ಉಡುಪಿ: ಆನ್‌ಲೈನ್ ಉದ್ಯೋಗದ ಆಮಿಷವೊಡ್ಡಿ ವ್ಯಕ್ತಿಯೊರ್ವರಿಗೆ ಲಕ್ಷಾಂತರ ರೂ.ವಂಚಿಸಿದ ಘಟನೆ ನಡೆದಿದೆ.
ಬಾರಕೂರಿನ ಆಸ್ಟಿನ್ ಪ್ರದೀಪ್ ಅಲ್ಮೇಡಾ ಅವರಿಗೆ ಎ.18ರಂದು ಅಪರಿಚಿತ ವ್ಯಕ್ತಿಯೊಬ್ಬರು ಆನ್‌ಲೈನ್ ಉದ್ಯೋಗದ ಬಗ್ಗೆ ಟಾಸ್ಕ್ ಪೂರ್ಣಗೊಳಿಸಿ ಹೆಚ್ಚಿನ ಬೋನಸ್ ಹಣ ಪಡೆಯುವ ಬಗ್ಗೆ ಟೆಲಿಗ್ರಾಮ್‌ನಲ್ಲಿ ಸಂದೇಶ ಕಳುಹಿಸಿದ್ದರು. ಟಾಸ್ಕ್ ಹಣ ಪಾವತಿಸುವಂತೆ ಬ್ಯಾಂಕ್ ಖಾತೆಗಳನ್ನು ನೀಡಿದ್ದು, ಅದರಂತೆ ಆಸ್ಟಿನ್ ಪ್ರದೀಪ್ ಅಲ್ಮೇಡಾ ಖಾತೆಯಿಂದ ಹಂತಹಂತವಾಗಿ 2,70,340 ರೂ.ಗಳನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಉದ್ಯೋಗ ನೀಡದೆ, ಪಡೆದ ಹಣವನ್ನೂ ಹಿಂತಿರುಗಿಸದೆ ವಂಚಿಸಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.