Advertisement

Sirsi; ನ್ಯಾಯಾಧೀಶರ ಖಾತೆಯಿಂದಲೇ ಹಣ ಲಪಟಾಯಿಸಿದ ಆನ್‌ಲೈನ್ ವಂಚಕರು

03:53 PM Aug 02, 2023 | Team Udayavani |

 

Advertisement

ಶಿರಸಿ: ಆನ್‌ಲೈನ್ ವಂಚನೆಕೋರರು ಶಿರಸಿಯ ನ್ಯಾಯಾಲಯದ ನ್ಯಾಯಾಧೀಶರ ಖಾತೆಯಿಂದಲೇ ಹಣ ಲಪಟಾಯಿಸಿದ ಕುರಿತು ನಗರದ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಸ್‌ಬಿಐ ಬ್ಯಾಂಕ್ ನವರು ಎಂದು ನ್ಯಾಯಾಧೀಶರ ಮೊಬೈಲ್ ಗೆ ಒಟಿಪಿ ಕೇಳಿ1,23,514 ರೂ. ಎಗರಿಸಿದ್ದಾರೆ. ನ್ಯಾಯಾಧೀಶರಾದ ರಮಾನಂದ ಕಿಣಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆನ್ ಲೈನ್ ವಂಚನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ವಿದ್ಯಾವಂತರೇ ಹೆಚ್ಚಾಗಿ ವಂಚಕರ ಜಾಲಕ್ಕೆ ಸಿಲುಕುತ್ತಿದ್ದಾರೆ. ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next