Advertisement
ಆನ್‌ಲೈನ್ ಪಾಠದ ಕುರಿತು ಸರಕಾರ ರಚಿಸಿದ್ದ ಸಮಿತಿಯ ಸದಸ್ಯರು 10 ಶಿಫಾರಸುಗಳನ್ನು ಒಳಗೊಂಡ ತಂತ್ರಜ್ಞಾನ ಆಧಾರಿತ ಶಿಕ್ಷಣ ವರದಿಯನ್ನು ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
Related Articles
ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳ ಆರಂಭಕ್ಕೆ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿದೆ. ಗ್ರಾಮೀಣ ಅಥವಾ ನಗರ, ಜನದಟ್ಟಣೆ ಅಥವಾ ವಿರಳ ಜನದಟ್ಟಣೆ ಶಾಲೆಗಳು ಮತ್ತು ಶಾಲೆಗಳು ಕಾರ್ಯನಿರ್ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನಗಳನ್ನು (ಎಸ್‌ಒಪಿ) ಅಭಿವೃದ್ಧಿಪಡಿಸಬೇಕು ಎಂದು ಶಿಫಾರಸು ಮಾಡಿದೆ.
Advertisement
ಸಿಬಿಎಸ್‌ಇ ಪಠ್ಯಕ್ರಮ ಕಡಿತಹೊಸದಿಲ್ಲಿಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 9ರಿಂದ 12ನೇ ತರಗತಿಯ ಪಠ್ಯಕ್ರಮವನ್ನು ಶೇ. 30ರಷ್ಟು ಕಡಿತಗೊಳಿಸುವುದಾಗಿ ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ. ಕೇವಲ ಆನ್‌ಲೈನ್‌ನಲ್ಲೇ ತರಗತಿಗಳು ಮುಂದುವರಿದರೆ, 2021ರ ಮಂಡಳಿ ಪರೀಕ್ಷೆಗಳ ಹೊತ್ತಿಗೆ ಪಠ್ಯಕ್ರಮ ಪೂರ್ಣಗೊಳ್ಳುವುದೋ ಇಲ್ಲವೋ ಎಂಬ ಆತಂಕ ಇತ್ತು. ಹಾಗಾಗಿ ಎಷ್ಟು ಬೇಕೋ ಅಷ್ಟು ಪಠ್ಯಕ್ರಮವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಶೇ. 30ರಷ್ಟು ಪಠ್ಯವನ್ನು ಇಳಿಸಲಾಗಿದೆ. ಇದರಿಂದ ನಿಗದಿತ ಸಮಯದಲ್ಲಿ ಪಠ್ಯಕ್ರಮ ಪೂರ್ಣಗೊಳಿಸಲು ಇದು ಸಹಕಾರಿಯಾಗಲಿದೆ ಎಂದು ಪೋಖ್ರಿಯಾಲ್ ತಿಳಿಸಿದ್ದಾರೆ. ಮಾರ್ಗಸೂಚಿ
