Advertisement

ಆನ್‌ ಲೈನ್‌ ಅಂಡ್‌ ಲೆಂಗ್ತ್

05:50 PM Feb 05, 2018 | Harsha Rao |

ತಂತ್ರಜಾnನದ ಅಭಿವೃದ್ಧಿಯಿಂದಾಗಿ ನಾವಿಂದು ಮನೆಯಲ್ಲಿ ಕುಳಿತೇ ಎಲ್ಲ ವಹಿವಾಟುಗಳನ್ನು ಮಾಡುವ ಸವಲತ್ತು  ಪಡೆದಿದ್ದೇವೆ. ಇದು ಖುಷಿಯ ಸಂಗತಿಯೇ ಹೌದು. ಆದರೆ ಅಪಾಯಗಳು ಎಲ್ಲೆಲ್ಲೂ ಇರುವುದರಿಂದ  ಮುಂದಾಗಬಹುದಾದ ತೊಂದರೆ ತಾಪತ್ರಯಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಒಂದಷ್ಟು ಜಾಗರೂಕರಾಗಿರುವುದು ಕ್ಷೇಮವಲ್ಲವೇ? ಅದಕ್ಕಾಗಿ ಆನ್‌ ಲೈನ್‌ ವ್ಯವಹಾರದಲ್ಲಿ ತೊಡಗುವವರು ಗಮನಿಸಬೇಕಿರುವ ಬಹುಮುಖ್ಯಾಂಶಗಳು ಇಲ್ಲಿವೆ. 

Advertisement

1.ನೀವು ಬಳಸುವ ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗ್ಳಿಗೆ  ಅಪ್‌ ಡೇಟ್‌ ಆಗಿರುವ ಫೈರ್‌ ವಾಲ್‌ (ಬೆಂಕಿಗೋಡೆ)  ಹಾಕಿಸಿಕೊಳ್ಳಿ. ಹೀಗೆ ಮಾಡಿದರೆ,   ನಿಮ್ಮ ವಹಿವಾಟನ್ನು ಕಳ್ಳಗಣ್ಣಿಂದ ಗಮನಿಸುವವರು, ನಿಮ್ಮ ಖಾತೆಯ ಹಣ ಕಬಳಿಸಲು ಹವಣಿಸುವವರು ಈ ತಡೆಗೋಡೆಯನ್ನು ಬೇಧಿಸಿ ಬರುವುದು ಸಾಧ್ಯವಾಗದು.  ಅನ್ಯಥಾ ನೀವು  ಮಾಡಿದ ವಹಿವಾಟನ್ನು ಪರಾಂಬರಿಸಿ, ನಂತರದಲ್ಲಿ ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್‌ ಹಣ ಎಷ್ಟೆಂದು ತಿಳಿದು ಅದನ್ನು ಅದಾವುದೋ ಅನಾಮಿಕ ಖಾತೆಗೆ ವರ್ಗಾಯಿಸುವ ತಂತ್ರಜಾnನ ಬಲ್ಲ ಕಳ್ಳರು ಹೆಚ್ಚಿದ್ದಾರೆ.

2. ನಿಮ್ಮ ಮನೆಯ ವೈರ್‌ ಲೆಸ್‌ ಅಂತಜಾìಲ ಸಂಪರ್ಕವನ್ನು ಸುರಕ್ಷಿ$ತಗೊಳಿಸಿಕೊಳ್ಳಿ.  ಮಾಹಿತಿ ಅಥವಾ ಅಕ್ಷರರೂಪದ ಸಂಗತಿಗಳನ್ನು ಕೋಡ್‌ ವರ್ಡ್‌ಗಳಾಗಿ ಪರಿವರ್ತಿಸಿಕೊಳ್ಳುವ ಪ್ರಕ್ರಿಯೆಗೆ ಎನ್‌ ಕ್ರಿಪ್ಶನ್‌ ಎಂದು ಕರೆಯುತ್ತಾರೆ.  ಅದನ್ನು ನೀವು ನಿಮ್ಮ ವ್ಯವಸ್ಥೆಯಲ್ಲಿ ಮಾಡಿಕೊಂಡಿದ್ದಲ್ಲಿ ಸುರಕ್ಷಿತವಾಗಿದ್ದೀರಿ ಎಂದರ್ಥ.  

