Advertisement
ಔಷಧ ಆನ್‌ಲೈನ್ ವ್ಯಾಪಾರದಿಂದ ಅಧಿಕೃತ ಔಷಧ ವ್ಯಾಪಾರಸ್ಥರು ಸಮಸ್ಯೆಗೆ ಸಿಲುಕಿದ್ದಾರೆ. ಡಿ-ಫಾರ್ಮ್ಪ ದವೀಧರನಾಗಿ ಔಷಧ ವ್ಯಾಪಾರಿ ಆಗಿರುವ ನನಗೆ ಪ್ರಸಕ್ತ ಸಂದರ್ಭದಲ್ಲಿ ಔಷಧ ವ್ಯಾಪಾರಿಗಳು ಅನುಭವಿಸುತ್ತಿರುವ ಎಲ್ಲ ಸಮಸ್ಯೆಗಳ ಅರಿವಿದೆ. ಈ ವಿಷಯದಲ್ಲಿ ಔಷಧ ವ್ಯಾಪಾರಿಗಳೆಲ್ಲ ಸಂಘಟಿತವಾಗಿ ಹೋರಾಟಕ್ಕೆ ಅಣಿಯಾಗಬೇಕು. ಆಗಲೇ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲು ಸಾಧ್ಯವಿದ್ದು, ನಿಮ್ಮ ಹೋರಾಟಕ್ಕೆ ನಾನು ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.ಈಚೆಗೆ ವೈದ್ಯರು ತಮ್ಮ ನರ್ಸಿಂಗ್ ಹೋಂಗಳಲ್ಲೇ ಸ್ವಂತ ಔಷಧ ಅಂಗಡಿ, ಪ್ರಯೋಗಾಲಯ ಕೂಡ ತೆರೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಔಷಧ ವ್ಯಾಪಾರ ಹಾಗೂ ಪ್ರಯೋಗಾಲಯದ ಮಾಲೀಕರು ನಿರುದ್ಯೋಗಿಗಳಾಗಿ ಭವಿಷ್ಯದ ಜೀವನಕ್ಕೆ ಸಂಕಟ ಪಡುವಂತಾಗಿದೆ ಎಂಬ ಸಮಸ್ಯೆ ಅರಿವು ನನಗಿದೆ ಎಂದರು. ಜನ ಸಾಮಾನ್ಯರಲ್ಲಿ ಔಷಧ ವ್ಯಾಪಾರಿಗಳಲ್ಲಿ ಅಪಾರ ವಿಶ್ವಾಸಾರ್ಹತೆ ಇದ್ದು, ಸಣ್ಣ ಆರೋಗ್ಯ ಸಮಸ್ಯೆಗೂ ಜನರು ತಕ್ಷಣ ಬರುವುದೇ ಔಷಧ ಅಂಗಡಿಗೆ. ವೈದ್ಯರು ಇಲ್ಲದ ಸಂದರ್ಭದಲ್ಲಿ ಔಷಧ ವ್ಯಾಪಾರಿಗಳೇ ಪ್ರಥಮ ಚಿಕಿತ್ಸಕರಂತೆ ಕೆಲಸ ಮಾಡುತ್ತಿದ್ದಾರೆ. ಇದು ಜನರು ಔಷಧ ವ್ಯಾಪಾರಸ್ಥರ ಮೇಲೆ ಇರಿಸಿರುವ ಅಪಾರ ನಂಬಿಕೆಯ ಒಂದು ನಿದರ್ಶನ. ಆನ್‌ಲೈನ್ ಔಷಧ ವ್ಯಾಪಾರದಿಂದ ಈ ಎಲ್ಲ ನೈಜ ಬಾಂಧವ್ಯಗಳಿಗೆ ಧಕ್ಕೆ ಉಂಟಾಗಿದೆ ಎಂದರು.