Advertisement

ಲಾಸಲ್ಗಾಂವ್‌ನಲ್ಲಿ ಆನ್‌ಲೈನ್‌ ವಹಿವಾಟು: ಈರುಳ್ಳಿಗೆ ಇ- ಮಾರ್ಕೆಟ್‌

08:15 AM Feb 08, 2018 | |

ನವದೆಹಲಿ: ಬೆಂಬಲ ಬೆಲೆ ಇಲ್ಲದೆ ಸೊರಗುವ ಈರುಳ್ಳಿಯನ್ನು ಆನ್‌ಲೈನ್‌ನಲ್ಲೂ ಮಾರಾಟ ಮಾಡುವ ಟ್ರೆಂಡ್‌ ಶುರುವಾದ ಬೆನ್ನಲ್ಲೇ ಇದೀಗ ದೇಶದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಕೂಡ ಆನ್‌ಲೈನ್‌ ಪ್ರವೇಶಿಸುತ್ತಿದೆ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಯನ್ನು ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡಿದೆ.

Advertisement

ಏಷ್ಯಾದಲ್ಲಿಯೇ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಎನಿಸಿಕೊಂಡಿರುವ ಮಹಾರಾಷ್ಟ್ರದ ಲಾಸಲ್ಗಾಂವ್‌ ಎಪಿಎಂಸಿ ಮಹಾರಾಷ್ಟ್ರ ಸರ್ಕಾರ ಹಾಗೂ ವಿಶ್ವ ಬ್ಯಾಂಕ್‌ ನೆರವಿನೊಂದಿಗೆ ಈ ಪ್ರಯತ್ನಕ್ಕೆ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಶೀಘ್ರದಲ್ಲಿಯೇ ಆಲ್‌ಲೈನ್‌ ವಹಿವಾಟು ಆರಂಭಿಸಲಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ವಿಶ್ವ ಬ್ಯಾಂಕ್‌ ಜತೆ ಕೈಜೋಡಿಸಿ ಜಾರಿಗೆ ತರಲಾದ “ಮಹಾರಾಷ್ಟ್ರ ಸ್ಪರ್ಧಾತ್ಮಕ ಕೃಷಿ ಯೋಜನೆ (ಎಂಎಸಿಪಿ) ಅಡಿಯಲ್ಲಿ ಇಂಥದ್ದೊಂದು ಅಗತ್ಯ ಯೋಜನೆಗೆ ಚಾಲನೆ ನೀಡಲಾಗಿದೆ.

ಎಂಎಸಿಪಿ ಯೋಜನೆ ಅಡಿಯಲ್ಲಿ ಲಾಸಲ್ಗಾಂವ್‌ ಎಪಿಎಂಸಿ ಒಂದು ಕೋಟಿ ರೂ.ನಷ್ಟು ಅನುದಾನ ಪಡೆದು  ಪೂರ್ಣ ಪ್ರಮಾಣದ ಅನುದಾನ ಪಡೆದುಕೊಂಡಿರುವ ನಾಸಿಕ್‌ ಜಿಲ್ಲೆಯ ಮೊದಲ ಎಪಿಎಂಸಿ ಎನ್ನುವ ಹೆಗ್ಗಳಿಕೆಯೂ ಇದಕ್ಕೆ ಸಂದೆ. ಟೆಂಡರ್‌ನ ಪ್ರತಿಯೊಂದು ಪ್ರಕ್ರಿಯೆ ಆನ್‌ಲೈನ್‌ನಲ್ಲಿಯೇ ನಡೆಯಲಿದೆ.  ಈಗಾಗಲೇ ಪರೀಕ್ಷಾರ್ಥ ಪ್ರಕ್ರಿಯೆಯನ್ನೂ ಆರಂಭಿಸಿದೆ. ಮಹಾರಾಷ್ಟ್ರದ 30ಕ್ಕೂ ಹೆಚ್ಚು ಎಪಿಎಂಸಿಗಳಲ್ಲಿ ಈಗಾಗಲೇ ಎಲೆಕ್ಟ್ರಾನಿಕ್‌ ವ್ಯವಸ್ಥೆ ಜಾರಿಯಲ್ಲಿದ್ದು, ಪ್ರತಿ ಮಂಡಿಯೂ ಕೇಂದ್ರ ಸರ್ಕಾರದಿಂದ ಈಗಾಗಲೇ ಇದಕ್ಕಾಗಿ ತಲಾ 30 ಲಕ್ಷ ರೂ. ಅನುದಾನ ಪಡೆದುಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next