Advertisement

ಮೋದಿಗೆ ಬಹುಪರಾಕ್ : ಜಮ್ಮುವಿನಲ್ಲಿ ಆಜಾದ್ ವಿರುದ್ಧ ಆಕ್ರೋಶ ..!

06:10 PM Mar 02, 2021 | Team Udayavani |

ಜಮ್ಮು : ಜಮ್ಮು ಕಾಶ್ಮೀರದ ಕಾಂಗ್ರೆಸ್ ಕಾರ್ಯಕರ್ತರು, ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ.

Advertisement

ಹಿರಿಯ ನಾಯಕ ಆಜಾದ್ ಅವರ ಪ್ರತಿಕೃತಿಯನ್ನು ರಚಿಸಿ, ಬೆಂಕಿ ಹಚ್ಚುವುದರ ಮೂಲಕ ಅವರ ವಿರುದ್ಧ ಜಮ್ಮು ಕಾಶ್ಮೀರದ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  ಗುಲಾಮ್ ನಬಿ ಆಜಾದ್ ತಮ್ಮ ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್ ನ್ನು ದೂಷಿಸಿ, ಮೋದಿ ಬಗ್ಗೆ ಹೊಗಳಿ ಮಾತಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಓದಿ : ಸ್ಮಶಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಯುವ ಮುಖಂಡ ಆನಂದ ಪಾಟೀಲ

ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಕರ್ತರೆಲ್ಲರು ಯುವ ಕಾಂಗ್ರೆಸ್ ನವರಾಗಿದ್ದು, ಆಜಾದ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಬೇಕು ಎಂದು ಅವರು ಗುಡುಗಿದ್ದಾರೆ ಎಂದು ವರದಿಯಾಗಿದೆ.

ಜಮ್ಮುವಿನಲ್ಲಿ ಭಾನುವಾರ ಕಾಂಗ್ರೆಸ್ ನ ಹಿರಿಯ ನಾಯಕ ಆಜಾದ್ “ ಪ್ರಧಾನಿ ತಮ್ಮನ್ನು ಚಾಯ್ ವಾಲಾ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ, ಇಷ್ಟು ದೊಡ್ಡ ಹುದ್ದೆಗೆ ಏರಿದ್ದರೂ ಕೂಡ ಅವರು ತಾವು ನಡೆದು ಬಂದ ದಾರಿಯನ್ನು ಮರೆತಿಲ್ಲ. ರಾಜಕೀಯದಲ್ಲಿ ನನಗೂ ಅವರಿಗೂ ಭಿನ್ನಾಭಿಪ್ರಾಯವಿದೆ ಅಷ್ಟೇ. ಅವರು ಅಹಂಕಾರ ಇಲ್ಲದ ಸರಳ ಸಜ್ಜನ ವ್ಯಕ್ತಿ, ಅವರು ಎಲ್ಲರಿಗೂ ಮಾದರಿ” ಎಂದು ಆಜಾದ್ ಜಮ್ಮುವಿನಲ್ಲಿ ಪ್ರಧಾನಿ ಮೋದಿಯನ್ನು ಹೊಗಳಿದ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ರಿತಿಯ ಬೆಳವಣಿಗೆ ನಡೆದಿದೆ. ಆಜಾದ್ ಹೇಳಿಕೆ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿತ್ತು.

Advertisement

ಜಮ್ಮು ಕಾಶ್ಮೀರದ ಕಾಂಗ್ರೆಸ್ ನ ಡಿಸ್ಟ್ರಿಕ್ ಡೆವೆಲ್ಪ್ಮೆಂಟ್ ಕೌನ್ಸಿಲ್ ನ ಸದಸ್ಯ ಹಾಗೂ ಮಾಜಿ ಪ್ರಧಾನ ಕಾರ್ದರ್ಶಿ ಮೊಹಮ್ಮದ್ ಶಹನವಾಜ್ ಚೌಧರಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮ್ಮುವಿನ ಪ್ರೆಸ್ ಕ್ಲಬ್ ನ ಹೊರಗಡೆ ಕಾಂಗ್ರೆಸ್ ಹಿರಿಯ ನಾಯಕ ಆಜಾದ್ ಅವರ ಪ್ರತಿಕೃತಿ ರಚಿಸಿ ಅದಕ್ಕೆ ಬೆಂಕಿ ಹಚ್ಚಿದ್ದಲ್ಲದೇ, ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕಾಂಗ್ರೆಸ್ ಯಾವಾಗಲೂ ಆಜಾದ್ ಅವರಿಗೆ ಉನ್ನತ ಸ್ಥಾನಮಾನ ನೀಡಿದೆ. ಪಕ್ಷಕ್ಕೆ ಎದುರಾದ ಬಿಕ್ಕಟ್ಟಿನ ಸಂದರ್ಭ ಅವರ ಅನುಭವವನ್ನು ಕೂಡ ಕೇಳಿದೆ. ಈಗ ನಮ್ಮ ರಾಜ್ಯತ್ವವನ್ನು ಕಸಿದುಕೊಂಡ ಮೋದಿ ಬಗ್ಗೆ ಜಮ್ಮು ಕಾಶ್ಮೀರದಲ್ಲಿ ಬಂದು ಹೊಗಳಿ, ಕಾಂಗ್ರೆಸ್ ನ್ನು ದುರ್ಬಲಗೊಳಿಸಲು ನೋಡಿದ್ದಾರೆ. ಇದು ಅವರು ವೈಯಕ್ತಿಕ ಲಾಭ ಗಳಿಸುವುದಕ್ಕಾಗಿ ಬಿಜೆಪಿ ಆದೇಶದಂತೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿಸುತ್ತದೆ ಎಂದು ಕಾರ್ಯಕರ್ತರು ಕಿಡಿ ಕಾರಿದ್ದಾರೆ.

ಓದಿ :  ರಾಹುಲ್ ಗಾಂಧಿಯವರ ಬಗ್ಗೆ ಏನು ಹೇಳಬೇಕೋ ನನಗೆ ಅರ್ಥ ಆಗುತ್ತಿಲ್ಲ: ಕೆ.ಎಸ್.ಈಶ್ವರಪ್ಪ

 

 

Advertisement

Udayavani is now on Telegram. Click here to join our channel and stay updated with the latest news.

Next