Advertisement

ಗೋರಕ್ಷಕರ ಕಾಟ: ಆನ್‌ಲೈನ್‌ನಲ್ಲಿನ್ನು ಗೋಮಾತೆ!

03:45 AM Apr 22, 2017 | |

ಜೈಪುರ: ರಾಜಸ್ಥಾನ ಅಳ್ವಾರ್‌ನಲ್ಲಿ ಕೆಲದಿನಗಳ ಹಿಂದೆ ಅಕ್ರಮವಾಗಿ ದನ ಸಾಗಿಸುತ್ತಿದ್ದಾನೆಂದು ವ್ಯಕ್ತಿಯನ್ನು ಥಳಿಸಿ ಸಾಯಿಸಲಾಗಿತ್ತು. ಹೀಗಾಗಿ ಸಾಕಲೆಂದು ಹಸು ಸಾಗಿಸುವವರು ಗೋರಕ್ಷಕರು ನೀಡುವ ಕಾಟಕ್ಕೆ ಬೇಸತ್ತ ರಾಜಸ್ಥಾನದ ಜಾನುವಾರು ವ್ಯಾಪಾರಿಗಳು ಈಗ ಆನ್‌ಲೈನ್‌ ವೇದಿಕೆಯ ಮೊರೆ ಹೋಗಿದ್ದಾರೆ.  ಗ್ರಾಹಕರು ಮುಂಗಡವಾಗಿ ಹಣ ಕೊಟ್ಟರೆ ಹಸುಗಳನ್ನು ಸುರಕ್ಷಿತವಾಗಿ ಅವರ ಮನೆಗೆ ತಲುಪಿಸುವ ಭರವಸೆಯನ್ನು ವ್ಯಪಾರಿಗಳು ನೀಡುತ್ತಿದ್ದಾರೆ.

Advertisement

ಕೆಲ ವೆಬ್‌ಸೈಟ್‌ಗಳಲ್ಲಿ ಹಸುಗಳು ಆನ್‌ಲೈನ್‌ನಲ್ಲಿ ಮಾರಾಟಕ್ಕಿವೆ. ಬೆಲೆ 35ರಿಂದ 50 ಸಾವಿರ ರೂ. ಎಂಬ ಜಾಹೀರಾತುಗಳು ಕಾಣಿಸಿಕೊಂಡಿವೆ. “ಹಸು ಮಾರಾಟ ಮಾಡುವುದು ಎಂದಿಗೂ ಸವಾಲಿನ ವ್ಯವಹಾರವೇ. 

ಉ.ಪ್ರ.ದಲ್ಲಿ  ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಸುಗಳ ವ್ಯಾಪಾರ ತೀರಾ ಕಷ್ಟವಾಗಿದೆ. ಹೀಗಾಗಿ ಆನ್‌ಲೈನ್‌ ವಹಿವಾಟು ಆರಂಭಿಸಿದ್ದೇವೆ. ಹಸು ಕೊಳ್ಳಲಿಚ್ಛಿಸುವ ಗ್ರಾಹಕರು ಅಳ್ವಾರಕ್ಕೆ ಬಂದು ಹಸು ನೋಡಿ, ಕೊಳ್ಳುವ ಮನಸಾದರೆ ಮುಂಗಡವಾಗಿ ಹಣ ಪಾವತಿಸಬೇಕು. ನಂತರ ನಾವು ಅವರ ಸ್ಥಳಕ್ಕೆ ಹಸು ತಲುಪಿಸುತ್ತೇವೆ. ಹಾಲು ಕೊಡುವ ಹಸುಗಳನ್ನು ಮಾತ್ರ ಮಾರಾಟ ಮಾಡುತ್ತೇವೆ ಮತ್ತು ಹಸು ಸಾಗಿಸಲು ಅಗತ್ಯವಿರುವ ಎಲ್ಲ ಅಧಿಕೃತ ನಿಯಮಗಳನ್ನು ಅನುಸರಿಸುತ್ತೇವೆ,’ ಎಂದು  ಸಹಿವಾಲ್‌ ತಳಿಯ ಹಸು ಮಾರಾಟಕ್ಕಿರಿಸಿದ್ದ ಅಳ್ವಾರ್‌ನ ಸತೀಶ್‌ ಯಾದವ್‌ ಹೇಳಿದ್ದಾರೆ . 

Advertisement

Udayavani is now on Telegram. Click here to join our channel and stay updated with the latest news.

Next