– ಆನ್‌ಲೈನ್ ತರಗತಿಯ ಸ್ಕ್ರೀನ್ ಸಮಯ ಗರಿಷ್ಠ 30 ನಿಮಿಷ (6ರಿಂದ ಅನಂತರದ ತರಗತಿಗಳಿಗೆ ಹೆಚ್ಚುವರಿ 15 ನಿಮಿಷ). – ವಯಸ್ಸಿನ ಪ್ರಕಾರ ದಿನಕ್ಕೆ ಗರಿಷ್ಠ 1ರಿಂದ 4 ಪೀರಿಯಡ್. – ಎಲ್ಲ ತರಗತಿಗಳಿಗೂ ಸ್ಕ್ರೀನ್ ಸಮಯ ಪಾಲಿಸಿ, ಗರಿಷ್ಠ ಮಿತಿ ಹೆಚ್ಚದಂತೆ ನಡೆಸಬೇಕು. – 2ನೇ ತರಗತಿವರೆಗೆ ಆನ್‌ಲೈನ್ ತರಗತಿಯಲ್ಲಿ ಹೆತ್ತವರು /ಪೋಷಕರ ಉಪಸ್ಥಿತಿ ಕಡ್ಡಾಯ. – ಸಿಂಕ್ರೋನಸ್ (ನೇರ ಪ್ರಸಾರದ ಆನ್‌ಲೈನ್ ತರಗತಿ) ಮತ್ತು ಅಸಿಂಕ್ರೋನಸ್ (ಪೂರ್ವ ಮುದ್ರಿತ ಪಠ್ಯಗಳ ಮೂಲಕ) ಕಲಿಕೆಗೆ ಅನುಮತಿ ನೀಡಿದೆ. – ಮಕ್ಕಳು ಅಥವಾ ಹೆತ್ತವರು, ಪೋಷಕರು ನೇರ ಪ್ರಸಾರದ ತರಗತಿಗೆ ಹಾಜರಾಗಲು ಸಾಧ್ಯವಾಗದೆ ಇದ್ದಲ್ಲಿ ಒತ್ತಾಯ ಮಾಡ ಬಾರದು, ನೇರ ಪ್ರಸಾರ ತರಗತಿಗೆ ಸೈಬರ್ ಸುರಕ್ಷೆ ಒದಗಿಸಬೇಕು. ಪ್ರಮುಖ ಶಿಫಾರಸುಗಳು
– ಶಿಕ್ಷಣದಲ್ಲಿ ತಂತ್ರಜ್ಞಾನ ಬಳಸಿದ್ದರಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. – ವಯಸ್ಸಿಗೆ ಅನುಗುಣವಾದ ಕಲಿಕೆ ವಿಧಾನ ಬಳಸಬೇಕು. – ಕೋವಿಡ್-19 ಸಂದರ್ಭವನ್ನು ಗಮನದಲ್ಲಿ ಇರಿಸಿಕೊಂಡು, ಪಠ್ಯಕ್ರಮದ ಉದ್ದೇಶವನ್ನು ಪರಿಷ್ಕರಿಸಬೇಕಾಗಿದೆ. ನಿಗದಿತ ಪಠ್ಯವಸ್ತುವನ್ನು ಇರುವ ಹಾಗೆಯೇ ಬೋಧಿಸಬಾರದು. ಪ್ರತೀ ಶಾಲೆಯು ಪರ್ಯಾಯ ಶೈಕ್ಷಣಿಕ ಪಠ್ಯಕ್ರಮ ಕ್ಯಾಲೆಂಡರ್ ರಚಿಸಬೇಕು. – ಕಲಿಕಾ ಕೌಶಲದೊಂದಿಗೆ ಸಕ್ರಿಯವಾದ ಕಲಿಕಾ ನಿಯೋಗಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕು. – ವಿಶೇಷ ಅಗತ್ಯವಿರುವ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಬೇಕು. – ಪ್ರತೀ ಮಗುವಿಗೆ ಶಿಕ್ಷಣ ದೊರೆಯಬೇಕು. ಅವೈಜ್ಞಾನಿಕ ಆನ್‌ಲೈನ್ ಬೋಧನೆಯನ್ನು ತಪ್ಪಿಸಲು ಸರಕಾರ ರಚಿಸಿದ್ದ ತಜ್ಞರ ಸಮಿತಿ ವರದಿ ನೀಡಿದೆ. ಸಮಿತಿಯು ಮಕ್ಕಳ ಹಿತದೃಷ್ಟಿಯಿಂದ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದೆ. ಮಕ್ಕಳು ತಂತ್ರಜ್ಞಾನ ಆಧಾರಿತ ಶಿಕ್ಷಣದಿಂದ ವಂಚಿತರಾಗದಂತೆ ಯಾವ ಉಪಕ್ರಮಗಳನ್ನು ಉಪಯೋಗಿಸಿ ಕಲಿಕೆ ಮುಂದುವರಿಸಬಹುದು ಎಂಬುದನ್ನು ವರದಿ ತಿಳಿಸಿದೆ.
– ಎಸ್. ಸುರೇಶ್ ಕುಮಾರ್, ಶಿಕ್ಷಣ ಸಚಿವರು