Advertisement

ಬಸವನಾಡಲ್ಲಿ ಆನ್‌ಲೈನ್‌ ವಂಚಕರ ಹಾವಳಿ

07:38 PM Jun 24, 2021 | Girisha |

ತಾಳಿಕೋಟೆ: ಲಾಕಡೌನ್‌ ವೇಳೆ ಕ್ರಿಯಾಶೀಲರಾಗಿರುವ ಸೈಬರ್‌ ಕದೀಮರು ಸಾಮಾಜಿಕ ಜಾಲತಾಣ ನಕಲಿ ಫೇಸ್‌ಬುಕ್‌ ಪ್ರೊಫೈಲ್‌ ಸೃಷ್ಟಿಸಿ ಸಂಬಂಧಿಕರಿಗೆ, ಸ್ನೇಹಿತರಿಗೆ ಮೆಸೆಜ್‌ ಮೂಲಕ ತುರ್ತಾಗಿ ಹಣ ಕಳುಹಿಸಿ ಎಂದು ವಂಚಿಸಲು ಯತ್ನಿಸಿರುವ ಪ್ರಕರಣಗಳು ಹೆಚ್ಚಾಗತೊಡಗಿದ್ದು ಆತಂಕಕ್ಕೆ ಕಾರಣವಾಗಿದೆ. ಫೇಸ್‌ಬುಕ್‌ ಖಾತೆಯಲ್ಲಿರುವ ಫೋಟೊ, ಇತರೆ ವಿವರಗಳನ್ನು ನಕಲಿ ಖಾತೆಗೆ ಜೋಡಿಸಿ ಆ ಅಸಲಿ ಖಾತೆಯಲ್ಲಿರುವ ಸಂಬಂಧಿಕರಿಗೆ, ಸ್ನೇಹಿತರ ಒಡನಾಟ ಗುರುತಿಸಿ ಮೆಸೇಜ್‌ ಮೂಲಕ ತುರ್ತಾಗಿ ಹಣವನ್ನು ಆನ್‌ಲೈನ್‌ ಮೂಲಕ ವರ್ಗಾವಣೆಗೆ ಯತ್ನಿಸುತ್ತಿದ್ದಾರೆ.

Advertisement

ಇನ್ನೂ ಕೆಲ ವಂಚಕರು ಫೋನ್‌ಪೇ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಸೈಬರ್‌ ಕದೀಮರು ಮುದ್ದೇಬಿಹಾಳ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ), ಅವರ ಪತ್ನಿ ಮಹಾದೇವಿ ಹೆಸರಿನಲ್ಲಿ, ಪೊಲೀಸ್‌ ಅ ಧಿಕಾರಿ ಎಸ್‌. ಎಚ್‌. ಪವಾರ ಅಲ್ಲದೇ ಪತ್ರಕರ್ತರು, ಶಿಕ್ಷಕರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಆನ್‌ಲೈನ್‌ ಮೂಲಕ ಹಣ ವರ್ಗಾಯಿಸಿ ಎಂದು ಮನವಿ ಮಾಡಿ ವಂಚನೆಗೆ ಯತ್ನಿಸಿದ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಕಲಿ ಖಾತೆ ಸೃಷ್ಟಿಯಾಗಿದ್ದು ಕಂಡಕೆಲವರು ಯಾರೂ ಹಣ ಹಾಕಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಶಾಸಕ ನಡಹಳ್ಳಿ ದಂಪತಿ ಹೆಸರಿನಲ್ಲಿ ನಕಲಿ ಫೇಸ್‌ ಬುಕ್‌ ಖಾತೆ ಸೃಷ್ಟಿಸಿ 10ರಿಂದ 20 ಸಾವಿರ ರೂ.ವರೆಗೆ ತುರ್ತಾಗಿ ಹಣಕ್ಕೆ ಮನವಿ ಮಾಡುತ್ತಿದ್ದಾರೆ. ಪತ್ರಕರ್ತರ ಹೆಸರಲ್ಲೂ ನಕಲಿ ಖಾತೆ ಸೃಷ್ಟಿಸಿ ಹಣ ಬೇಡಿಕೆಯ ಮನವಿ ಮಾಡುತ್ತಿದ್ದಾರಲ್ಲದೇ, ಮರುದಿನ ನಿಮ್ಮ ಖಾತೆ ಮರಳಿಸುತ್ತೇನೆ ಸಂಕಷ್ಟದಲ್ಲಿದ್ದೇನೆ ಕೊಡಿ ಎಂಬ ಬೇಡಿಕೆ ಸಂದೇಶಗಳ ಕಥೆಗಳನ್ನು ಕಟ್ಟುತ್ತಿದ್ದಾರೆ. ಆಸ್ಪತ್ರೆ ನೆಪದ ಮೇಲೆ ಬೇಡಿಕೆ: ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸುವ ಮುನ್ನಾ ಫೇಸ್‌ಬುಕ್‌ ಖಾತೆದಾರನ ಬಗ್ಗೆ ಎಲ್ಲ ಅರಿತುಕೊಂಡು ನಾನು ಆಸ್ಪತ್ರೆಯಲ್ಲಿದ್ದೇನೆ, ಸಂಬಂಧಿಕರಿಗೆ ಹಣದ ಅವಶ್ಯಕತೆ ಬಿದ್ದಿದೆ. ಇನ್ನೂ ನಾಲ್ಕು ದಿನ ಆಸ್ಪತ್ರೆಯಲ್ಲಿರಬೇಕು. ಬಂದ ನಂತರ ಹಣ ಕೊಡುತ್ತೇನೆ.

ಲಾಕ್‌ಡೌನ್‌ ಕಾರಣ ವಾಹನ ಸೌಕರ್ಯವಿಲ್ಲ, ಅರ್ಜೆಂಟಾಗಿ ಹಣ ಹಾಕು ಎಂಬ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಇದನ್ನು ನೋಡಿದ ಕೆಲವು ಗೆಳೆಯರು ಫೇಸ್‌ಬುಕ್‌ ಖಾತೆದಾರನಿಗೆ ಫೋನ್‌ ಮಾಡಿ ಕೇಳಿದ್ದಾಗ ನಕಲಿ ಖಾತೆ ಸೃಷ್ಟಿಯಾಗಿರುವ ಮಾಹಿತಿಗಳು ಹೊರ ಬಿಳತೊಡಗಿದೆ. ದೂರು ನೀಡಿ: ತಮ್ಮ ಫೇಸ್‌ಬುಕ್‌ ಖಾತೆ ನಕಲಿ ಸೃಷ್ಟಿಯಾಗಿದೆ. ನಿಮ್ಮ ಹೆಸರಿನ ಮೇಲೆ ಹಣಕ್ಕೆ ಬೇಡಿಕೆ ಇಡುತ್ತಿರುವುದು ಗಮನಕ್ಕೆ ಬಂದ ತಕ್ಷಣ ಯುಆರ್‌ ಎಲ್‌ ಲಿಂಕ್‌ ಮೂಲಕ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದರೆ ತನಿಖೆ ಮಾಡಲು ಸಹಕಾರಿಯಾಗಲಿದೆ ಎಂಬುದು ತಜ್ಞರ ಮಾಹಿತಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next