Advertisement
ಕೆಲವು ದಿನಗಳಿಂದ ಯಶವಂತಪುರ ಮಾರುಕಟ್ಟೆ ಸಹಿತ ರಾಜಧಾನಿಯ ಹಲವು ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಏರಿಕೆ ಆಗುತ್ತಲೇ ಇದೆ. ಶನಿವಾರ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯಾರ್ಡ್‌ನಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕ್ವಿಂಟಾಲ್‌ಗೆ 5,900 ರೂ.ದಿಂದ 6 ಸಾವಿರ ರೂ.ವರೆಗೂ ಮಾರಾಟವಾಗಿದೆ.
Related Articles
Advertisement
315 ಟ್ರಕ್‌ಗಳಲ್ಲಿ ಮಹಾರಾಷ್ಟ್ರ ಈರುಳ್ಳಿ ಪೂರೈಕೆಯಶವಂತಪುರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಾರ್ಡ್‌ಗೆ ಶನಿವಾರ 315 ಟ್ರಕ್‌ಗಳಲ್ಲಿ ಮಹಾರಾಷ್ಟ್ರದಿಂದ ಈರುಳ್ಳಿ ಪೂರೈಕೆ ಆಗಿದೆ. ಹಾಗೆಯೇ ರಾಜ್ಯದ ಇತರ ಕಡೆಗಳಿಂದ 165 ಟ್ರಕ್‌ನಲ್ಲಿ ಈರುಳ್ಳಿ ಪೂರೈಕೆ ಆಗಿದೆ. ಇದರಲ್ಲಿ ಹೊಸ ಈರುಳ್ಳಿ 150 ಟ್ರಕ್ ಸೇರಿದೆ ಎಂದು ಎಪಿಎಂಸಿ ಯಾರ್ಡ್ ವರ್ತಕರ ಸಂಘ ಮಾಹಿತಿ ನೀಡಿದೆ. ಹಳೆ ದಾಸ್ತಾನು ಈರುಳ್ಳಿ ಪ್ರತಿ ಕ್ವಿಂಟಾಲ್‌ಗೆ 5,900-6,000 ರೂ., ದಪ್ಪಗಾತ್ರದ ಈರುಳ್ಳಿ 5,500-5,800 ರೂ., ನಾಸಿಕ್ ಈರುಳ್ಳಿ 5,500-5,700 ರೂ., ನಾಸಿಕ್‌ನ ಸಣ್ಣ ಗಾತ್ರದ ಈರುಳ್ಳಿ 2,500-3,000 ರೂ.ಗೆ ಖರೀದಿ ಆಗಿದೆ.