Advertisement

ಆನ್‌ಲೈನ್‌ ಪಾಠದ ಗೊಂದಲ: ನಟ ಶ್ರೀಮುರಳಿ ಸರ್ಕಾರಕ್ಕೆ ಮನವಿ

04:19 AM Jun 06, 2020 | Lakshmi GovindaRaj |

ಕೋವಿಡ್ 19 ಸಂಕಷ್ಟದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದೇ ತಡ, ಶಾಲೆ ಮಕ್ಕಳಿಗೆ ಸರ್ಕಾರ ಆನ್‌ಲೈನ್‌ ಮೂಲಕ ಪಾಠ ಶುರುಮಾಡಿದೆ. ಇದು ನಿಜಕ್ಕೂ ಗೊಂದಲದ ಕ್ಷಣವೇ ಸರಿ. ಇದರಿಂದಾಗಿ ಬಹುತೇಕ ಮಕ್ಕಳು, ಪೋಷಕರು ಆತಂಕದ ಜೊತೆಯಲ್ಲಿ ಗೊಂದಲಕ್ಕೂ ಒಳಗಾಗಿದ್ದಾರೆ. ಕಾರಣ, ಆನ್‌ಲೈನ್‌ ಶಿಕ್ಷಣ ಎಲ್ಲರಿಗೂ ಹೊಸದು. ಇದರಿಂದ ಸಮಸ್ಯೆಯೇ ಹೆಚ್ಚು. ನಗರ, ಪಟ್ಟಣದ ವಿದ್ಯಾರ್ಥಿಗಳಿಗೆ ಯಾವುದೇ ದೊಡ್ಡ ಸಮಸ್ಯೆ ಆಗೋದಿಲ್ಲ.

Advertisement

ಆದರೆ, ಹಳ್ಳಿಗಳಲ್ಲೇ ಇರುವ ಮಕ್ಕಳಿಗಂತೂ ಇದು ತೀರಾ ಕಷ್ಟದ ವಿಷಯ. ಇದರಿಂದ ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ನಟ ಶ್ರೀಮುರಳಿ ಅವರು ಕೂಡ ಮಕ್ಕಳ ಸಮಸ್ಯೆ ಕುರಿತು ಮಾತನಾಡಿದ್ದಾರೆ.‌ ತಮ್ಮ ಮುಖಪುಟ (ಫೇಸ್‌ಬುಕ್‌) ಖಾತೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಿರುವ ಶ್ರೀಮುರಳಿ, ಹಳ್ಳಿಗಳಲ್ಲೇ ಸಾಕಷ್ಟು ವಿದ್ಯಾರ್ಥಿಗಳು ಪದವಿ ಪಡೆಯುವ ಕನಸಿನೊಂದಿಗೆ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಆನ್‌ಲೈನ್‌ ಪಾಠ, ನೆಟ್‌ವರ್ಕ್‌ ಸಮಸ್ಯೆ, ಸತತ 5-6 ಗಂಟೆಗಳ ಕಾಲ ಮೊಬೈಲ್‌ ನೋಡಿ ಪಾಠ ಕಲಿಯುವುದು ನಿಜಕ್ಕೂ ಕಷ್ಟಕರ.

ಸರ್ಕಾರ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು. ಆ ಮೂಲಕ ಅವರಿಗೆ ಮನೋಸ್ಥೈರ್ಯ ತುಂಬಿ ಕೈ ಹಿಡಿಯಬೇಕು ಎಂಬ ಮನವಿಯ ಜೊತೆಗೆ ಎಲ್ಲಾ ವಿದ್ಯಾರ್ಥಿಗಳ ಜೊತೆಗೆ ನಾವಿದ್ದೇವೆ. ಗೊಂದಲಬೇಡ ಎಂದಿದ್ದಾರೆ. ಸದ್ಯಕ್ಕೆ ಆನ್‌ಲೈನ್‌ ಪಾಠಗಳು ಶುರುವಾಗಿವೆ. ಆದರೆ, ಅದರಿಂದ ಹಲವು ಸಮಸ್ಯೆಗಳೇ ಹೆಚ್ಚಾಗಿವೆ. ಮುಂದಿನ ದಿನಗಳಲ್ಲಿ ಆನ್‌ಲೈನ್‌ ಪಾಠಗಳು ನಿಂತು, ಮಕ್ಕಳು ಶಾಲೆಗೆ ಹೋಗುವಂತಾದರೆ, ಅದಕ್ಕಿಂತ ಸಂತಸ ಮತ್ತೂಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next