3. ಕೆಲವರಿಗೆ ಪಾಸ್‌ ವರ್ಡ್‌ಗಳ ಆಯ್ಕೆ ಮಾಡಿಕೊಳ್ಳಲು ಬರುವುದಿಲ್ಲ, ನೆನಪಿಟ್ಟುಕೊಳ್ಳಲು ಸುಲಭವಾಗಲೆಂದು ತಮ್ಮ ಹುಟ್ಟಿದ ದಿನಾಂಕ, ತಮ್ಮ ಪ್ರೀತಿಪಾತ್ರರ ಹೆಸರು ಅಥವಾ ತಮ್ಮ ಹುಟ್ಟಿದೂರಿನ ಹೆಸರನ್ನೇ ಪಾಸ್‌ ವಡ್‌ ì ಆಗಿ ಇಟ್ಟುಕೊಂಡಿರುತ್ತಾರೆ. ಇದು ಸರಿಯಲ್ಲ. ನಿಮ್ಮ ಪಾಸ್‌ ವರ್ಡ್‌ ಸ್ಟ್ರಾಂಗ್‌ ಆಗಿದ್ದಷ್ಟೂ ನೀವು ಸುರಕ್ಷಿತ ಎಂಬುದನ್ನು ಮೊದಲು ಮನಗಾಣಬೇಕು. ಬೇರೆ ಬೇರೆ ಬಗೆಯ ಆನ್‌ ಲೈನ್‌ ವಹಿವಾಟುಗಳಿಗೆ ಬೇರೆ ಬೇರೆ ರೀತಿಯ ಪಾಸ್‌ ವರ್ಡ್‌ಗಳನ್ನು ಇಟ್ಟುಕೊಳ್ಳುವುದು ಸೂಕ್ತವಾದ ನಿರ್ಧಾರ. ಎಲ್ಲಾ ಖಾತೆಗಳಿಗೂ ಸಮಾನವಾದ ಒಂದೇ ಪಾಸ್‌ವಡ್‌ ì ಇಟ್ಟುಕೊಳ್ಳುವುದು ಜಾಣತನದ ನಿರ್ಧಾರವಲ್ಲ.  ಒಂದೊಮ್ಮೆ ಯಾವುದಾದರೊಂದು  ಪಾಸ್‌ವಡ್‌ ì ಬೇರೆಯವರಿಂದ ನಕಲಾಗಿ ಹೋದರೂ, ಉಳಿದ ಪಾಸ್‌ವರ್ಡ್‌ ಗಳಲ್ಲಿನ ವ್ಯವಹಾರಕ್ಕೆ ಅಥವಾ ಖಾತೆಗೆ ಧಕ್ಕೆ ಬಾರದು.

4. ನಿಮ್ಮ ಪಾಸ್‌ ವರ್ಡ್‌ ಅನ್ನು ಸುರಕ್ಷಿತವಾಗಿ ನೆನಪಿನಲ್ಲಿ ಇಟ್ಟುಕೊಳ್ಳಿ. ಅದನ್ನು ಎಲ್ಲೂ ಬರೆದಿಡಬೇಡಿ ಹಾಗೂ ಯಾರಾದರೂ ಕರೆ ಮಾಡಿ ನಿಮ್ಮ ಪಿನ್‌ ನಂಬರ್‌, ಪಾಸ್‌ವರ್ಡ್‌ ಹೇಳಿ ಅಂತ ನಿಮ್ಮ ಖಾಸಗಿ ಸಂಗತಿಗಳನ್ನು ಕೇಳಿದರೆ ಯಾರೊಂದಿಗೂ ಹಂಚಿಕೊಳ್ಳಬೇಡಿ. 

