮಾರ್ಗಸೂಚಿಯಲ್ಲಿ ಬದಲಾವಣೆ ತರಲಾಗುವುದು. ಸದ್ಯ ಕಠಿಣ ಷರತ್ತು ಮೂಲಕ ಅವಕಾಶ ನೀಡಲಾಗಿದೆ.  ನಾಳೆ (ಫೆ.4) ನಮ್ಮ ಅಧಿಕಾರಿಗಳು ಈ ಬಗ್ಗೆ ಮಾರ್ಗಸೂಚಿ ಪ್ರಕಟಿಸುತ್ತಾರೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

Advertisement

ಕನ್ನಡ ಚಲನಚಿತ್ರ ಮಂದಿರಗಳಲ್ಲಿ ಶೇಕಡಾ 100ರಷ್ಟು ಪ್ರವೇಶಾವಕಾಶ ನೀಡುವ ಸಂಬಂಧ ಸಮ್ಮೇಳನ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಸಿ.ಸಿ. ಪಾಟೀಲ್ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಜಂಟಿ‌ ಪತ್ರಿಕಾಗೋಷ್ಠಿ ನಡೆಸಿದರು. ಈ‌ ಸಂದರ್ಭದಲ್ಲಿ ನಟ ಶಿವರಾಜಕುಮಾರ್, ಚಲನಚಿತ್ರ ಮಂಡಳಿ ಅಧ್ಯಕ್ಷ ಶ್ರೀ ಜಯರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸಚಿವ ಸಿಸಿ ಪಾಟೀಲ್ ಮಾತನಾಡಿ, ನಾಳೆ ಸಂಜೆಯೊಳಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಹೊರಡಿಸಲಾಗುತ್ತದೆ. ಶುಕ್ರವಾರದಿಂದ 100% ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಗುವುದು. ನಾವು ಸಹ ಒಂದು ವರ್ಷದಿಂದ ಚಿತ್ರಮಂದಿರಕ್ಕೆ ಕಾಲಿಟ್ಟಿಲ್ಲ. ಅದಷ್ಟು ಬೇಗ ಶಿವರಾಜ್ ಕುಮಾರ್ ಚಿತ್ರ ಬರಲಿ. ನಾವು ಚಿತ್ರ ಮಂದಿರಕ್ಕೆ ಹೋಗಿ ಚಿತ್ರ ವೀಕ್ಷಣೆ ಮಾಡುತ್ತೇವೆ ಎಂದು ಸಭೆಯಲ್ಲಿ ಚಿತ್ರೋದ್ಯಮಕ್ಕೆ ಸಿ.ಸಿ ಪಾಟೀಲ್ ಶುಭ ಹಾರೈಸಿದರು.

ನಂತರ ಮಾತನಾಡಿದ ನಟ ಶಿವರಾಜ್ ಕುಮಾರ್, ಸಭೆಯ ಆರಂಭದಲ್ಲಿ ನಾವು ಸಹ ಮಾತುಕತೆ ನಡೆಸಿದ್ದೆವು.  ಯಾವ ಕಾರಣಕ್ಕಾಗಿ 50% ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ನಾವೂ ಕೂಡ 100% ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ಕುರಿತು ಮಾಹಿತಿ ನೀಡಿದೆವು.  ಕೊನೆಗೆ ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ನೀಡಲಾಗಿದೆ. ಮುಂದಿನ ದಿನದಲ್ಲಿ ಯಾವುದೇ ತೊಂದರೆ ಬಾರದಂತೆ  ನಾವು ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next