Advertisement

ಬ್ಯಾಂಕ್ ಆನ್ ಲೈನ್ ವಂಚನೆಗೆ ಬ್ರೇಕ್ ಹಾಕಲು ದೆಹಲಿ ಪೊಲೀಸರ ಹೊಸ ಕ್ರಮ..! ಇಲ್ಲಿದೆ ಮಾಹಿತಿ.

11:20 AM Apr 16, 2021 | Team Udayavani |

ನವದೆಹಲಿ: ದಿನ ನಿತ್ಯ  ಆನ್‌ಲೈನ್ ಬ್ಯಾಂಕ್ ವಂಚಕರ ಸಂಖ್ಯೆ ಹೆಚ್ಚಾಗುತ್ತಿದೆ.  ಸೈಬರ್ ಅಪರಾಧಿಗಳು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ವಂಚನೆ ಮಾಡುತ್ತಿದ್ದಾರೆ, ಎಚ್ಚರಿಕೆಯಿಂದಿರಿ ಎಂದು ಅನೇಕ ರಾಷ್ಟ್ರೀಯ ಬ್ಯಾಂಕ್ ಗಳು ಈಗಾಗಲೇ ಮನವಿ ಮಾಡಿಕೊಂಡಿವೆ.

Advertisement

ಈ ಹಿನ್ನಲೆಯಲ್ಲಿ ಆನ್ ಲೈನ್ ವಂಚಕರ ಜಾಲವನ್ನು ಪತ್ತೆ ಹಚ್ಚಲು ದೆಹಲಿ ಪೊಲೀಸರು ಆನ್‌ ಲೈನ್ ಬ್ಯಾಂಕ್ ವಂಚನೆಗೆ ಒಳಗಾದವರಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆಯೊಂದನ್ನು ನೀಡಿದೆ.  ಈ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ದೂರು ನೀಡಿದ ಕೆಲವೇ ನಿಮಿಷಗಳಲ್ಲಿ ವಂಚಕರಿಂದ ಹಣವನ್ನ  ಖಾತೆಗೆ ಹಿಂತಿರುಗಿಸಲಾಗುತ್ತದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಓದಿ : ಬೆಂಕಿಯಲ್ಲಿ ಅರಳಿದ ಹೂವು: ಬಡತನ, ಕಷ್ಟಗಳ ಮಧ್ಯೆ ಸಾಧನೆ ಮಾಡಿದ ಚೇತನ್ ಸಕಾರಿಯಾ

ಇನ್ನು, ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರೀತಿಯ ಸೈಬರ್ ಅಪರಾಧಗಳಿಗೆ ಸಹಾಯವಾಣಿ ಸಂಖ್ಯೆ 155260 ಅನ್ನು ನಿರ್ವಹಿಸುತ್ತದೆ.

ಕಳೆದ ವರ್ಷ ನವೆಂಬರ್‌ನಲ್ಲಿ ದೆಹಲಿ ಪೊಲೀಸರ ಸೈಬರ್ ಸೆಲ್ ಕೇಂದ್ರ ಗೃಹ ಸಚಿವಾಲಯದ ಸಹಯೋಗದೊಂದಿಗೆ ಈ ಸಹಾಯವಾಣಿ ಸಂಖ್ಯೆಯನ್ನು ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಕೆಲಸ ಮಾಡಲು ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಿತ್ತು.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಸೈಬರ್ ಸೆಲ್ ನ ಉಪ ಪೊಲೀಸ್ ಆಯುಕ್ತ ಅನೇಶ್ ರಾಯ್, ಈ ಸಹಾಯವಾಣಿ ಮೂಲಕ ಸುಮಾರು 8.11 ಲಕ್ಷ ರೂಪಾಯಿಗಳನ್ನು 23 ಜನರಿಗೆ ಹಿಂದಿರುಗಿಸಲಾಗಿದೆ. ಇದರಲ್ಲಿ ದೊಡ್ಡ ಮೊತ್ತವೆಂದರೆ ದೆಹಲಿ ಮೂಲದ ನಿವೃತ್ತ ಲೆಕ್ಕಪರಿಶೋಧಕ ಖಾತೆ ಅಧಿಕಾರಿಯೊಬ್ಬರ 98,000 ರೂಪಾಯಿಗಳ ವಂಚನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸಹಾಯವಾಣಿ ಸಂಖ್ಯೆ 155260 ನನ್ನು ಕೇಂದ್ರ ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್ ನೀಡಿದೆ. ನಿಮ್ಮ ಖಾತೆಯನ್ನು ಖಾತೆ ಅಥವಾ ಐಡಿಗೆ ವರ್ಗಾಯಿಸಲಾಗಿದೆ ಎಂದು ವಿವರಿಸಿ. ಸರ್ಕಾರದ 155260 ಸಹಾಯವಾಣಿಯಿಂದ ಎಚ್ಚರಿಕೆ ಸಂದೇಶವನ್ನು ಆ ಬ್ಯಾಂಕ್ ಅಥವಾ ಇ-ಸೈಟ್‌ ಗೆ ಕಳುಹಿಸಲಾಗುತ್ತದೆ. ಆಗ ನಿಮ್ಮ ಹಣ ವಾಪಾಸ್ ಆಗುತ್ತದೆ.

ನಿಮ್ಮ ಖಾತೆ ಆನ್ ಲೈನ್ ವಂಚಕರಿಂದ ಹ್ಯಾಕ್ ಆಗಿದ್ದರೇ ಅಥವಾ ಅವರಿಂದ ನೀವು ವಂಚನೆಗೆ ಒಳಗಾಗಿದ್ದರೇ, ಮೊದಲು ನೀವು ಸಹಾಯವಾಣಿ ಸಂಖ್ಯೆ 155260 ನನ್ನು ಡಯಲ್ ಮಾಡಬೇಕು.

ನಂತರ, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಬಗ್ಗೆ ಮಾಹಿತಿಯನ್ನು ಪ್ರಾಥಮಿಕ ವಿಚಾರಣೆಯಾಗಿ ಪಡೆಯಲಾಗುತ್ತದೆ. ಮುಂದಿನ ಕ್ರಮಕ್ಕಾಗಿ ನಿಮ್ಮ ಮಾಹಿತಿಯನ್ನು ಪೋರ್ಟಲ್‌ಗೆ ಕಳುಹಿಸುತ್ತದೆ. ನಂತರ ವಂಚನೆಯ ಬಗ್ಗೆ ಸಂಬಂಧಪಟ್ಟ ಬ್ಯಾಂಕ್‌ ಗೆ ತಿಳಿಸಲಾಗುವುದು. ಮಾಹಿತಿಯನ್ನು ಪರಿಶೀಲಿಸಿದ ನಂತರ, ತನಿಖೆ ನಡೆಸಲಾಗುತ್ತದೆ. ನಂತರ ನಿಮ್ಮ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.

ಓದಿ : ಮುಂಬೈಯಲ್ಲಿ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ತಯಾರಿಕೆಗೆ ಕೇಂದ್ರದ ಗ್ರೀನ್ ಸಿಗ್ನಲ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next