ನಾಸಿಕ್: ಮಹಾರಾಷ್ಟ್ರದ ಎಪಿಎಂಸಿಯೊಂದರಲ್ಲಿ ಈರುಳ್ಳಿ ಬೆಲೆ ಕೆಜಿಗೆ 4ರೂ.ನಿಂದ 2 ರೂ.ಗೆ ಇಳಿದ ಬಳಿಕ ರೊಚ್ಚಿಗೆದ್ದ ರೈತರು; ಹರಾಜನ್ನೇ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.
ಏಷ್ಯಾದಲ್ಲೇ ಬೃಹತ್ ಈರುಳ್ಳಿ ಮಾರುಕಟ್ಟೆ ಎಂಬ ಹೆಗ್ಗಳಿಕೆ ಲಸಲ್ಗಾಂವ್‌ನ ಈ ಎಪಿಎಂಸಿಗಿದೆ. ಸೋಮವಾರ ಈರುಳ್ಳಿ ಹರಾಜು ಶುರುವಾದ ಕೆಲವೇ ಸಮಯದಲ್ಲಿ ಬೆಲೆಕುಸಿತವಾಗಿದ್ದನ್ನು ನೋಡಿ ರೈತರು ಸಿಟ್ಟಾದರು.
ರೈತರ ಪ್ರತಿನಿಧಿಯೊಬ್ಬರು ಮಾತನಾಡಿ, ಸರ್ಕಾರ ಪ್ರತಿ ಕ್ವಿಂಟಲ್‌ಗೆ 1,500ರೂ. ನೀಡಬೇಕು, ಈರುಳ್ಳಿಯನ್ನು ಪ್ರತೀ ಕೆಜಿಗೆ 15 ರೂ.ನಿಂದ 20 ರೂ. ಬೆಲೆಯಲ್ಲಿ ಖರೀದಿಸಬೇಕು. ಅಲ್ಲಿಯವರೆಗೆ ಹರಾಜು ನಡೆಯುವುದಕ್ಕೆ ಬಿಡುವುದಿಲ್ಲ ಎಂದರು.
ಸೋಮವಾರ ಹರಾಜು ಆರಂಭವಾಗುವ ಹೊತ್ತಿಗೆ ಕ್ವಿಂಟಲ್‌ಗೆ ಬೆಲೆ 200 ರೂ.ಗೆ ಇಳಿದಿತ್ತು. ಅದಕ್ಕೂ ಮುನ್ನ ಅಂದರೆ ಶನಿವಾರ ಕ್ವಿಂಟಾಲ್‌ಗೆ ಸರಾಸರಿ ಬೆಲೆ 625 ರೂ.ಗಳಿತ್ತು.