Advertisement

5. ಯಾವುದಾದರೂ ಆನ್‌ ಲೈನ್‌ ವಹಿವಾಟು ಮಾಡುವುದಿದ್ದರೆ, ನಿಮಗೆ ಇ.ಮೇಲ್‌ ಮೂಲಕ ಬಂದಿರ ಬಹುದಾದ ಆನ್‌ ಲೈನ್‌ ಕೊಂಡಿಯನ್ನು ನೇರವಾಗಿ ಕ್ಲಿಕ್‌ ಮಾಡಿ ಆ ವೆಬ್‌ಸೈಟಿಗೆ ಪ್ರವೇಶ ಪಡೆಯಬೇಡಿ. ಇದು ಸರಿಯಾದ ಕ್ರಮವಿಲ್ಲ.  ಬದಲಾಗಿ ಆ ವೆಬ್‌ ವಿಳಾಸವನ್ನು ಹೊಸತೊಂದು ಕಿಂಡಿಯಲ್ಲಿ ನೀವೇ ದಾಖಲಿಸಿ ಪ್ರವೇಶ ಪಡೆಯಿರಿ.  ಹೀಗೆ ಲಿಂಕ್‌ ಕ್ಲಿಕ್‌ ಮಾಡಿದಲ್ಲಿ ಆ ಮೂಲಕವಾಗಿ ನಿಮ್ಮ ವ್ಯಕ್ತಿಗತ ಮಾಹಿತಿಗಳನ್ನು ಕದಿಯುವ ತಂತ್ರಗಾರಿಕೆ ಸಾಕಷ್ಟು ಚುರುಕಾಗಿದೆ. 

6. ಸಾಧ್ಯವಾದಷ್ಟೂ ನಿಮ್ಮ ಆನ್‌ ಲೈನ್‌ ವಹಿವಾಟುಗಳಿಗೆ ನಿಮ್ಮ ವೈಯುಕ್ತಿಕ ಕಂಪ್ಯೂಟರ್‌ ಮತ್ತು ವೈಫೈ ಸಂಪರ್ಕವನ್ನು ಬಳಸಿ. ಸಾರ್ವಜನಿಕ ಬಳಕೆಯಲ್ಲಿರುವ, ಸೈಬರ್‌ ಕೆಫೆಯಂಥ ತಾಣಗಳಲ್ಲಿ ಹೋಗಿ ಆನ್‌  ಲೈನ್‌ ವಹಿವಾಟನ್ನು ಮಾಡದಿರಿ. ಹಾಗೇ ಮಾಡಿದಲ್ಲಿ ಸುಲಭವಾಗಿ ನೀವು ನಿಮ್ಮ ವ್ಯಕ್ತಿಗತ ವಿಚಾರಗಳನ್ನು ಬಟಾಬಯಲು ಮಾಡಿದಂತಾಗುತ್ತದೆ.  

7. ಅಪರಿಚಿತ ಕರೆಗಳಿಗೆ, ತಾವ್ಯಾರೋ ಇಲಾಖಾ ಅಧಿಕಾರಿಗಳು ಎಂದು ಹೇಳಿಕೊಳ್ಳುವವರ ಫೋನ್‌ ಕರೆಗಳಿಗೆ, ನಿಮ್ಮ ಖಾಸಗಿ ಸಂಗತಿಗಳನ್ನು ಕೊಡುವಂತೆ ಕೇಳುವ ಇ.ಮೇಲ್‌ಗ‌ಳಿಗೆ ಪ್ರಾಮುಖ್ಯತೆ ಕೊಡದಿರಿ. ನೆನಪಿರಲಿ, ಆರ್‌.ಬಿ.ಐ. ಸೆಬಿ ಅಥವಾ ಇನ್ನಾವುದೇ ಆರ್ಥಿಕ ಸಂಸ್ಥೆಗಳು ತಮ್ಮ ಖಾತೆದಾರರ, ಹೂಡಿಕೆದಾರರ ಖಾಸಗಿ ವಿಮಾ ಮಾಹಿತಿಗಳನ್ನು ಕೇಳುವುದಿಲ್ಲ.

– ನಿರಂಜನ

Advertisement

Udayavani is now on Telegram. Click here to join our channel and stay updated with the latest news.

Next