Advertisement

ಮಂಗಳೂರು ಮಹಾನಗರ ಪಾಲಿಕೆ : ಜನವರಿಯಿಂದ ಆನ್‌ಲೈನ್‌ ಬಿಲ್‌ ಪಾವತಿ

12:57 PM Dec 20, 2020 | Suhan S |

ಮಹಾನಗರ, ಡಿ. 19: ಬಹುನಿರೀಕ್ಷಿತ ಆನ್‌ಲೈನ್‌ ಬಿಲ್‌ ಪಾವತಿ ವ್ಯವಸ್ಥೆಯು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನವರಿ ತಿಂಗಳಿನಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ಕುರಿತು ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಹೊಸ ವರ್ಷಕ್ಕೆ ಆನ್‌ಲೈನ್‌ ವ್ಯವಸ್ಥೆ ಪರಿಚಯಿಸಲು ಮನಪಾ ಸಿದ್ಧತೆ ಮಾಡಿಕೊಳ್ಳುತ್ತಿದೆ.

Advertisement

ಮೊದಲನೇ ಹಂತದಲ್ಲಿ ನೀರಿನ ಬಿಲ್‌ ಮತ್ತು ಆಸ್ತಿ ತೆರಿಗೆ ಕಟ್ಟಲು ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಾಲಿಕೆಯ ಅಧಿಕೃತ ವೆಬ್‌ಸೈಟ್‌ ಮೂಲಕ ಲಿಂಕ್‌ ಹಾಕಲಾಗುತ್ತದೆ. ಆ ಲಿಂಕ್‌ ಕ್ಲಿಕ್‌ ಮಾಡಿ ಹಣ ಪಾವತಿ ಮಾಡಬಹುದಾಗಿದೆ. ಇದಕ್ಕೆಂದು ಪಾಲಿಕೆ ವೆಬ್‌ಸೈಟ್‌ ರೂಪ ಬದಲಾಗಲಿದೆ. ಸದ್ಯ ಪಾಲಿಕೆ ವೆಬ್‌ಸೈಟ್‌ನಲ್ಲಿ ಕೆಲವೊಂದು ಮಾಹಿತಿ ತಪ್ಪಾಗಿದ್ದು, ಸದ್ಯದಲ್ಲೇ ಹೊಸ ರೂಪದಲ್ಲಿ ವೆಬ್‌ಸೈಟ್‌ ಸಾರ್ವಜನಿಕರಿಗೆ ಸಿಗಲಿದೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಮಹಾನಗರ ಪಾಲಿಕೆ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತಿಳಿಸಲಿದೆ.

ಮಹಾನಗರ ಪಾಲಿಕೆ ಯೋಜನೆಯಂತೆ ಆನ್‌ಲೈನ್‌ ಸೇವೆ ಈಗಾಗಲೇ ಸಾರ್ವಜನಿಕರಿಗೆ ಲಭ್ಯವಾಗಬೇಕಿತ್ತು. ಮೊದಲನೇ ಹಂತದಲ್ಲಿ ತಾಂತ್ರಿ ಕವಾಗಿ ಕೆಲವೊಂದು ಸಮಸ್ಯೆಗಳು ಎದುರಾಗಿದ್ದವು. ಈಗಾಗಲೇ ಫೈಲ್‌ಗ‌ಳಲ್ಲಿ ಬರಹ ರೂಪದಲ್ಲಿರುವ ಕಡತಗಳ ಡಾಟಾ ವರ್ಗಾವಣೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಈ ಹಿಂದೆ ಸಾಫ್ಟ್ವೇರ್‌ ತೊಂದರೆ ಉಂಟಾಗುತ್ತಿತ್ತು. ಇದಕ್ಕೆ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲು ವಿಳಂಬವಾಗಿತ್ತು.

ಟೋಕನ್‌ ವ್ಯವಸ್ಥೆಯೂ ಇರಲಿದೆ :

ಒಂದು ವೇಳೆ ಆಂಡ್ರಾಯ್ಡ ಮೊಬೈಲ್‌ ಅಥವಾ ಅಂತರ್ಜಾಲ ವ್ಯವಸ್ಥೆ ಇಲ್ಲದಿದ್ದರೆ, ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿಯೂ ಬಿಲ್‌ ಕಟ್ಟಲು ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಇದ್ದಂತೆ ಟೋಕನ್‌ ವ್ಯವಸ್ಥೆಯೂ ಜಾರಿಯಲ್ಲಿ ಇರಲಿದ್ದು, ಅದರ ಪ್ರಕಾರ ಆಸ್ತಿ ತೆರಿಗೆ ಮತ್ತು ನೀರಿನ ಬಿಲ್‌ ಪಾವತಿ ಮಾಡಬಹುದಾಗಿದೆ.

Advertisement

ಮಹಾನಗರ ಪಾಲಿಕೆಯಲ್ಲಿ ಬಹು ನಿರೀಕ್ಷಿತ ಆನ್‌ಲೈನ್‌ ವ್ಯವಸ್ಥೆಯು ಜನವರಿ ತಿಂಗಳಿನಿಂದ ಆರಂಭಿಸಲಿದ್ದೇವೆ. ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಬಳಿಕ ಸಾರ್ವಜನಿಕರು ಮನೆಯಲ್ಲೇ ಕೂತು ಆನ್‌ಲೈನ್‌ ಮುಖೇನವೂ ಬಿಲ್‌ ಪಾವತಿ ಮಾಡ ಬಹುದು. ಇದರಿಂದ ಪಾಲಿಕೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಲ್ಲುವ ಕೆಲಸ ತಪ್ಪಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆಯನ್ನು ಆನ್‌ಲೈನ್‌ ವ್ಯವಸ್ಥೆಯಲ್ಲಿ ಜೋಡಿಸುತ್ತೇವೆ. -ಡಾ| ಸಂತೋಷ್‌ ಕುಮಾರ್‌, ಮನಪಾ ಉಪ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.