Advertisement

ಟೆಕ್ಕಿಗಳ ಪ್ರಯತ್ನಕ್ಕೆ ಆನ್‌ಲೈನ್‌ ಸಪೋರ್ಟ್‌

12:30 PM Dec 02, 2021 | Team Udayavani |

ಬಹುತೇಕ ಐಟಿ ಮತ್ತು ಇಂಜಿನಿಯರಿಂಗ್‌ ಹಿನ್ನೆಲೆಯ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಕಾನ್ಸಿಲಿಯಂ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಸದ್ಯ ಬಿಡುಗಡೆಯಾಗಿರುವ “ಕಾನ್ಸಿಲಿಯಂ’ ಟೀಸರ್‌ ಸೋಶಿಯಲ್‌ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಟೀಸರ್‌ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ.

Advertisement

ಅದರಲ್ಲೂ “ಕಾನ್ಸಿಲಿಯಂ’ ಟೀಸರ್‌ ಐಟಿ ಮತ್ತು ಇಂಜಿನಿಯರಿಂಗ್‌ ಮಂದಿಯನ್ನು ಹೆಚ್ಚಾಗಿ ಸೆಳೆಯುತ್ತಿದ್ದು, ಹೊಸಬರ ಪ್ರಯತ್ನಕ್ಕೆ ಐಟಿ ವಲಯದಿಂದಲೂ ಮೆಚ್ಚುಗೆ-ಬೆಂಬಲ ವ್ಯಕ್ತವಾಗುತ್ತಿದೆ. ಸುಮಾರು ಒಂದು ದಶಕದಿಂದ ಸಾಫ್ಟ್ ವೇರ್‌ ಕ್ಷೇತ್ರದಲ್ಲಿ ಇಂಜಿನಿಯರ್‌ ಆಗಿ ಕೆಲಸ ಮಾಡಿದ ಅನುಭವವಿರುವ ಸಮರ್ಥ್ “ಕಾನ್ಸಿಲಿಯಂ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವುದರ ಜೊತೆಗೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ.

ಉಳಿದಂತೆ ಪ್ರೀತಂ, ಅರ್ಚನಾ ಲಕ್ಷ್ಮೀನರ ಸಿಂಹ ಸ್ವಾಮಿ, ಖುಷಿ ಆಚಾರ್‌, ಜಗದೀಶ್‌ ಮಲ್ನಾಡ್‌ ಮೊದಲಾದವರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ
ಅಭಿನಯಿಸಿದ್ದಾರೆ. ಸದ್ಯ “ಕಾನ್ಸಿಲಿಯಂ’ ಟೀಸರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡುವ ನಟ ಕಂ ನಿರ್ದೇಶಕ ಸಮರ್ಥ್, “ನಮ್ಮ ಸಿನಿಮಾದ ಟೀಸರ್‌ಗೆ ಇಷ್ಟೊಂದು ದೊಡ್ಡ ರೆಸ್ಪಾನ್ಸ್‌ ಸಿಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಅದರಲ್ಲೂ ಸೋಶಿ ಯಲ್‌ ಮೀಡಿಯಾದಲ್ಲಿ ಟೀಸರ್‌ ಗೆ ದೊಡ್ಡ ಮಟ್ಟಿಗೆ ಮೆಚ್ಚುಗೆ ಸಿಗುತ್ತಿದೆ.

ಹೊಸಬರಾ ದರೂ ನಮ್ಮ ಪ್ರಯತ್ನಕ್ಕೆ ಆಡಿಯನ್ಸ್‌ ಕಡೆಯಿಂದ ಸಪೋರ್ಟ್‌ ಸಿಗುತ್ತಿದೆ. ಅನೇಕರು ಸಿನಿಮಾ ಬಿಡುಗಡೆಯ ಬಗ್ಗೆ ಕಾತುರರಾಗಿದ್ದಾರೆ. ಹಾಗಾಗಿ, ಇದೇ ಡಿ. 10ಕ್ಕೆ ಸಿನಿಮಾವನ್ನು ರಿಲೀಸ್‌ ಮಾಡುತ್ತಿದ್ದೇವೆ’ ಎನ್ನುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next